More

    ಬಿಡುಗಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರಾಜೀವ್ ಗಾಂಧಿ ಹಂತಕ

    ಮದುರೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹಂತಕರು ಬಿಡುಗಡೆ ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ಸೂಚಿಸಿದೆ. ಹಂತಕರನ್ನು ಬಿಡುಗಡೆ ಮಾಡುವ ರಾಜ್ಯ ಸರ್ಕಾರದ ತೀರ್ಮಾನವನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಹಂತಕರು ಕೋರಿದ್ದಾರೆ.

    ಮದುರೈ ಕೇಂದ್ರ ಕಾರಾಗೃಹದಲ್ಲಿರುವ ಹಂತಕರ ಪೈಕಿ ರವಿಚಂದ್ರನ್ ಈ ದಾವೆ ಹೂಡಿದಾತ. ಒಟ್ಟು 37 ವರ್ಷಗಳ ಕಾರಾಗೃಹ ವಾಸದಲ್ಲಿ ಈಗಾಗಲೇ 29 ವರ್ಷದ ಸಜೆಯನ್ನು ಅನುಭವಿಸಿದ್ದಾನೆ. ಹಂತಕರ ಪೈಕಿ ಇತರರು ಕೂಡ ಅವರಿಗೆ ವಿಧಿಸಲ್ಪಟ್ಟ ಸಜೆಯಲ್ಲಿ ಏಳು, 10 ಮತ್ತು 20 ವರ್ಷ ಸಜೆ ಅನುಭವಿಸಿದ್ದಾರೆ. ಅವಧಿ ಪೂರ್ವ ಬಿಡುಗಡೆಯನ್ನು ಹಂತಕರು ಕೋರಿದ್ದಾರೆ.

    ಇದನ್ನೂ ಓದಿ: ಭದ್ರತೆ ಒದಗಿಸಿದ ಪೊಲೀಸ್ ಇಲಾಖೆಗೆ 4.25 ಕೋಟಿ ರೂ. ಪಾವತಿಸಬೇಕಿದೆ ಎಎಸ್ಐ!

    ರಾಜೀವ್ ಹಂತಕರ ಬಿಡುಗಡೆ ವಿಚಾರ ರಾಜಕೀಯ ನೆಲೆಯಲ್ಲಿ ಮುಂದುವರಿದಿದ್ದು, ಏಳು ಹಂತಕರನ್ನು ಬಿಡುಗಡೆ ಮಾಡುವ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ತೆಗೆದುಕೊಂಡಿತ್ತು. ಆದರೆ, ಇದು ರಾಜ್ಯಪಾಲರ ಕಚೇರಿಯಲ್ಲಿ ಬಹುಕಾಲದಿಂದ ಬಾಕಿ ಉಳಿದಿದೆ. ಇದನ್ನು ಪ್ರಶ್ನಿಸಿ ರವಿಚಂದ್ರನ್ ಕೋರ್ಟ್ ಮೆಟ್ಟಿಲೇರಿದ್ದ. (ಏಜೆನ್ಸೀಸ್)

    ‘ಲಾಲೂ ಯಾದವ್ ತೋರಿಸಿಯೇ ಬಿಟ್ರು ತಮ್ಮ ಅಸಲೀ ಮುಖವನ್ನ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts