More

    ಭಾರತ ಮಹಿಳಾ ಕಬಡ್ಡಿ ತಂಡದ ಮಾಜಿ ನಾಯಕಿ ತೇಜಸ್ವಿನಿ ಬಾಯಿಗೆ ನೆರವು ನೀಡಿದ ಕ್ರೀಡಾ ಸಚಿವಾಲಯ

    ನವದೆಹಲಿ: ಭಾರತ ಮಹಿಳಾ ಕಬಡ್ಡಿ ತಂಡದ ಮಾಜಿ ನಾಯಕಿ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತೆ ತೇಜಸ್ವಿನಿ ಬಾಯಿ ಅವರಿಗೆ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯ 2 ಲಕ್ಷ ರೂಪಾಯಿ ಸಹಾಯ ಧನ ಘೋಷಿಸಿದೆ. ತೇಜಸ್ವಿನಿ ಬಾಯಿ ಅವರ ಪತಿ ನವೀನ್​ ಕೋವಿಡ್​ನಿಂದ ಇತ್ತೀಚೆಗಷ್ಟೇ ನಿಧನರಾದರು. ಪಂಡಿತ್​ ದೀನದಯಾಳ್​ ಉಪಾಧ್ಯಾಯ ರಾಷ್ಟ್ರೀಯ ಕ್ರೀಡಾಪಟುಗಳ ಹಿತರಕ್ಷಣಾ ನಿಧಿಯಿಂದ ಆರ್ಥಿಕ ಸಹಾಯ ಧನ ನೀಡಲಾಗುತ್ತಿದೆ. ತೇಜಸ್ವಿನಿ ಹಾಗೂ ಅವರ ಪತಿ ನವೀನ್​ಗೆ ಮೇ 1 ರಂದು ಕೋವಿಡ್​ ಕಾಣಿಸಿಕೊಂಡಿತ್ತು. ತೇಜಸ್ವಿನಿ ಚೇತರಿಕೆಯ ಹಾದಿ ಹಿಡಿದರೆ ಮೇ 11 ರಂದು ನವೀನ್​ ಸಾವನ್ನಪ್ಪಿಸಿದರು.

    ಇದನ್ನೂ ಓದಿ: ಭಾರತದಲ್ಲಿ ಟಿ20 ವಿಶ್ವಕಪ್​ ನಡೆಸುವುದು ಕಷ್ಟಕರ ಎಂದ ಆಸೀಸ್​ ಕ್ರಿಕೆಟಿಗ

    ಕೇವಲ 30 ವರ್ಷದ ನವೀನ್​, ಅವರ ತಂದೆ ಸಾವಿನಿಂದ ವಿಚಲಿತರಾಗಿದ್ದರು. ಜತೆಗೆ ಗಾಬರಿಗೆ ಒಳಗಾದ ನವೀನ್​ ಒತ್ತಡ ತಾಳಲಾರದೆ ಸಾವನ್ನಪ್ಪಿದರು ಎಂದು ತೇಜಸ್ವಿನಿ ಹೇಳಿಕೆಯನ್ನು ಭಾರತೀಯ ಕ್ರೀಡಾಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ. ನಾನು ಈ ಮೊತ್ತವನ್ನು ನಿರೀಕ್ಷಿಸಿರಲಿಲ್ಲ. ಕ್ರೀಡಾ ಸಚಿವಾಲಯ, ಸಾಯ್​, ಭಾರತೀಯ ಒಲಿಂಪಿಕ್​ ಸಂಸ್ಥೆ ಒಟ್ಟಿಗೆ ಸೇರಿ ಈ ಸಹಾಯ ಧನ ನೀಡಿವೆ. ನನ್ನಂಥ ತೊಂದರೆಯಲ್ಲಿರುವ ಕ್ರೀಡಾಪಟುಗಳಿಗೆ ಇದರಿಂದ ಸಹಾಯವಾಗಲಿದೆ ಎಂದು ತೇಜಸ್ವಿನಿ ಹೇಳಿದ್ದಾರೆ.
    ಇದನ್ನೂ ಓದಿ: ಕನ್ನಡಿಗ ಅನಿಲ್​ ಕುಂಬ್ಳೆ ಸಾಧನೆಯ ವಿಡಿಯೋ ಪ್ರಕಟಿಸಿ ಹಾಲ್​ ಆಫ್ ಫೇಮ್ ಸಂಭ್ರಮಿಸಿದ ಐಸಿಸಿ,

    ತೇಜಸ್ವಿನಿ 2011ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. 2010 ಹಾಗೂ 2014ರ ಏಷ್ಯಾಡ್​ನಲ್ಲಿ ಸ್ವರ್ಣ ಜಯಿಸಿದ ಭಾರತ ಮಹಿಳಾ ತಂಡದ ಸದಸ್ಯೆಯಾಗಿದ್ದರು. ಈ ಮೊತ್ತವನ್ನು ತಮ್ಮ 5 ತಿಂಗಳ ಮಗುವಿನ ಭವಿಷ್ಯದ ನಿಧಿಗೆ ಇಡುವುದಾಗಿ ತೇಜಸ್ವಿನಿ ಹೇಳಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts