More

    ಮಕ್ಕಳಾಗುವುದಕ್ಕೆ ಮೊದಲು ಗಂಡನ ಹೆಸರು ಹೇಳ್ತೀನಿ: ರಾಖಿ ಸಾವಂತ್​

    ಮುಂಬೈ:ಮಕ್ಕಳಾಗುವುದಕ್ಕಿಂತ ಮೊದಲೇ ಗಂಡನ ಹೆಸರು ಹೇಳುತ್ತೀನಿ ಎಂದು ಬಾಲಿವುಡ್​ ನಟಿ ರಾಖಿ ಸಾವಂತ್​ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಕನ್ನಡದ ಸಾಧಕನ ಬಯೋಪಿಕ್, ‘ದಿ ಬ್ರಿಡ್ಜ್ ಮ್ಯಾನ್’

    ಸದ್ಯ ನಡೆಯುತ್ತಿರುವ ‘ಬಿಗ್​ ಬಾಸ್​’ನಲ್ಲಿ ಭಾಗವಹಿಸುತ್ತಿರುವ ರಾಖಿ, ಇತರೆ ಸದಸ್ಯರ ಜೊತೆಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ನಾನು ಕಳೆದ ವರ್ಷವೇ ಮದುವೆಯಾದೆ. ಆದರೆ, ಕಾರಣಾಂತರಗಳಿಂದ ನನ್ನ ಗಂಡ ಮಾಧ್ಯಮಗಳ ಮುಂದೆ ಬಂದಿಲ್ಲ. ಆತ ಹೇಗಿದ್ದಾರೆ ಎಂದು ನಾನು ಸಹ ಫೋಟೋಗಳನ್ನು ಶೇರ್​ ಮಾಡಿಲ್ಲ. ಅದೇ ಕಾರಣಕ್ಕೆ ನಾನು ಮದುವೆಯಾಗಿಲ್ಲ ಮತ್ತು ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದೇನೆ ಎಂದು ಹಲವರು ಭಾವಿಸಿದ್ದಾರೆ. ನಾನು ನಿಜಕ್ಕೂ ಮದುವೆಯಾಗಿದ್ದೇನೆ ಮತ್ತು ಮಕ್ಕಳಾಗುವುದಕ್ಕಿಂತ ಮುನ್ನ ಹೇಗಾದರೂ ಮಾಡಿ ಗಂಡನ ಹೆಸರನ್ನು ಹೇಳುತ್ತೇನೆ’ ಎಂದಿದ್ದಾರೆ.

    ಈ ವಿಷಯವಾಗಿ ಅವರು ಗಂಡನ ಜೊತೆಗೆ ಮಾತನಾಡಿದ್ದಾರಂತೆ. ‘ನಾನು ಮದುವೆಯಾಗಿದ್ದೇನೆ ಎಂದರೂ ಯಾರು ನಂಬುವ ಸ್ಥಿತಿಯಲ್ಲಿಲ್ಲ. ಹಾಗಾಗಿ ನೀವ್ಯಾರು ಎಂದು ಜಗತ್ತಿಗೆ ತಿಳಿಸಿ ಎಂದು ಕೇಳಿಕೊಂಡಿದ್ದೇನೆ. ಆದರೆ, ಸದ್ಯಕ್ಕೆ ಅದು ಸಾಧ್ಯವಿಲ್ಲ, ಸ್ವಲ್ಪ ಸಮಯ ಕೊಡು ಎಂದು ಅವರು ಕೇಳಿದ್ದಾರೆ. ಒಟ್ಟಿನಲ್ಲಿ ಮಕ್ಕಳಾಗುವುದಕ್ಕಿಂತ ಮುಂಚೆ ಅವರು ಖಂಡಿತಾ ಮಾಧ್ಯಮದವರ ಮುಂದೆ ಬರುತ್ತಾರೆ ಮತ್ತು ತಾವು ಯಾರು ಎಂದು ಬಹಿರಂಗವಾಗಿ ಹೇಳಲಿದ್ದಾರೆ’ ಎಂದು ರಾಖಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಹೃತಿಕ್ ರೋಷನ್​ ಕಾಲೆಳೆದ ಕಂಗನಾ ರಣಾವತ್!

    ಇನ್ನು ‘ಬಿಗ್​ ಬಾಸ್​’ ಮನೆಗೆ ಹೋಗುವುದಕ್ಕಿಂತ ಮುನ್ನ, ಮದುವೆಯಾಗಿದ್ದು ತಾನು ಮಾಡಿದ ದೊಡ್ಡ ತಪ್ಪು ಎಂದು ರಾಖಿ ಹೇಳಿಕೊಂಡಿದ್ದರು. ‘ಕುಟುಂಬದವರನ್ನು ನೋಡಿಕೊಳ್ಳುತ್ತಲೇ ನಾನು ದಿವಾಳಿಯಾದೆ. ಒಬ್ಬ ಶ್ರೀಮಂತನನ್ನು ಮದುವೆಯಾದರೆ, ಸಮಸ್ಯೆಗಳಿಂದ ಹೊರಬರಬಹುದು ಎಂದು ಯೋಚಿಸಿ ಮದುವೆ ಆದೆ. ಮದುವೆಯಾಗಿದ್ದು ನಾನು ಮಾಡಿದ್ದು ದೊಡ್ಡ ತಪ್ಪು’ ಎನ್ನುವ ರಾಖಿಯ ಮದುವೆ ಮುರಿದಬಿದ್ದಿದೆಯಂತೆ. ಈ ಬಗ್ಗೆ ‘ಬಿಗ್​ ಬಾಸ್​’ ಮನೆಗೆ ಹೋದ ಮೇಲೆ ವಿವರವಾಗಿ ಮಾತನಾಡುತ್ತಾರಂತೆ.

    ರಾವಣನ ಬಗ್ಗೆ ಮಾತನಾಡಿದ್ದಕ್ಕೆ ಸೈಫ್​ ಮೇಲೆ ಕೇಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts