More

    31 ವರ್ಷ ಜೈಲು ಶಿಕ್ಷೆ ಬಳಿಕ ರಾಜೀವ್​ ಗಾಂಧಿ ಹತ್ಯೆ ಆರೋಪಿ ಪೆರಾರಿವಾಲನ್​ ಬಿಡುಗಡೆಗೊಳಿಸಿದ ಸುಪ್ರೀಂಕೊರ್ಟ್​

    ನವದೆಹಲಿ: ಬರೋಬ್ಬರಿ 31 ವರ್ಷಗಳ ಜೈಲು ಶಿಕ್ಷೆಯ ಬಳಿಕ ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಹತ್ಯೆ ಆರೋಪಿ ಪೆರಾರಿವಾಲನ್​ನನ್ನು ಬಿಡುಗಡೆ ಮಾಡಿ ಸುಪ್ರೀಂಕೋರ್ಟ್ ಬುಧವಾರ (ಮೇ.18)​ ಆದೇಶ ಹೊರಡಿಸಿದೆ.

    ತಮಿಳುನಾಡು ಸರ್ಕಾರದ ಮನವಿ ಮೇರೆಗೆ ಆರೋಪಿ ಪೆರಾರಿವಾಲನ್​ನನ್ನು ಸುಪ್ರೀಂಕೋರ್ಟ್​ ಬಿಡುಗಡೆ ಮಾಡಿದೆ. ಇಂದು ಬಂದಿರುವ ತೀರ್ಪು ನಳಿನಿ ಶ್ರೀಹರನ್ ಮತ್ತು ಆಕೆಯ ಪತಿ ಶ್ರೀಲಂಕಾ ಪ್ರಜೆ ಮುರುಗನ್ ಸೇರಿದಂತೆ ಪ್ರಕರಣದ ಇತರೆ ಆರು ಅಪರಾಧಿಗಳ ಬಿಡುಗಡೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

    30 ವರ್ಷಕ್ಕೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್​ 9ರಂದೇ ಪೆರಾರಿವಾಲನ್​ಗೆ ಉನ್ನತ ನ್ಯಾಯಾಲಯ ಜಾಮೀನು ನೀಡಿದೆ. ಇದಲ್ಲದೆ, ಪೆರೋಲ್​ ಮೇಲೆ ಹಲವು ಬಾರಿ ಹೊರಗಡೆ ಹೋಗಿದ್ದ ಆರೋಪಿ ಪೆರಾರಿವಾಲನ್​ ವಿರುದ್ಧ ಒಂದೇ ಒಂದು ದೂರು ಸಹ ದಾಖಲಾಗಿರುವ ಇತಿಹಾಸವಿಲ್ಲ.

    ರಾಜೀವ್​ ಗಾಂಧಿ ಹತ್ಯೆಯಾದ ಸಂದರ್ಭದಲ್ಲಿ ಆರೋಪಿ ಪೆರಾರಿವಾಲನ್​ಗೆ 19 ವರ್ಷ ವಯಸ್ಸಾಗಿತ್ತು. ಹತ್ಯೆ ಹಿಂದಿನ ಮಾಸ್ಟರ್​ ಮೈಂಡ್​ ಹಾಗೂ ಲಿಬರೇಷನ್​ ಟೈಗರ್ಸ್​ ಆಫ್​ ತಮಿಳು ಏಳಂ (ಎಲ್​ಟಿಟಿಇ)ನ ನಾಯಕ ಶಿವರಾಸನ್​ಗೆ 9 ವೋಲ್ಟ್​ನ ಎರಡು ಬ್ಯಾಟರಿ ಖರೀದಿಸಿ ತಂದ ಆರೋಪ ಪೆರಾರಿವಾಲನ್​ ಮೇಲಿದೆ. ಈ ಎರಡು ಬ್ಯಾಟರಿಗಳನ್ನು 1991ರಲ್ಲಿ ನಡೆದ ರಾಜೀವ್​ ಗಾಂಧಿ ಹತ್ಯೆಗೆ ಬಳಸಿಕೊಳ್ಳಲಾಯಿತು.

    ಈ ಪ್ರಕದಣದಲ್ಲಿ 1998 ರಲ್ಲಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಪೆರಾರಿವಾಲನ್‌ಗೆ ಮರಣದಂಡನೆ ವಿಧಿಸಿತು. ಇದಾದ ಮುಂದಿನ ವರ್ಷದಲ್ಲೇ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿಯಿತು. ಆದರೆ, 2014ರಲ್ಲಿ ಮರಣದಂಡಣೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು. 30 ವರ್ಷಗಳ ಶಿಕ್ಷೆ ಅನುಭವಿಸಿದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಲ್ಲಿ ಉನ್ನತ ನ್ಯಾಯಾಲಯವು ಪರಾರಿವಾಲನ್​ಗೆ ಜಾಮೀನು ನೀಡಿತ್ತು. ಇದಾದ ಸ್ವಲ್ಪ ಸಮಯದ ನಂತರ, ಪೆರಾರಿವಾಲನ್ ಜೈಲಿನಿಂದ ಬಿಡುಗಡೆ ಕೋರಿ ಮನವಿ ಸಲ್ಲಿಸಿದ್ದರು.

    ಇತ್ತ ಪೆರಾರಿವಾಲನ್ ಅವರ ಮನವಿಯನ್ನು ವಿರೋಧಿಸಿದ ಕೇಂದ್ರ ಸರ್ಕಾರ, ತಮಿಳುನಾಡು ರಾಜ್ಯಪಾಲರು ಈ ವಿಷಯವನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ತಿಳಿಸಿದ್ದಾರೆ. ಈ ಬಗ್ಗೆ ರಾಷ್ಟ್ರಪತಿಗಳು ಇನ್ನು ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಕೋರ್ಟ್​ ಪ್ರಕರಣದ ವಿಳಂಬ ಮತ್ತು ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿತ್ತು. ಅಲ್ಲದೆ, ಪ್ರಕರಣದ ಎಲ್ಲಾ ಏಳು ಅಪರಾಧಿಗಳನ್ನು ಬಿಡುಗಡೆ ಮಾಡುವ ತಮಿಳುನಾಡು ಕ್ಯಾಬಿನೆಟ್ ನಿರ್ಧಾರಕ್ಕೆ ರಾಜ್ಯಪಾಲರು ಕೂಡ ಬದ್ಧರಾಗಿದ್ದಾರೆ ಮತ್ತು ಸಂವಿಧಾನದ ಸೆಕ್ಷನ್ 161 ರ ಅಡಿಯಲ್ಲಿ ಕ್ಷಮಾದಾನವನ್ನು ನೀಡಿರುತ್ತಾರೆ. ರಾಜ್ಯಪಾಲರು ಕ್ಷಮಾಧಾನ ಕಡತವನ್ನು ರಾಷ್ಟ್ರಪತಿ ಕಚೇರಿಗೆ ರವಾನಿಸಿದ್ದರೂ ಅದು ರಾಷ್ಟ್ರಪತಿಗಳ ಪ್ರತಿಕ್ರಿಯೆಗೆ ಕಾಯುವುದಿಲ್ಲ ಎಂದು ಕೋರ್ಟ್​ ಹೇಳಿತ್ತು.

    ಕಳೆದ ವಾರ ನಡೆದ ವಿಚಾರಣೆಯಲ್ಲಿ, ಕ್ಷಮಾದಾನದ ಪ್ರಕರಣಗಳಲ್ಲಿ ರಾಷ್ಟ್ರಪತಿಗಳಿಗೆ ಮಾತ್ರ ವಿಶೇಷ ಅಧಿಕಾರವಿರುತ್ತದೆ ಎಂಬ ಕೇಂದ್ರದ ವಾದದ ವಿರುದ್ಧ ನ್ಯಾಯಾಲಯ ವಾಗ್ದಾಳಿ ನಡೆಸಿತು. ಹಾಗಾದರೆ, ಈ ಎಲ್ಲಾ ವರ್ಷಗಳಲ್ಲಿ ರಾಜ್ಯಪಾಲರು ನೀಡಿದ ಕ್ಷಮಾಧಾನವು ಅಸಂವಿಧಾನಿಕ ಎಂದರ್ಥವೇ ಎಂದು ನ್ಯಾಯಾಲಯ ಹೇಳಿ, ಕೇಂದ್ರ ಕ್ರಮವನ್ನು ಟೀಕಿಸಿತು. (ಏಜೆನ್ಸೀಸ್​)

    ಚೀನಾ ವಿಮಾನ ಪತನದಲ್ಲಿ 132 ಮಂದಿ ಸಾವು: ಬೇಕಂತಲೇ ಮಾಡಿದ ಕೃತ್ಯ, ಬೆಚ್ಚಿಬೀಳಿಸಿದೆ ಅಮೆರಿಕ ವರದಿ

    ನಡು ರಸ್ತೆಯಲ್ಲೇ ಕೈ ಕೈ ಮಿಲಾಯಿಸಿದ 20 ವಿದ್ಯಾರ್ಥಿನಿಯರು: ಜಡೆ ಜಗಳದಲ್ಲಿ ಪಾಲಕರು ಭಾಗಿ, ವಿಡಿಯೋ ವೈರಲ್​!

    ಮೇಲುಕೋಟೆಯಲ್ಲಿ ಶೀಘ್ರವೇ ನಿಲ್ಲಲಿದೆ ದೀವಟಿಗೆ ಸಲಾಂ! ಮುಜರಾಯಿ ಆಯುಕ್ತರಿಗೆ ಪತ್ರ ಬರೆದ ಮಂಡ್ಯ ಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts