More

    ರೈತ ಹೋರಾಟದ ದಿಕ್ಕು ತಪ್ಪಿಸಲು ರಾಮ ಮಂದಿರ ನಿಧಿ ಸಂಗ್ರಹ ಅಭಿಯಾನ: ಕೋಡಿಹಳ್ಳಿ ಚಂದ್ರಶೇಖರ

    ಹೊಸಪೇಟೆ (ಬಳ್ಳಾರಿ): ರೈತರ ಹೋರಾಟದ ದಿಕ್ಕು ತಪ್ಪಿಸಲು ಶ್ರೀ ರಾಮ ಮಂದಿರದ ನಿಧಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.

    ದೆಹಲಿ ಗಡಿಯಲ್ಲಿ ಲಕ್ಷಾಂತರ ರೈತರು ಹೋರಾಟ ನಡೆಸಿದ್ದು, ಈ ಕುರಿತ ವಿವಾದ ಬಗೆಹರಿಸುವುದನ್ನು ಬಿಟ್ಟು ರಾಮ ಮಂದಿರ ನಿರ್ಮಾಣ ಅಭಿಯಾನ ಕೈಗೊಳ್ಳಲಾಗಿದೆ.

    ಇದನ್ನೂ ಓದಿರಿ: ಎಷ್ಟೇ ಸಂಧಾನ ಮಾಡಿದ್ರೂ ಸಹಿಸದ ಮನಸ್ಸು: ಹೊಂಚು ಹಾಕಿ ಮಲಗಿದ್ದ ಪತ್ನಿಯನ್ನೇ ಕೊಂದ ಪತಿರಾಯ!

    ರಾಮ ಮಂದಿರ ನಿರ್ಮಾಣದ ಇದು ಸೂಕ್ತ ಸಂದರ್ಭವಲ್ಲ. ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆದಿದೆ, ಇಂತಹ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಅಗತ್ಯವೇ ಎಂದು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು.

    ದೇಶದ ಜನರನ್ನು ಭಾವನಾತ್ಮಕ ವಿಚಾರಗಳಿಂದ ದಿಕ್ಕ ತಪ್ಪಿಸಲಾಗುತ್ತಿದೆ. ಮನ್ ಕೀ ಬಾತ್ ನಲ್ಲಿ ಪ್ರಧಾನಿ ರೈತರ ಸಾವಿನ ಬಗ್ಗೆ ಮಾತನಾಡದೆ ನವ ದಂಪತಿ ಬೀಚ್ ನಲ್ಲಿ ಪ್ಲ್ಯಾಸ್ಟಿಕ್‌ ಆರಿಸುವ ಬಗ್ಗೆ ಹೇಳುತ್ತಾರೆ.

    ನಾನೂ ರಾಮನ ಭಕ್ತ, ಆದರೆ, ಕೆಲಸದ ಸಮಯದಲ್ಲಿ ಆರಾಧನೆ ಮಾಡುತ್ತಾ ಕುಳಿತುಕೊಳ್ಳಲು ಆಗುವುದಿಲ್ಲ. ರೈತರ ಹೋರಾಟಕ್ಕೆ‌ ಮೊದಲು ಸ್ಪಂದಿಸಬೇಕು. ಚೀನಾದವರು ಅರುಣಾಚಲ ಪ್ರದೇಶದಲ್ಲಿ ಒಂದು ಹಳ್ಳಿ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಮಾತನಾಡುವ ಧೈರ್ಯ ಇಲ್ಲ. ಗುಪ್ತಚರ ಇಲಾಖೆ ವಿಫಲವಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.

    ಇದನ್ನೂ ಓದಿರಿ: ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿ ಈಗ ಮದುವೆಯಾಗಲಾಗದೇ ಧರ್ಮಸಂಕಟದಲ್ಲಿದ್ದೇನೆ- ಏನು ಮಾಡಲಿ?

    ಉದ್ಧಟತನಕ್ಕೆ ಕನ್ನಡಿಗರ ಚಾಟಿ: ಗಡಿ ಕ್ಯಾತೆಗೆ ಪಕ್ಷಾತೀತ ಖಂಡನೆ, ಮಹಾ ಕ್ಷುಲ್ಲಕ ರಾಜಕಾರಣಕ್ಕೆ ಆಕ್ರೋಶ

    ಮದ್ವೆಯಾದ ಮೂರೇ ತಿಂಗಳಲ್ಲಿ ಎಸ್​ಐ ಸಾವು: ಬ್ಯೂಟಿ ಹಿಂದೆ ಬಿದ್ದ ಪೊಲೀಸಪ್ಪನ ದುರಂತ ಕತೆ ಇದು!

    ಹುಟ್ಟುವಾಗಲೇ ಮಗುವಿಗೆ ಬಿಳಿಕೂದಲು: ಹೆತ್ತ ತಾಯಿ ಕೊಟ್ಟ ಅಚ್ಚರಿಯ ಕಾರಣ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts