More

    ಕೇಂದ್ರ ಉದ್ಯೋಗಿಗಳ ವೇತನ, ಭತ್ಯೆ ಹೆಚ್ಚಳ? :ಖರ್ಚಿನ ಶಕ್ತಿವರ್ಧನೆಗಾಗಿ ಕೊಡುಗೆ ಸಾಧ್ಯತೆ

    ನವದೆಹಲಿ: ಕರೊನಾ ಹಾವಳಿಯಿಂದಾಗಿ ಸಣ್ಣ ವ್ಯಾಪಾರದಿಂದ ಹಿಡಿದು ಮಾರ್ಟ್-ಮಾಲ್​ವರೆಗೆ, ಚಿಕ್ಕ ಉದ್ಯಮದಿಂದ ಬೃಹತ್ ಕೈಗಾರಿಕೆಗಳವರೆಗೆ ಎಲ್ಲೆಲ್ಲೂ ಆರ್ಥಿಕ ಸಂಕಷ್ಟ ಉಂಟಾಗಿದೆ. ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಿಸಿ, ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರ ಭಾಗವಾಗಿ ಕೇಂದ್ರ ನೌಕರರ ವೇತನವನ್ನು ಹೆಚ್ಚಿಸುವ ಚಿಂತನೆ ನಡೆಸಿದೆ.

    ಹಣ ಹರಿವಿನ ಹಾದಿ

    *ಕೇಂದ್ರ ನೌಕರರ ವೇತನ, ಭತ್ಯೆ ಹೆಚ್ಚಿಸುವುದು

    *ಆ ಮೂಲಕ ಖರ್ಚಿನ ಶಕ್ತಿ ವೃದ್ಧಿಸುವುದು

    *ಇದರಿಂದ ವ್ಯಾಪಾರೋದ್ಯಮಿಗಳಿಗೆ ನೆರವು

    *ವ್ಯಾಪಾರೋದ್ಯಮಿಗಳಿಂದ ಮಾರುಕಟ್ಟೆಗೆ ಹಣದ ಹರಿವು

    *ಒಟ್ಟಾರೆ ಆರ್ಥಿಕತೆಗೆ ಉತ್ತೇಜನ

    * ಸರ್ಕಾರಕ್ಕೂ ತೆರಿಗೆ ಸಂದಾಯ

    ಕೇಂದ್ರ ಸರ್ಕಾರಿ ನೌಕರರಿಗೆ ಮುಂದಿನ ವರ್ಷ ವೇತನ ಮತ್ತು ತುಟ್ಟಿಭತ್ಯೆ(ಡಿಎ)ಹೆಚ್ಚಿಸಿ ಆ ಮೂಲಕ ಉದ್ಯೋಗಿಗಳ ಖರ್ಚಿನ ಶಕ್ತಿ ವೃದ್ಧಿಸುವುದು ಸರ್ಕಾರದ ಆಲೋಚನೆ. ಹೀಗೆ ಮಾಡಿದಲ್ಲಿ ಉದ್ಯೋಗಿಗಳು ಮಾಡುವ ಖರ್ಚು ವ್ಯಾಪಾರೋದ್ಯಮಕ್ಕೆ ಹಾಗೂ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುವ ಜತೆಗೆ ಆರ್ಥಿಕ ಬೆಳವಣಿಗೆಯೂ ಸಾಧ್ಯ ಎಂಬದು ಇದರ ಹಿಂದಿರುವ ತರ್ಕ.

    ಇದನ್ನೂ ಓದಿ:  ಸನ್‌ರೈಸರ್ಸ್‌ ಗೆಲ್ಲಿಸಿದ ಮನೀಷ್, ವಿಜಯ್ ಶಂಕರ್; ವಾರ್ನರ್ ಪಡೆ ಪ್ಲೇ-ಆಫ್ ಆಸೆ ಜೀವಂತ

    ವೇತನ ಮತ್ತು ಡಿಎ ಹೆಚ್ಚಳವಾದರೆ ದೇಶದ 45 ಲಕ್ಷ ನೌಕರರಿಗೆ ಮತ್ತು ನಿವೃತ್ತ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಆದರೆ, ಗ್ರಾಹಕ ದರ ಸೂಚ್ಯಂಕದ ಆಧಾರದಲ್ಲಿ ಡಿಎ ಹೆಚ್ಚಳವಾಗುವ ಕಾರಣ, ಪರಿಷ್ಕರಣೆ ಕನಿಷ್ಠ ಪ್ರಮಾಣದಲ್ಲಿ ಇರಲಿದೆ ಎಂದೂ ಅಂದಾಜಿಸಲಾಗಿದೆ. ತುಟ್ಟಿಭತ್ಯೆ ಹೆಚ್ಚಳದ ಸಾಧ್ಯಾಸಾಧ್ಯತೆ ಕುರಿತಂತೆ ಕಾರ್ವಿುಕ ಸಚಿವಾಲಯವು ಗ್ರಾಹಕ ದರ ಸೂಚ್ಯಂಕ ಮತ್ತು 2001ರಿಂದ 2016ರವರೆಗಿನ 15 ವರ್ಷಗಳ ಡಿಎ ಪರಿಷ್ಕರಣೆಯನ್ನು ಪರಿಶೀಲಿಸುತ್ತಿದೆ. ಆರೋಗ್ಯ ಸೇವೆಗಳು, ಇಂಧನ, ಕೆಲವು ಗೃಹಸಂಬಂಧಿ ಖರ್ಚುಗಳಲ್ಲಿ ಏರಿಕೆಯಾಗಿದೆ. ಈ ಅಂಶವನ್ನು ಗ್ರಾಹಕ ದರ ಸೂಚ್ಯಂಕದ ಪರಿಶೀಲನೆ ವೇಳೆ ಕಾರ್ವಿುಕ ಸಚಿವಾಲಯ ಗಮನಿಸಲಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಮಾರ್ಚ್​ನಲ್ಲಿ ಕೇಂದ್ರದ ನೌಕರರಿಗೆ ಶೇ. 4ರಷ್ಟು ಡಿಎ ಏರಿಸಲಾಗಿತ್ತು. ಆದರೆ, ಕರೊನಾ ಸಾಂಕ್ರಾಮಿಕ ವ್ಯಾಪಕವಾದ ಕಾರಣ ಇದನ್ನು ಮುಂದಿನ ವರ್ಷದ ಜೂನ್​ವರೆಗೆ ತಡೆಹಿಡಿಯಲಾಗಿದೆ. ಪ್ರಸ್ತುತ ಶೇ. 17 ಡಿಎ ನೌಕರರಿಗೆ ದೊರೆಯುತ್ತಿದೆ.

    ಇದನ್ನೂ ಓದಿ: ಕೆಕೆಆರ್ ಸೋಲಿನ ನಡುವೆ ನೋಟ್ಸ್ ಬರೆಯುತ್ತಿದ್ದ ಕೋಚ್ ಮೆಕ್ಕಲಂ, ಭಾರಿ ಟ್ರೋಲ್

    ದಸರಾ ಉಡುಗೊರೆ: ಕೇಂದ್ರದ ಪತ್ರಾಂಕಿತೇತರ ಅಧಿಕಾರಿಗಳಿಗೆ ದಸರಾ- ದೀಪಾವಳಿ ಉಡುಗೊರೆಯಾಗಿ ಬೋನಸ್ ನೀಡುವ ತೀರ್ವನವನ್ನು ಬುಧವಾರವಷ್ಟೇ ಕೇಂದ್ರ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಇದರಿಂದ 30.67 ಲಕ್ಷ ನೌಕರರಿಗೆ ಅನುಕೂಲವಾಗಿದೆ. ಇದಕ್ಕೂ ಮೊದಲು ಅಂದರೆ, ಅ. 12ರಂದು ಕೇಂದ್ರದ ನೌಕರರು, ಸಾರ್ವಜನಿಕ ವಲಯದ ಬ್ಯಾಂಕ್ ಮತ್ತು ಉದ್ದಿಮೆಗಳ ಉದ್ಯೋಗಿಗಳಿಗೆ ಎರಡು ವಿಶೇಷ ಯೋಜನೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಪ್ರವಾಸ ರಜೆ ನಗದೀಕರಣದ (ಎಲ್​ಟಿಸಿ) ವೋಚರ್ ಯೋಜನೆಯಲ್ಲಿ ನೌಕರರು ರಜೆಯನ್ನು ನಗದಾಗಿ ಪರಿವರ್ತಿಸಿಕೊಳ್ಳಬಹುದು ಮತ್ತು ಪ್ರವಾಸದ ಟಿಕೆಟ್​ನ ಮೂರು ಪಟ್ಟು ಮೊತ್ತ ಪಡೆಯಬಹುದು. ಈ ಮೊತ್ತವನ್ನು ಕನಿಷ್ಠ 12ರಷ್ಟು ಜಿಎಸ್​ಟಿ ಆಕರಿಸುವ ಆಹಾರೇತರ ವಸ್ತುಗಳ ಖರೀದಿಗೆ ಬಳಸಬೇಕು ಮತ್ತು ಇದನ್ನು ಡಿಜಿಟಲ್ ಮೂಲಕವೇ ಪಾವತಿಸಬೇಕು ಎಂಬ ಕರಾರು ಇದೆ. ಹಬ್ಬದ ಮುಂಗಡವಾಗಿ -ಠಿ; 10 ಸಾವಿರವನ್ನು ರುಪೇ ಡಿಬಿಟ್ ಕಾರ್ಡ್ ಮೂಲಕ ನೀಡುವುದು ಇನ್ನೊಂದು ಯೋಜನೆ.

    ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆ-19 ಲಕ್ಷ ಉದ್ಯೋಗ, ಉಚಿತ ಲಸಿಕೆ, ಜೆಡಿಯು ಪ್ರಣಾಳಿಕೆ- ಸಾಥ್ ನಿಶ್ಚಯ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts