More

    ರಾಜಸ್ಥಾನ ರಾಯಲ್ಸ್​ ಫೀಲ್ಡಿಂಗ್ ಕೋಚ್‌ಗೆ ಕರೊನಾ ಪಾಸಿಟಿವ್

    ನವದೆಹಲಿ: ಯುಎಇಯಲ್ಲಿ ಐಪಿಎಲ್ ಆಯೋಜನೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಕರೊನಾ ಪರೀಕ್ಷೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್ ವರದಿ ಪಾಸಿಟಿವ್ ಬಂದಿದೆ. ಐಪಿಎಲ್ ಫ್ರಾಂಚೈಸಿಗಳ ಪೈಕಿ ಇದು ಮೊದಲ ಕರೊನಾ ಪ್ರಕರಣವಾಗಿದೆ.

    ರಾಜಸ್ಥಾನ ರಾಯಲ್ಸ್ ತಂಡದ ಇತರ ಸದಸ್ಯರ ವರದಿಗಳು ನೆಗೆಟಿವ್ ಬಂದಿವೆ. ಮುಂದಿನ ವಾರ ಮುಂಬೈನಲ್ಲಿ ಒಗ್ಗೂಡುವುದಕ್ಕೆ ಪೂರ್ವಭಾವಿಯಾಗಿ ಈ ಕರೊನಾ ಪರೀಕ್ಷೆ ನಡೆಸಲಾಗಿದೆ ಎಂದು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಬುಧವಾರ ತಿಳಿಸಿದೆ.

    ಮಾಜಿ ಕ್ರಿಕೆಟಿಗ ದಿಶಾಂತ್ ಯಾಗ್ನಿಕ್ ಸದ್ಯ ತವರು ನಗರ ಉದಯ್‌ಪುರದಲ್ಲಿದ್ದು, ಆಸ್ಪತ್ರೆಯಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಪಡುವಂತೆ ಸೂಚಿಸಲಾಗಿದೆ. 2 ವಾರಗಳ ಬಳಿಕ ಅವರು 24 ಗಂಟೆಗಳ ಅವಧಿಯಲ್ಲಿ 2 ಬಾರಿ ಕರೊನಾ ಪರೀಕ್ಷೆಗೆ ಒಳಪಡಲಿದ್ದು, ಎರಡೂ ವರದಿ ನೆಗೆಟಿವ್ ಬಂದರಷ್ಟೇ ಯುಎಇಗೆ ಪ್ರಯಾಣಿಸಲಿದ್ದಾರೆ. ಯಾಗ್ನಿಕ್ ಜತೆಗೆ ತಂಡದ ಯಾವುದೇ ಆಟಗಾರ ಕಳೆದ 10ದಿನಗಳಲ್ಲಿ ನೇರಸಂಪರ್ಕ ಹೊಂದಿರಲಿಲ್ಲ ಎಂದು ್ರಾಂಚೈಸಿ ಸ್ಪಷ್ಟಪಡಿಸಿದೆ.

    ಇದನ್ನೂ ಓದಿ: 2022ರವರೆಗೆ ಚೆನ್ನೈ ಸೂಪರ್‌ಕಿಂಗ್ಸ್‌ನಲ್ಲೇ ಧೋನಿ ಆಟ!

    37 ವರ್ಷದ ದಿಶಾಂತ್ ಯಾಗ್ನಿಕ್ ಎಡಗೈ ಬ್ಯಾಟ್ಸ್‌ಮನ್-ವಿಕೆಟ್ ಕೀಪರ್ ಆಗಿದ್ದರು. ಅವರು ಐಪಿಎಲ್‌ನಲ್ಲಿ 25 ಪಂದ್ಯ ಆಡಿದ್ದು, 170 ರನ್ ಬಾರಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು ರಾಜಸ್ಥಾನ ಪರ 50 ಪಂದ್ಯಗಳಲ್ಲಿ 1,754 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 9 ಅರ್ಧಶತಕಗಳು ಸೇರಿವೆ. 41 ಲಿಸ್ಟ್ ಎ ಪಂದ್ಯಗಳಲ್ಲಿ 2 ಶತಕ, 4 ಅರ್ಧಶತಕಗಳ ಸಹಿತ 945 ರನ್ ಬಾರಿಸಿದ್ದಾರೆ.

    ಐಪಿಎಲ್ ಪ್ರಾಯೋಜಕತ್ವಕ್ಕೆ ಬೆಂಗಳೂರು ಮೂಲದ ಕಂಪನಿ ಪೈಪೋಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts