More

    ಮೂರು ಪ್ರಕಾರದಲ್ಲಿ ಎರಡು ದೇಶಗಳ ಪರ ಆಡಿದ ಏಕೈಕ ಕ್ರಿಕೆಟಿಗ ವಿದಾಯ

    ನವದೆಹಲಿ: ಮೂರು ಪ್ರಕಾರದಲ್ಲಿ ಎರಡು ದೇಶ ಪ್ರತಿನಿಧಿಸಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿರುವ ಬಾಯ್ಡ್​ ರ್ಯಾಂಕಿನ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ರ್ಯಾಂಕಿನ್​ ಇಂಗ್ಲೆಂಡ್​ ಹಾಗೂ ಐರ್ಲೆಂಡ್​ ತಂಡಗಳನ್ನು ಪ್ರತಿನಿಧಿಸಿದ್ದರು. ರ್ಯಾಂಕಿನ್​ 2020ರಲ್ಲಿ ಕಡೇ ಬಾರಿಗೆ ಐರ್ಲೆಂಡ್​ ಪರ ಭಾರತದ ನೋಯ್ಡಾದಲ್ಲಿ ಅಫ್ಘಾನಿಸ್ತಾನದ ಎದುರು ಟಿ20 ಪಂದ್ಯವಾಡಿದ್ದರು. 36 ವರ್ಷದ ರ್ಯಾಂಕಿನ್​ 2013-14ನೇ ಸಾಲಿನಲ್ಲಿ ಕಡೇ ಬಾರಿಗೆ ಇಂಗ್ಲೆಂಡ್​ ಪರ ಅಶಸ್​ ಸರಣಿ ಆಡಿದ್ದರು. ಅದೇ ಪ್ರವಾಸದಲ್ಲಿ 7 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನಾಡಿದ್ದರು.

    ಇದನ್ನೂ ಓದಿ: ವಿರಾಟ್​ ಕೊಹ್ಲಿ ಆದರ್ಶವಾಗಿರಲಿ ಎಂದು ಕ್ರಿಕೆಟ್​ ಆಟಗಾರ್ತಿ ಪ್ರಿಯಾ ಪೂನಿಯಾಗೆ ತಂದೆ ಹೇಳಿದ್ಯಾಕೆ?

    2017ರಲ್ಲಿ ಟೆಸ್ಟ್​ ಮಾನ್ಯತೆ ದಕ್ಕಿದ ಬಳಿಕ ಐರ್ಲೆಂಡ್​ ತಂಡಕ್ಕೆ ವಾಪಸಾದರು. ಬಾಯ್ಡ್​ ರ್ಯಾಂಕಿನ್​ ಒಟ್ಟಾರೆ, 3 ಟೆಸ್ಟ್​, 75 ಏಕದಿನ ಹಾಗೂ 50 ಟಿ20 ಪಂದ್ಯಗಳನ್ನಾಡಿದ್ದಾರೆ. ವಿಶ್ವ ಕ್ರಿಕೆಟ್​ನಲ್ಲಿ ಎರಡು ದೇಶಗಳ ಪರ ಟೆಸ್ಟ್​ ಆಡಿದ ವಿಶ್ವದ 15 ಆಟಗಾರರ ಪೈಕಿ ಒಬ್ಬರಾಗಿದ್ದರೆ, ಮೂರು ಪ್ರಕಾರಗಳಲ್ಲಿ ಎರಡು ದೇಶ ಪ್ರತಿನಿಧಿಸಿದ ಏಕೈಕ ಆಟಗಾರ ಎನಿಸಿದ್ದಾರೆ. 11 ವರ್ಷಗಳ ಕಾಲ ವಾರ್​ವಿಕ್​ಷೈರ್​ ಪರ ಕೌಂಟಿ ಚಾಂಪಿಯನ್​ಷಿಪ್​ನಲ್ಲಿ ಆಡಿದ್ದರು. 2003ರಿಂದಲೂ ಕ್ರಿಕೆಟ್​ ಆಡುತ್ತಿದ್ದೇನೆ. ಆಡಿದ ಪ್ರತಿನಿಮಿಷವೂ ಕ್ರಿಕೆಟ್​ಅನ್ನು ಮನರಂಜನಾತ್ಮಕವಾಗಿ ಸ್ವೀಕರಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಭಾರತ ಮಹಿಳಾ ಕಬಡ್ಡಿ ತಂಡದ ಮಾಜಿ ನಾಯಕಿ ತೇಜಸ್ವಿನಿ ಬಾಯಿಗೆ ನೆರವು ನೀಡಿದ ಕ್ರೀಡಾ ಸಚಿವಾಲಯ,

    ಮೂರು ಟೆಸ್ಟ್​ ಪಂದ್ಯಗಳಿಂದ 8 ವಿಕೆಟ್​, 75 ಏಕದಿನ ಪಂದ್ಯಗಳಿಂದ 106 ಹಾಗೂ 50 ಟಿ20 ಪಂದ್ಯಗಳಿಂದ 55 ವಿಕೆಟ್​ ಕಬಳಿಸಿದ್ದಾರೆ.

    ಶ್ರೀಲಂಕಾ ಪ್ರವಾಸಕ್ಕೆ ಧವನ್​ ಅವರೇ ನಾಯಕನಾಗಲಿ ಎಂದು ವೇಗಿ ​ದೀಪಕ್ ಚಹರ್​ ಹೇಳಿದ್ಯಾಕೆ.?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts