More

    ವಿಮೆ ಸೌಲಭ್ಯ, ವಿಶೇಷ ಭತ್ಯೆ ನೀಡಿ

    ಬೆಳಗಾವಿ: ವಿಮೆ ರಕ್ಷಣೆ, ಭತ್ಯೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟಿಸಿದರು. ಕೋವಿಡ್-19 ಸೇರಿ ವಿವಿಧ ಸಾಂಕ್ರಾಮಿಕ ರೋಗ ತಡೆಗಟ್ಟಲು, ಜಾಗೃತಿ ಮೂಡಿಸಲು ಹಾಗೂ ಸಮೀಕ್ಷೆ ಕಾರ್ಯದಲ್ಲಿ ನಿರಂತರವಾಗಿ ತೊಡಗಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ವಿಮಾ ರಕ್ಷಣೆ, ವಿಶೇಷ ಭತ್ಯೆ, ಸೋಂಕಿಗೆ ಒಳಗಾದವರಿಗೆ ಮತ್ತು ಅವರ ಕುಟುಂಬಗಳಿಗೆ ಪರಿಹಾರ ಮತ್ತು ಚಿಕಿತ್ಸಾ ವೆಚ್ಚವನ್ನೂ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

    ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಒಂದೇ ರೀತಿ ಕೆಲಸ ಮಾಡುತ್ತಿದ್ದರೂ, ವೇತನ ಸೇರಿ ಅವರ ಕೆಲಸದ ಷರತ್ತುಗಳು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿವೆ. ಅದೇ ರೀತಿ ವೇತನ ಸಹಿತ ವೈದ್ಯಕೀಯ ರಜೆ, ಮೇಲ್ವಿಚಾರಕರ ಹುದ್ದೆಗೆ ವಯಸ್ಸಿನ ಮಿತಿ ಇಲ್ಲದೆ ಬಡ್ತಿ, ಚಳಿಗಾಲದ ರಜೆಗಳನ್ನು ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೂ ಅನ್ವಯವಾಗುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

    ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೂ ಸರ್ಕಾರವು ಸಾಮಾಜಿಕ ಭದ್ರತಾ ಕ್ರಮಗಳ ಅಡಿಯಲ್ಲಿ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ವಿವಿಧ ಕಾರಣ ಮುಂದಿಟ್ಟುಕೊಂಡು ವೇತನ ಕಡಿತ ಮಾಡುವ ಆದೇಶವನ್ನು ತಕ್ಷಣ ಹಿಂಪಡೆದುಕೊಳ್ಳಬೇಕು ಎಂದು ಮನವಿ ಮೂಲಕ ವಿನಂತಿಸಿದರು. ಸಂಧ್ಯಾ ಕುಲಕರ್ಣಿ, ನಂದಾ ನೇಗವಿ, ಸುನೀತಾ ಉಂದ್ರ, ಸುರೇಖಾ ಕಾಂಬ್ಳೆ, ಶೋಭಾ ಪಾಟೀಲ, ಸುರೇಖಾ ಪಾಟೀಲ, ಯು.ಎಸ್. ಜಾಧವ, ಸಿ.ಎನ್. ಕಾಂಬ್ಳೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts