More

    ಅತ್ಯಾಚಾರ ಮಾಡಿ ಚಿತ್ರೀಕರಣ: ಮಾಜಿ ಶಾಸಕ ಸೇರಿ 9 ಮಂದಿ ವಿರುದ್ಧ ಮಹಿಳೆ ದೂರು

    ಜೋಧ್‌ಪುರ: ಬಾರ್ಮರ್‌ನ ಮಾಜಿ ಶಾಸಕ ಮೇವರಂ ಜೈನ್ ಮತ್ತು ಆರ್‌ಪಿಎಸ್ ಅಧಿಕಾರಿ ಆನಂದ್ ಸಿಂಗ್ ರಾಜಪುರೋಹಿತ್ ಸೇರಿದಂತೆ ಒಂಬತ್ತು ಜನರು ತಮ್ಮ ಮೇಲೆ ಅತ್ಯಾಚಾರ ನಡೆಸಿ, ಕಿರುಕುಳ ನೀಡಿದ್ದಾರೆ. ಅತ್ಯಾಚಾರವನ್ನು ಚಿತ್ರೀಕರಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬುಧವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ.

    ಮೇವಾರಾಂ ಜೈನ್ ಅವರು ಮೂರು ಬಾರಿ ಕಾಂಗ್ರೆಸ್ ಟಿಕೆಟ್‌ನಲ್ಲಿ ರಾಜಸ್ಥಾನದ ಬಾರ್ಮರ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಪ್ರಿಯಾಂಕಾ ಚೌಧರಿ ವಿರುದ್ಧ ಸೋತಿದ್ದಾರೆ.

    ಜೋಧಪುರದ ರಾಜೀವ್ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯು ತಮ್ಮ ಅಪ್ರಾಪ್ತ ಸ್ನೇಹಿತೆ ಮೇಲೆಯೂ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ಇತರ ಹುಡುಗಿಯರನ್ನು ತನ್ನ ಬಳಿಗೆ ಕರೆತರುವಂತೆ ಮೇಲೆ ಒತ್ತಡ ಹೇರಿದ್ದಾನೆ ಎಂದು ಮಹಿಳೆ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.

    ಆರೋಪಿಗಳಲ್ಲಿ ಇನ್ನೂ ಇಬ್ಬರು ಪೊಲೀಸ್ ಅಧಿಕಾರಿಗಳಾದ ಬಾರ್ಮರ್ ಎಸ್‌ಎಚ್‌ಒ ಗಂಗಾರಾಮ್ ಖಾವಾ, ಸಬ್ ಇನ್ಸ್‌ಪೆಕ್ಟರ್ ದೌದ್ ಖಾನ್ ಹಾಗೂ ಪ್ರಧಾನ್ ಗಿರ್ಧಾರಿ ಸಿಂಗ್ ಸೋಧಾ ಸೇರಿದ್ದಾರೆ.

    ಜೈನ್ ಮತ್ತು ಇತರ 8 ಜನರ ವಿರುದ್ಧ ಸಾಮೂಹಿಕ ಅತ್ಯಾಚಾರ, ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಶಕೀಲ್ ಅಹ್ಮದ್ ತಿಳಿಸಿದ್ದಾರೆ.

    “2021 ರಿಂದ ಜೈನ್ ತಮ್ಮ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. ಜೈನ್ ಅವರಿಗೆ ತನ್ನನ್ನು ಪರಿಚಯಿಸಿದ ರಾಮ್ ಸ್ವರೂಪ್ ಐದು ವರ್ಷಗಳಿಂದ ತಮ್ಮ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ” ಎಂದು ಮಹಿಳೆ ಆರೋಪಿಸಿದ್ದಾಳೆ. ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ತನ್ನ ತಂದೆಯ ಅನಾರೋಗ್ಯದ ಕಾರಣ, ಐದು ವರ್ಷಗಳ ಹಿಂದೆ ಬಾರ್ಮರ್‌ನಲ್ಲಿ ರಾಮ್ ಸ್ವರೂಪ್ ಸಂಪರ್ಕಕ್ಕೆ ಬಂದೆ. ಆತ ತನಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಆಕೆಯ ಅಸಹಾಯಕತೆ ಲಾಭ ಪಡೆದುಕೊಂಡು, ಆಕೆಯ ಮೇಲೆ ಅತ್ಯಾಚಾರವೆಸಗಿದ, ಈ ಕೃತ್ಯಗಳನ್ನು ರೆಕಾರ್ಡ್ ಮಾಡಿ, ಅವಳನ್ನು ಲೈಂಗಿಕವಾಗಿ ಬಳಸಿಕೊಳ್ಳುವುದನ್ನು ಮುಂದುವರೆಸಿದ ಎಂದು ಆರೋಪಿಸಲಾಗಿದೆ.

    2021 ರಲ್ಲಿ ಬಾರ್ಮರ್ನ ಶಾಸಕರಾಗಿದ್ದ ಜೈನ್‌ ಅವರಿಗೆ ತನ್ನ ಫ್ಲಾಟ್‌ನಲ್ಲಿ ರಾಮ್ ಸ್ವರೂಪ್ ತನ್ನನ್ನು ಪರಿಚಯಿಸಿದ. ಇಬ್ಬರೂ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಅಂದಿನಿಂದ ನಿರಂತರವಾಗಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    ತನ್ನ ಹದಿಹರೆಯದ ಮಗಳಿಗೆ ಕಿರುಕುಳ ನೀಡಿದರು, ತನ್ನ ಸ್ನೇಹಿತೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದರು. ಇನ್ನಷ್ಟು ಮಹಿಳೆಯರನ್ನೂ ಕರೆತರುವಂತೆ ಒತ್ತಾಯಿಸಿದರು ಎಂದು ಮಹಿಳೆ ಆಪಾದಿಸಿದ್ದಾಳೆ.

    ಪೊಲೀಸ್ ಅಧಿಕಾರಿಗಳು ಮತ್ತು ಇತರ ಆರೋಪಿಗಳು ಈ ವಿಷಯವನ್ನು ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದರು. ಅಲ್ಲದೆ, ಕೆಲವು ಖಾಲಿ ಕಾಗದಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದರು ಎಂದೂ ಮಹಿಳೆ ಹೇಳಿದ್ದಾಳೆ.

    ರಾಮ್ ಸ್ವರೂಪ್ ಅವರು 2022 ರ ನವೆಂಬರ್‌ನಲ್ಲಿ ಬಾರ್ಮರ್‌ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐದು ಜನರ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು 50 ಲಕ್ಷ ರೂಪಾಯಿ ಬೇಡಿಕೆಯ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

    ಮೇವಾರಾಂ ಜೈನ್ ಅವರ ಕೆಲವು ಅಶ್ಲೀಲ ಚಿತ್ರಗಳು/ಸಿಡಿಗಳು ಒಂದು ವರ್ಷದ ಹಿಂದೆ ಹೊರಬಂದಿದ್ದವು. ಆದರೆ, ಇವುಗಳು ತಿರುಚಿದ ಚಿತ್ರಗಳಾಗಿವೆ ಎಂದು ಅವರು ಹೇಳಿದ್ದರಲ್ಲದೆ, ಬಾರ್ಮರ್‌ನ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಈ ಪ್ರಕರಣದಲ್ಲಿ 5 ಕೋಟಿ ರೂ. ಹಣದ ವಿನಿಮಯ ನಡೆದಿದೆ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಜೈಪುರದ ಜಾರಿ ನಿರ್ದೇಶನಾಲಯದ ವಲಯ ಘಟಕವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಿದೆ.

    ಕಮರ್ಷಿಯಲ್​ ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಕೆ: 39.50 ರೂಪಾಯಿ ಕಡಿತ ಆಗಿದ್ದೇಕೆ?

    ಸಂಸದರ ಅಮಾತನು ವಿರೋಧಿಸಿ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ: ಪ್ರತಿಪಕ್ಷಗಳ ನಾಯಕರು ಹೇಳಿದ್ದೇನು?

    ಪಡೆದ ಡಿಗ್ರಿಗಳ ಸಂಖ್ಯೆ 20; ಐಪಿಎಸ್​, ಐಎಎಸ್​ ಪಾಸಾದರೂ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ; ಯಾರೂ ಈ ಭಾರತೀಯ ಪ್ರತಿಭಾವಂತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts