More

    ಜೋಕೊವಿಕ್ ಕರೊನಾ ಪಾಸಿಟಿವ್ ಆದಾಗ ಐಪಿಎಲ್ ಆಯೋಜನೆಗೆ ಹಿಂದೇಟು ಹಾಕಿತ್ತು ಬಿಸಿಸಿಐ!

    ನವದೆಹಲಿ: ಕರೊನಾ ಹಾವಳಿಯಿಂದಾಗಿ ಐಪಿಎಲ್ ಟೂರ್ನಿ ಮುಂದೂಡಿಕೆಯಾದ ಬಳಿಕ ಬಿಸಿಸಿಐ, ಅದನ್ನು ಈ ವರ್ಷವೇ ಮರುನಿಗದಿ ಮಾಡುವ ಚಿಂತನೆಯಲ್ಲಿತ್ತು. ಆಗ ವಿಶ್ವ ನಂ. 1 ಟೆನಿಸ್ ಆಟಗಾರ ನೊವಾಕ್ ಜೋಕೊವಿಕ್, ತವರೂರು ಸೆರ್ಬಿಯಾ ಮತ್ತು ಕ್ರೊವೇಷಿಯಾದಲ್ಲಿ ನಡೆದ ಪ್ರದರ್ಶನ ಟೂರ್ನಿಗಳಲ್ಲಿ ಆಡಿ ಕರೊನಾ ಸೋಂಕು ಅಂಟಿಸಿಕೊಂಡಿದ್ದ ಸುದ್ದಿ ಬಿಸಿಸಿಐಗೆ ಆಘಾತ ನೀಡಿತ್ತು. ಇದರಿಂದಾಗಿ, ಕರೊನಾ ಕಾಲದಲ್ಲಿ ಐಪಿಎಲ್ ಟೂರ್ನಿ ಆಯೋಜನೆಯಿಂದ ಹಿಂದೆ ಸರಿಯುವ ಬಗ್ಗೆಯೂ ಬಿಸಿಸಿಐ ಚಿಂತಿಸಿತ್ತು ಎಂದು ಮಂಡಳಿಯ ಖಜಾಂಚಿ ಅರುಣ್ ಧುಮಾಲ್ ಬಹಿರಂಗಪಡಿಸಿದ್ದಾರೆ.

    ‘ಜೋಕೊವಿಕ್ ಸೋಂಕಿತರಾದ ಸುದ್ದಿ ಕೇಳಿದ ಬಳಿಕ ಮಂಡಳಿಯಲ್ಲೇ ಕೆಲವರು ಐಪಿಎಲ್ ಟೂರ್ನಿ ಆಯೋಜಿಸುವುದು ಬೇಡ ಎಂದಿದ್ದರು. ಸುಮಾರು 3 ತಿಂಗಳ ಕಾಲ ನಡೆಯುವ ಐಪಿಎಲ್ ವೇಳೆ ಕ್ರಿಕೆಟಿಗರಿಗೂ ಕರೊನಾ ಬಂದರೆ ಏನು ಮಾಡುವುದು ಎಂಬ ಆತಂಕ ಮೂಡಿತ್ತು. ಆದರೆ ಮಂಡಳಿಯ ಕಾರ್ಯದರ್ಶಿ ಜಯ್ ಷಾ ಮಾತ್ರ ಟೂರ್ನಿ ನಡೆಸೋಣ ಎಂದಿದ್ದರು. ಅವರು ನಮ್ಮೆಲ್ಲರಿಗಿಂತಲೂ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು ಎಂದು ಧುಮಾಲ್ ತಿಳಿಸಿದ್ದಾರೆ.

    ಟೂರ್ನಿಯ ವೇಳೆ ಕರೊನಾ ಬಗ್ಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಬಿಸಿಸಿಐ, ಯುಎಇಯಲ್ಲಿ ಕ್ವಾರಂಟೈನ್‌ಗಾಗಿ 200 ಹೋಟೆಲ್ ಕೋಣೆಗಳನ್ನು ಕಾಯ್ದಿರಿಸಿತ್ತು ಎಂದೂ ಅವರು ಹೇಳಿದ್ದಾರೆ.

    ಮುಂಬೈನಿಂದ ಬೃಹತ್ ತಂಡ!
    ಐಪಿಎಲ್ ಟೂರ್ನಿಗೆ ತೆರಳಿದ ಬಹುತೇಕ ತಂಡಗಳು ಸುಮಾರು 40 ಸದಸ್ಯರನ್ನಷ್ಟೇ ಹೊಂದಿದ್ದವು. ಆದರೆ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಮಾತ್ರ ಬರೋಬ್ಬರಿ 150ಕ್ಕೂ ಅಧಿಕ ಸದಸ್ಯರ ಬೃಹತ್ ತಂಡವನ್ನು ಹೊಂದಿತ್ತು. ಈ ಪೈಕಿ ಟೈಲರ್, ಮೇಕ್‌ಅಪ್ ಕಲಾವಿದರು, ಕೂದಲು ವಿನ್ಯಾಸಕಾರರೂ ಸೇರಿದ್ದರು ಎಂದು ಧುಮಾಲ್ ಹೇಳಿದ್ದಾರೆ.

    ಲಂಕಾ ಟಿ20 ಲೀಗ್ ಪಂದ್ಯಗಳನ್ನು ಭಾರತದಲ್ಲಿ ಯಾವ ಚಾನಲ್‌ನಲ್ಲಿ ನೋಡಬಹುದು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts