More

    ಮೇಲುಕೋಟೆಯಲ್ಲಿ ಶೀಘ್ರವೇ ನಿಲ್ಲಲಿದೆ ದೀವಟಿಗೆ ಸಲಾಂ! ಮುಜರಾಯಿ ಆಯುಕ್ತರಿಗೆ ಪತ್ರ ಬರೆದ ಮಂಡ್ಯ ಡಿಸಿ

    ಮಂಡ್ಯ: ಮೇಲುಕೋಟೆಯಲ್ಲಿ ಶೀಘ್ರವೇ ದೀವಟಿಗೆ ಸಲಾಂ ನಿಲ್ಲಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ದೀವಟಿಗೆ ಸಲಾಂ ಬದಲಿಗೆ ಸಂಧ್ಯಾರತಿ ಎಂದು ಮರುನಾಮಕರಣ ಮಾಡುವಂತೆ ಮಂಡ್ಯ ಜಿಲ್ಲಾಧಿಕಾರಿ ಎಸ್​. ಅಶ್ವಥಿ ಶಿಫಾರಸ್ಸು ಮಾಡಿದ್ದಾರೆ ಎಂದು ಹೇಳಲಾಗಿದೆ.

    ಹೆಸರು ಬದಲಿಸುವಂತೆ ಮುಜರಾಯಿ ಆಯುಕ್ತರಿಗೆ ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಪತ್ರ ಬರೆದಿದ್ದಾರೆ. ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ದೀವಟಿಗೆ ಸಲಾಂ ಆರತಿ ನಡೆಯುತ್ತಿದೆ. ದೀವಟಿಗೆ ಸಲಾಂ ಆರತಿ ಹೆಸರು ಬದಲಿಸುವಂತೆ ಧಾರ್ಮಿಕ ಪರಿಷತ್ತು ಸದಸ್ಯ ನವೀನ್ ಎಂಬುವರು ಮಂಡ್ಯ ಡಿಸಿಗೆ ಮನವಿ ಮಾಡಿದ್ದರು.

    ಮನವಿ ಬಳಿಕ ವರದಿ ನೀಡುವಂತೆ ದೇವಾಲಯ ಇಒ ಹಾಗೂ ಪಾಂಡವಪುರ ಎಸಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ದೇವಾಲಯ ಅರ್ಚಕರು, ಸ್ಥಾನಿಕರು ಹಾಗೂ ಪರಿಚಾರಕರ ಸಮ್ಮುಖದಲ್ಲಿ ಈ ಕುರಿತು ಸಭೆ ನಡೆದಿದ್ದು, ಸಭೆಯಲ್ಲಿ ಸಲಾಂ ಹೆಸರು ಬದಲಾಯಿಸಿ ಸಂಧ್ಯಾರತಿ ಎಂದು ಕರೆಯುವಂತೆ ಅಭಿಪ್ರಾಯ ವ್ಯಕ್ತವಾಗಿದೆ.

    ಅಧಿಕಾರಿಗಳ ಮುಂದೆ ದೇವಾಲಯ ಸ್ಥಾನಿಕರು ಹಾಗೂ ಸಿಬ್ಬಂದಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಂಧ್ಯಾರತಿ ಎಂದು ಬದಲಿಸುವಂತೆ ಡಿಸಿಗೆ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ವರದಿ ಸಲ್ಲಿಸಿದ್ದಾರೆ. ಈ ವರದಿ ಆಧರಿಸಿ ಮುಜರಾಯಿ ಆಯುಕ್ತರಿಗೆ ಡಿಸಿ ಪತ್ರ ಬರೆದಿದ್ದಾರೆ. ದೀವಟಿಗೆ ಸಲಾಂ ಬದಲಿಗೆ ಸಂಧ್ಯಾರತಿ ಎಂದು ಉಲ್ಲೇಖಿಸಿ ಮುಂದಿನ ಆದೇಶಕ್ಕೆ ಡಿಸಿ ಮನವಿ ಮಾಡಿದ್ದು, ಮುಜರಾಯಿ ಇಲಾಖೆಯಿಂದ ಅಧಿಕೃತ ಆದೇಶ ಒಂದೇ ಬಾಕಿ ಇದೆ. (ದಿಗ್ವಿಜಯ ನ್ಯೂಸ್​)

    ನಿರ್ದೇಶಕ ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್​​​​: ಸಿನಿಮಾ ಯೋಜನೆಯನ್ನೇ ಕೈಬಿಟ್ಟ ಪುಷ್ಪರಾಜ್​!

    33 ದಿನಕ್ಕೆ 1200 ಕೋಟಿ ರೂ.; ತಿಂಗಳಾದರೂ ನಿಲ್ಲದ ರಾಕಿ ಭಾಯ್ ಓಟ

    ಬ್ಯಾಂಕಾಕ್​ನಲ್ಲಿ ಕಾಣೆಯಾದವರು; ಚಂದನ್ ಶೆಟ್ಟಿ, ಅಲೋಕ್ ಜತೆಯಾಗಿ ಗಾಯನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts