More

    52 ಲಕ್ಷಕ್ಕೂ ಮತದಾರರ ಒಲವು ಯಾರ ಪರ?: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ನ. 25ರಂದು ಮತದಾನ

    ನವದೆಹಲಿ: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಶನಿವಾರ (ನ. 25) ಮತದಾನ ನಡೆಯಲಿದೆ. 51,756 ಮತಗಟ್ಟೆಗಳನ್ನು ಹೊಂದಿರುವ ರಾಜ್ಯದಲ್ಲಿ ಅಂದಾಜು 52,538,659 ಮತದಾರರಿದ್ದಾರೆ. ಇದರಲ್ಲಿ 27,358,965 ಪುರುಷರು ಮತ್ತು 25,179,694 ಮಹಿಳೆಯರಿದ್ದಾರೆ. ರಾಜಸ್ಥಾನದ 200 ವಿಧಾನಸಭೆ ಕ್ಷೇತ್ರಗಳು ಶನಿವಾರ ಮತದಾನ ಮಾಡಲು ಸಿದ್ಧವಾಗಿವೆ.

    ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಮಹಿಳೆಯರ ಮೇಲಿನ ಅಪರಾಧ, ತುಷ್ಟೀಕರಣ, ಭ್ರಷ್ಟಾಚಾರ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಂತಹ ವಿಷಯಗಳಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

    ಬಿಗಿ ಭದ್ರತೆಯ ನಡುವೆ 200 ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ಪ್ರವೀಣ್ ಗುಪ್ತಾ ತಿಳಿಸಿದ್ದಾರೆ.

    61,021 ವೃದ್ಧರು ಮತ್ತು ವಿಶೇಷಚೇತನರು ಈಗಾಗಲೇ ಮನೆ ಮತದಾನದ ಮೂಲಕ ತಮ್ಮ ಮತ ಚಲಾಯಿಸಿದ್ದಾರೆ.

    ರಾಜಸ್ಥಾನದಲ್ಲಿ 2018 ರ ಚುನಾವಣೆಯಲ್ಲಿ 74.72% ಮತದಾನವಾಗಿದೆ. ಶನಿವಾರದ ಮತದಾನದಲ್ಲಿ ರಾಜ್ಯದ ಜನರು 199 ಸ್ಥಾನಗಳಲ್ಲಿ 1,862 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತಾರೆ. ಶ್ರೀಗಂಗಾನಗರದ ಕರಣ್‌ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನಾರ್ ನಿಧನದಿಂದಾಗಿ ಈ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ.

    ಪ್ರತಿ ಬಾರಿಯೂ ಅದಲುಬದಲು:
    ರಾಜಸ್ಥಾನದಲ್ಲಿ ಪ್ರತಿ ಚುನಾವಣೆಯಲ್ಲಿ ಪಕ್ಷಗಳನ್ನು ಬದಲಾಯಿಸುವ 25 ವರ್ಷಗಳ ಪ್ರವೃತ್ತಿ ನಡೆದುಕೊಂಡುಬಂದಿದೆ. ಅಂದರೆ, ಸದ್ಯ ಅಧಿಕಾರದಲ್ಲಿರುವ ಪಕ್ಷ ಸೋತು, ವಿರೋಧ ಪಕ್ಷವು ಅಧಿಕಾರ ಗಳಿಸುವುದು ವಾಡಿಕೆಯಾಗಿದೆ. ಈ ಬಾರಿಯೂ ಇದೇ ಸಂಪ್ರದಾಯ ಮುಂದುವರಿದರೆ ಬಿಜೆಪಿ ಜಯ ಗಳಿಸಲಿದೆ.

    ಪ್ರಸ್ತುತ, ಕಾಂಗ್ರೆಸ್ 107 ಶಾಸಕರನ್ನು ಹೊಂದಿದೆ, ಬಿಜೆಪಿ 70, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ 3, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಭಾರತೀಯ ಟ್ರೈಬಲ್ ಪಾರ್ಟಿ (ಬಿಟಿಪಿ) ತಲಾ ಇಬ್ಬರು, ರಾಷ್ಟ್ರೀಯ ಲೋಕದಳದಿಂದ ಒಬ್ಬರು ಮತ್ತು 13 ಪಕ್ಷೇತರರು ಮತ್ತು ಎರಡು ಸ್ಥಾನಗಳು (ಉದಯಪುರ ಮತ್ತು ಕರಣಪುರ) ಖಾಲಿ ಇವೆ.

    ಕೆಲವೆಡೆ ಘರ್ಷಣೆ:
    ಏತನ್ಮಧ್ಯೆ, ಶುಕ್ರವಾರವೂ ಹಲವು ಪ್ರದೇಶಗಳಲ್ಲಿ ಎರಡೂ ಪಕ್ಷಗಳ ನಡುವೆ ಘರ್ಷಣೆಗಳು ವರದಿಯಾಗಿವೆ.
    ಪ್ರತಿಪಕ್ಷದ ನಾಯಕ ಮತ್ತು ತಾರಾನಗರದ ಬಿಜೆಪಿ ಅಭ್ಯರ್ಥಿ ರಾಜೇಂದ್ರ ರಾಥೋಡ್ ಅವರು ತಮ್ಮ ಚುನಾವಣಾ ಉಸ್ತುವಾರಿ ಸುಶೀಲ್ ಸರವ್ಗಿ ಅವರನ್ನು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಅಪಹರಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.

    ಕೊಲಾಯತ್ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಭನ್ವರ್ ಸಿಂಗ್ ಭಾಟಿ ಅವರ ಕಾರಿಗೆ ಗುರುವಾರ ತಡರಾತ್ರಿ ಡಿಕ್ಕಿ ಹೊಡೆದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಬಿಕಾನೇರ್ ಪೊಲೀಸರು ಬಂಧಿಸಿದ್ದಾರೆ. ಶಾಸಕರ ಕಾರಿಗೆ ಡಿಕ್ಕಿ ಹೊಡೆದ ಕಾರಿನಲ್ಲಿ ನಾಲ್ವರಿದ್ದು, ಒಬ್ಬರನ್ನು ಬಂಧಿಸಲಾಗಿದ್ದು, ಚಾಲಕ ನವಲ್ ಕಿಶೋರ್ ಸೇರಿದಂತೆ ಇತರರು ತಲೆಮರೆಸಿಕೊಂಡಿದ್ದಾರೆ ಎಂದು ದೇಶ್ನೋಕ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಕಶ್ಯಪ್ ರಾಘವೆ ತಿಳಿಸಿದ್ದಾರೆ.

    ಶಾಂತಿಯುತ ಚುನಾವಣೆಗೆ ಮನವಿ ಮಾಡಿದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಉಮೇಶ್ ಮಿಶ್ರಾ, “ರಾಜ್ಯದಲ್ಲಿ 700 ಕಂಪನಿ ಅರೆ ಮಿಲಿಟರಿ, ಗೃಹ ರಕ್ಷಕರು ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶನಿವಾರದಂದು ಶಾಂತಿಯುತ ಮತ್ತು ನ್ಯಾಯಸಮ್ಮತ ಚುನಾವಣೆ ಪ್ರಕ್ರಿಯೆ ನಡೆಸಲು ಅಂದಾಜು 70 ಸಾವಿರ ಪೊಲೀಸ್ ಸಿಬ್ಬಂದಿ, 18 ಸಾವಿರ ಗೃಹ ರಕ್ಷಕರು, 2 ಸಾವಿರ ರಾಜಸ್ಥಾನ ಗಡಿ ಗೃಹ ರಕ್ಷಕರು, ವಿವಿಧ ರಾಜ್ಯಗಳಿಂದ 15 ಸಾವಿರ ಗೃಹ ರಕ್ಷಕರು ಮತ್ತು 120 ಕಂಪನಿ ಆರ್‌ಎಸಿ ಸಿಬ್ಬಂದಿ ಈಗಾಗಲೇ ಆಗಮಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಸುರಂಗ ರಕ್ಷಣಾ ಕಾರ್ಯದಲ್ಲಿ ಗುರುವಾರದಿಂದ ಪ್ರಗತಿಯಿಲ್ಲ/ ಕಾರ್ಮಿಕರ ರಕ್ಷಣೆ ಇನ್ನಷ್ಟು ವಿಳಂಬ

    ಚೀನಾದಲ್ಲಿ ಈ ಬಾರಿ ಕೋವಿಡ್ ಬದಲು ಇನ್‌ಫ್ಲುಯೆಂಜಾ/ ಭಾರತದಲ್ಲಿ ಸದ್ಯಕ್ಕಿಲ್ಲ ಆತಂಕ

    ತಾಂಡವ್​ ವಿವಾದ ತಂದ ಫಜೀತಿ; ಹಾರ್ಟ್​ ಅಟ್ಯಾಕ್​, ಖಿನ್ನತೆಗೆ ಒಳಗಾಗಿದ್ದ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್​ ಜೀವನದ ರಿಯಲ್​ ಸ್ಟೋರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts