More

    ರಣಬೀರ್​ ಕಪೂರ್​ ಜತೆ ಇರುವ ಈ ಹೊಸ ಹುಡುಗಿ ಯಾರು?

    ಬಾಲಿವುಡ್​ನ ಪ್ಲೇಬಾಯ್​ ಎಂದು ಹೆಸರಾದವರು ನಟ ರಣಬೀರ್​ ಕಪೂರ್​. ಕಳೆದ ಹಲವು ವರ್ಷಗಳಿಂದ ಹಲವು ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್ ಸೇರಿದಂತೆ ರಣಬೀರ್ ಹಲವರ ಜತೆಗೆ ಅಫೇರ್​ ನಡೆಸಿದ್ದಾರೆ.

    ಇದನ್ನೂ ಓದಿ: PHOTOS: ಶುಭಾ ಪೂಂಜ ಪ್ರಾಣಿ ಪ್ರೀತಿ ಹೇಗಿದೆ ನೋಡಿ…

    ಇತ್ತೀಚಿನ ದಿನಗಳಲ್ಲಿ ಆಲಿಯಾ ಭಟ್​ ಜತೆಗೆ ಅವರು ಬಹಳ ಹತ್ತಿರವಾಗಿದ್ದು, ಸದ್ಯದಲ್ಲೇ ಅವರಿಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿ ಇದೆ. ಲಾಕ್​ಡೌನ್​ ಸಂದರ್ಭದಲ್ಲಿ ಅವರಿಬ್ಬರೂ ಒಂದೇ ಫ್ಲಾಟ್​ನಲ್ಲಿ ವಾಸಿಸುತ್ತಿದ್ದು, ಇತ್ತೀಚೆಗೆ ಆಲಿಯಾಳನ್ನು ಮದುವೆಯಾಗುತ್ತಿರುವುದಾಗಿ ಆಕೆಯ ತಂದೆ ಮಹೇಶ್​ ಭಟ್​ಗೆ ವಿಚಾರ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಹೀಗಿರುವಾಗಲೇ, ಇನ್ನೊಬ್ಬ ಹುಡುಗಿಯ ಜತೆಗೆ ರಣಬೀರ್ ರೊಮ್ಯಾಂಟಿಕ್​ ಮೂಡ್​ನಲ್ಲಿರುವ ಹಲವು ಚಿತ್ರಗಳು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಸುದ್ದಿ ಮಾಡುತ್ತಿವೆ. ಇಷ್ಟಕ್ಕೂ ರಣಬೀರ್​ ಜತೆಗೆ ಇರುವ ಹುಡುಗಿ ಯಾರು, ಹೊಸ ಹುಡುಗಿ ಬಂದಿದ್ದರಿಂದ ಆಲಿಯಾಗೆ ರಣಬೀರ್​ ಗುಡಬೈ ಹೇಳುತ್ತಾರಾ ಎಂಬಂತಹ ಹಲವು ಪ್ರಶ್ನೆಗಳು ಇದೀಗ ಬಾಲಿವುಡ್​ ಮಂದಿಯನ್ನು ಕಾಡುತ್ತಿವೆ.

    ಇದನ್ನೂ ಓದಿ: ರಾಮ್​ಚರಣ್​ ಚಿತ್ರಕ್ಕೆ ಪವನ್​ ಕಲ್ಯಾಣ್​ ಬಂಡವಾಳ

    ಆದರೆ, ಹಾಗೇನೂ ಇಲ್ಲ. ರಣಬೀರ್ ಇತ್ತೀಚೆಗೆ ಮ್ಯಾಕ್ರೋಮ್ಯಾನ್​ನ ಒಳಉಡುಪುಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಆ ಸಂದಭರ್ದಲ್ಲಿ ಸೆಟ್​ನಲ್ಲಿ ತೆಗೆದ ಚಿತ್ರಗಳಿವು ಎಂದು ಹೇಳಲಾಗುತ್ತಿದೆ. ಈ ಜಾಹೀರಾತಿನಲ್ಲಿ ಅವರು ಮಾಡಲ್​ ಒಬ್ಬರ ಜತೆಗೆ ಬಹಳ ಇಂಟಿಮೇಟ್​ ಆಗಿ ಕಾಣಿಸಿಕೊಂಡಿದ್ದು, ರಣಬೀರ್​ ಅಭಿನಯಿಸಿರುವ ಜಾಹೀರಾತುಗಳಲ್ಲೇ ಇದು ಅತ್ಯಂತ ಬೋಲ್ಡ್​ ಆದ ಜಾಹೀರಾತು ಎಂದು ಹೇಳಲಾಗುತ್ತಿದೆ.

    ಲಾಕ್​ಡೌನ್​ಗೂ ಮುನ್ನ ರಣಬೀರ್​, ‘ಬ್ರಹ್ಮಾಸ್ತ್ರ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಸದ್ಯಕ್ಕೆ ಅದು ನಿಂತಿದೆ. ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ನಂತರ, ಆ ಚಿತ್ರವನ್ನು ಮುಂದುವರೆಸಲಾಗುತ್ತಿದೆ. ಈ ಮಧ್ಯೆ ಇನ್ನೊಂದಿಷ್ಟು ಕಥೆಗಳನ್ನು ಕೇಳಿರುವ ರಣಬೀರ್​, ಸದ್ಯದಲ್ಲೇ ಆ ಕುರಿತು ಅಧಿಕೃತ ಪ್ರಕಟಣೆ ನೀಡಲಿದ್ದಾರಂತೆ.

    ಸುದೀಪ್​ ಪಾಲಿಗೆ ಜುಲೈ 6, ಮರೆಯಲಾಗದ ದಿನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts