More

    ಪಡಿತರ ಜತೆಗೆ ಭತ್ಯೆ ನೀಡುವ ಕುರಿತು ನಿಲುವು ತಿಳಿಸಿ – ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

    ಬೆಂಗಳೂರು : ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಬಿಸಿಯೂಟ ಪೂರೈಕೆ ಸ್ಥಗಿತಗೊಳಿಸಿದ್ದಕ್ಕೆ ಅರ್ಹ ಫಲಾನುಭವಿಗಳಿಗೆ ಪಡಿತರ ಜತೆಗೆ ಭತ್ಯೆಯನ್ನೂ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಈ ಕುರಿತು ನಿಲುವು ತಿಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

    ಕರೊನಾ ಸೋಂಕು ನಿಯಂತ್ರಿಸಲು ಲಾಕ್​ಡೌನ್ ಘೊಷಿಸಿದ ಪರಿಣಾಮ ಸಾರ್ವಜನಿಕರಿಗೆ ಉಂಟಾದ ಅನನುಕೂಲತೆಗಳನ್ನು ಪರಿಹರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಪಿಐಎಲ್​ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿತು.

    ಇದನ್ನೂ ಓದಿ:  ಜೀವಸಾರ್ಥಕತೆ ಪೋರ್ಟಲ್​ನಲ್ಲಿ ನೇತ್ರದಾನ ಮಾಡಿ – ಅವಕಾಶ ಕಲ್ಪಿಸಿದ ಆರೋಗ್ಯ ಇಲಾಖೆ

    ಅರ್ಜಿಯ ಹಿಂದಿನ ವಿಚಾರಣೆ ವೇಳೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಅರ್ಹ ಫಲಾನುಭವಿಗಳಿಗೆ ಆಹಾರ ಪದಾರ್ಥ ತಲುಪಿಸಲು ರೂಪಿಸಿರುವ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಸಲ್ಲಿಸಿದ್ದ ಪ್ರಮಾಣಪತ್ರವನ್ನು ಒಪ್ಪದ ಪೀಠ, ಪ್ರಮಾಣಪತ್ರದಲ್ಲಿ ಸಮರ್ಪಕ ಮಾಹಿತಿ ಇಲ್ಲ. ಇಷ್ಟು ದಿನ ನೀಡಿರದ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ಹೇಗೆ ತಲುಪಿಸಲಾಗುತ್ತದೆ, ಆ ವಿಚಾರವನ್ನು ಫಲಾನುಭವಿಗಳ ಗಮನಕ್ಕೆ ಹೇಗೆ ತರಲಾಗುತ್ತದೆ ಎಂಬ ಬಗ್ಗೆ ವಿವರಿಸಲಾಗಿಲ್ಲ. ಆದ್ದರಿಂದ, ಈ ಕುರಿತು ಸ್ಪಷ್ಟ ಮಾಹಿತಿಯೊಂದಿಗೆ ಹೊಸದಾಗಿ ಪ್ರಮಾಣಪತ್ರ ಸಲ್ಲಿಸಬೇಕೆಂದು ಸರ್ಕಾರಕ್ಕೆ ಸೂಚಿಸಿತ್ತು.

    ಇದನ್ನೂ ಓದಿ: Web Exclusive | 18 ಜಿಲ್ಲೆಗಳಲ್ಲಿ ಸಾವಯವ ಕೃಷಿ ಅನುಷ್ಠಾನಕ್ಕೆ ಸಿದ್ಧತೆ; ಪರಂಪರಾಗತ ಕೃಷಿ ವಿಕಾಸ ಯೋಜನೆ ಜಾರಿ

    ಸೋಮವಾರ ಸರ್ಕಾರದ ಪರ ವಕೀಲ ವಿಕ್ರಂ ಹುಯಿಲಗೋಳ್ ಪ್ರಮಾಣಪತ್ರ ಸಲ್ಲಿಸಿ, ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ ಜುಲೈನಿಂದ ಶಾಲಾ ಮಕ್ಕಳಿಗೆ ಬಿಸಿಯೂಟ ಸ್ಥಗಿತಗೊಳಿಸಲಾಗಿತ್ತು. ಆ ಅವಧಿಯ ಪಡಿತರವನ್ನು ಮಕ್ಕಳಿಗೆ ಪೂರೈಸಲಾಗುತ್ತದೆ. ಅದಕ್ಕಾಗಿ ಶಾಲಾ ದಾಖಲಾತಿ ಪುಸ್ತಕ ಹಾಗೂ ಹಾಜರಾತಿ ಪುಸ್ತಕಗಳಿಂದ ವಿದ್ಯಾರ್ಥಿಗಳು ಮತ್ತವರ ಪಾಲಕರ ಮಾಹಿತಿ ಸಂಗ್ರಹಿಸಲಾಗುತ್ತದೆ. ಶಿಕ್ಷಕರು, ಮುಖ್ಯ ಶಿಕ್ಷಕರ ಸಹಾಯದಿಂದ ದೂರವಾಣಿ ಹಾಗೂ ವಾಟ್ಸ್​ಆಪ್ ಮೂಲಕ ಪಾಲಕರನ್ನು ಸಂರ್ಪಸಿ ಆಹಾರ ಧಾನ್ಯ ಪಡೆದುಕೊಳ್ಳುವಂತೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

    ಇದನ್ನೂ ಓದಿ:  ಜೋಕೊವಿಕ್ ಕರೊನಾ ಪಾಸಿಟಿವ್ ಆದಾಗ ಐಪಿಎಲ್ ಆಯೋಜನೆಗೆ ಹಿಂದೇಟು ಹಾಕಿತ್ತು ಬಿಸಿಸಿಐ!

    ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಪೀಠ, ಮಕ್ಕಳಿಗೆ ಸಿಗಬೇಕಿದ್ದ ಆಹಾರ ಸಿಗದಿರುವುದರಿಂದ ಸಂವಿಧಾನದತ್ತವಾಗಿ ಅವರಿಗೆ ಲಭಿಸಿದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಈಗ ಕೇವಲ ಪಡಿತರ ವಿತರಿಸಿದರೆ ಸಾಲದು, ಆಹಾರ ತಯಾರಿಕೆಗೆ ತಗುಲುವ ವೆಚ್ಚವನ್ನೂ ನೀಡಬೇಕಾಗುತ್ತದೆ. ಆದ್ದರಿಂದ, ಪಡಿತರದ ಜತೆಗೆ ಭತ್ಯೆಯನ್ನೂ ನೀಡುವ ಕುರಿತು 1 ವಾರದೊಳಗೆ ನಿಲುವು ತಿಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

    ಒಂದೇ ನೊಂದಣಿ ಸಂಖ್ಯೆಯ ಹಲವು ಬಸ್​​ಗಳು – ಹೊರರಾಜ್ಯಗಳ 6 ಖಾಸಗಿ ಬಸ್ ಆರ್​ಟಿಒ ಬಲೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts