More

    ರಶ್ಮಿಕಾ ಅವರ ಈ ಫೋಟೋಕ್ಕೆ ಮಂಗನ ಇಮೋಜಿ ಕಳುಹಿಸಿದ ನಟಿ ರಮ್ಯಾ!

    ಕಳೆದ ಕೆಲ ದಿನಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದ ಸ್ಯಾಂಡಲ್​ವುಡ್​ ನಟಿ ರಮ್ಯಾ, ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಒಂದಾದ ಮೇಲೊಂದು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ ಅಭಿಮಾನಿಗಳ ಜತೆ ಸಂಪರ್ಕದಲ್ಲಿದ್ದಾರೆ. ಇತ್ತೀಚೆಗಷ್ಟೇ ರಾಧಿಕಾ ಪಂಡಿತ್​ ಅವರ ಫೋಟೋಕ್ಕೂ ರಮ್ಯಾ ಪ್ರತಿಕ್ರಿಯಿಸಿದ್ದರು. ಇದೀಗ ರಶ್ಮಿಕಾ ಫೋಟೋಕ್ಕೆ ಕಮೆಂಟ್​ ಮಾಡಿದ್ದಾರೆ.

    ಇದನ್ನೂ ಓದಿ: ಮೀರಾಗೆ ಕೈಲಾಸಕ್ಕೆ ಹೋಗೋ ಆಸೆಯಂತೆ …

    ಹೌದು, ರಶ್ಮಿಕಾ ಸೋಷಿಯಲ್​ ಮೀಡಿಯಾದಲ್ಲಿ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದರು. ಅದಕ್ಕೆ ವಜ್ರದಂತೆ ಪ್ರಕಾಶಮಾನವಾಗಿ ಮಿನುಗಿರಿ ಎಂಬ ಕ್ಯಾಪ್ಶನ್​ ಸಹ ನೀಡಿದ್ದರು. ಅದೇ ಫೋಟೋಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, ಮೊದಲಿಗೆ ಹಾರ್ಟ್ ಇಮೋಜಿ ಹಾಕಿದ್ದಾರೆ. ಅದಕ್ಕೆ ಮ್ಯಾಮ್​ ಎಂದು ರಶ್ಮಿಕಾ ಕಮೆಂಟ್​ ಮಾಡಿದ್ದಾರೆ. ಬಳಿಕ ಕಣ್ಮುಚ್ಚಿದ ಮಂಗನ ಇಮೋಜಿಯನ್ನೂ ಹಾಕಿದ್ದಾರೆ. ಸದ್ಯ ಇವರಿಬ್ಬರ ಚಾಟ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಇದನ್ನೂ ಓದಿ:  ಓಟಿಟಿ ಮಡಿಲಿಗೆ ಧನುಷ್​ ‘ಜಗಮೇ ತಂಧೀರಮ್’?

    ರಶ್ಮಿಕಾ ಅವರ ಈ ಫೋಟೋಕ್ಕೆ ಮಂಗನ ಇಮೋಜಿ ಕಳುಹಿಸಿದ ನಟಿ ರಮ್ಯಾ!

    ಇತ್ತೀಚೆಗಷ್ಟೇ ರಾಧಿಕಾ ಪಂಡಿತ್​ ನೀನು ನೀನಾಗಿರು ಎಂಬ ಕ್ಯಾಪ್ಶನ್​ ನೀಡಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಆ ಚಿತ್ರಕ್ಕೆ ರಮ್ಯಾ ‘ತುಂಬ ಮುದ್ದಾಗಿದೆ’ ಎಂದು ರಮ್ಯಾ ಕಮೆಂಟ್ ಮಾಡಿದ್ದರು. ಬಳಿಕ ಆ ಕಮೆಂಟ್​ಗೆ ರಾಧಿಕಾ ಸಹ ಪ್ರತಿಕ್ರಿಯಿಸಿದ್ದು, ‘ನಿಮ್ಮಷ್ಟು ಮುದ್ದಾಗಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು.

    ಚಿಕಿತ್ಸೆಗೆ ಸ್ಪಂದನೆ, ವೈದ್ಯರನ್ನು ಗುರುತಿಸುತ್ತಿದ್ದಾರೆ; ಎಸ್​ಪಿಬಿ ಪುತ್ರ ಚರಣ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts