ಚೀನಾದಲ್ಲಿ ಈ ಬಾರಿ ಕೋವಿಡ್ ಬದಲು ಇನ್‌ಫ್ಲುಯೆಂಜಾ/ ಭಾರತದಲ್ಲಿ ಸದ್ಯಕ್ಕಿಲ್ಲ ಆತಂಕ

blank
blank

ನವದೆಹಲಿ: ಚೀನಾದಲ್ಲಿ ಉಸಿರಾಟದ ಕಾಯಿಲೆಯ ಪ್ರಕರಣಗಳು ಮತ್ತೆ ಹೆಚ್ಚಾಗಿವೆ. ವಿಶೇಷವಾಗಿ ಮಕ್ಕಳಲ್ಲಿ, ಈ ಸಮಸ್ಯೆ ಉಲ್ಬಣಿಸುತ್ತಿದೆ. ಆದರೆ, ನೆರೆಯ ಭಾರತದಲ್ಲಿ ಈ ಆತಂಕ ಇಲ್ಲ ಎನ್ನುವುದು ಸಮಾಧಾನಕರ ಸಂಗತಿ.
ಚೀನಾದ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ಏವಿಯನ್ ಇನ್‌ಫ್ಲುಯೆಂಜಾ(H9N2) ಮತ್ತು ಉಸಿರಾಟದ ಕಾಯಿಲೆಗಳಿಂದ ಭಾರತಕ್ಕೆ ಹೆಚ್ಚು ಅಪಾಯ ಇಲ್ಲ ಎಂದು ಸ್ಷಪ್ಟಪಡಿಸಿದೆ.

ಚೀನಾದ ಮಕ್ಕಳು H9N2 ಮತ್ತು ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸರ್ಕಾರ ಹೇಳಿದೆ. ಇದೇ ವೇಳೆ ಚೀನಾದಲ್ಲಿ ಪ್ರಸ್ತುತ ಇನ್ಫ್ಲುಯೆಂಜಾ ಪರಿಸ್ಥಿತಿಯಿಂದ ಹೊರಹೊಮ್ಮಬಹುದಾದ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಿಸಲು ಕೂಡ ಭಾರತ ಸಿದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಅನಾರೋಗ್ಯದ ಬಗ್ಗೆ ವಿವರವಾದ ಮಾಹಿತಿಗಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಚೀನಾಕ್ಕೆ ಅಧಿಕೃತ ವಿನಂತಿಯನ್ನು ಕೋರಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಯಾವುದೇ ತಿಳಿದಿರುವ ಅಥವಾ ಇನ್ನೂ ಗುರುತಿಸದ ಹೊಸ ರೋಗ ಇದಾಗಿರದಿದ್ದರೂ ಈ ಹಿಂದೆ ಕೋವಿಡ್ ಸಾಂಕ್ರಾಮಿಕ ಹರಡಿದ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ WHO ಎಚ್ಚರಿಕೆ ತೋರುತ್ತಿದೆ.

ಇನ್‌ಫ್ಲುಯೆಂಜಾ, ಕೋವಿಡ್ 19 ಮತ್ತು ಇತರ ಉಸಿರಾಟದ ರೋಗಗಳ ವಿರುದ್ಧ ಶಿಫಾರಸು ಮಾಡಲಾದ ಲಸಿಕೆಗಳನ್ನು ಚೀನಾದಲ್ಲಿ ಜನರು ಅನುಸರಿಸಬೇಕು ಎಂದು WHO ಶಿಫಾರಸು ಮಾಡಿದೆ. ಅನಾರೋಗ್ಯದಿಂದ ಬಳಲುತ್ತಿರುವವರಿಂದ ಅಂತರ ಕಾಯ್ದುಕೊಳ್ಳುವುದು, ಅನಾರೋಗ್ಯದ ಸಮಯದಲ್ಲಿ ಮನೆಯಲ್ಲೇ ಇರುವುದು, ಪರೀಕ್ಷೆಗೆ ಒಳಪಡುವುದು ಮತ್ತು ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಆರೈಕೆ, ಮಾಸ್ಕ್ ಧರಿಸುವುದು, ಉತ್ತಮ ಗಾಳಿ ಖಾತ್ರಿಪಡಿಸಿಕೊಳ್ಳುವುದು ಮತ್ತು ನಿಯಮಿತವಾಗಿ ಕೈ ತೊಳೆಯುವುದನ್ನು ಅಭ್ಯಾಸ ಮಾಡುವಂತೆ ಸಲಹೆ ನೀಡಿದೆ.

ಚೀನಾಕ್ಕೆ ಪ್ರಯಾಣಿಸುವವರು ಹುಷಾರು: ಚೀನಾಕ್ಕೆ ಪ್ರಯಾಣಿಸುವವರಿಗೆ WHO ಯಾವುದೇ ನಿರ್ದಿಷ್ಟ ಕ್ರಮಗಳನ್ನು ಶಿಫಾರಸು ಮಾಡದಿದ್ದರು ಸಹ, ಉಸಿರಾಟದ ಕಾಯಿಲೆಯ ಲಕ್ಷಣಗಳನ್ನು ಅನುಭವಿಸುವ ಜನರು ಪ್ರಯಾಣ ತಪ್ಪಿಸಬೇಕು ಎಂದು ಅದು ಎಚ್ಚರಿಕೆ ನೀಡಿದೆ.

ನವೆಂಬರ್ 13 ರಂದು ಪತ್ರಿಕಾಗೋಷ್ಠಿಯಲ್ಲಿ, ರಾಷ್ಟ್ರೀಯ ಆರೋಗ್ಯ ಆಯೋಗದ ಚೀನೀ ಅಧಿಕಾರಿಗಳು ಚೀನಾದಲ್ಲಿ ಉಸಿರಾಟದ ಕಾಯಿಲೆಗಳ ಹೆಚ್ಚಳವನ್ನು ಒಪ್ಪಿಕೊಂಡಿದ್ದಾರೆ. ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್‌ನ ಮಾಹಿತಿ ಪ್ರಕಾರ, ಅಕ್ಟೋಬರ್‌ನಿಂದ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವಾಗಲೂ ಇನ್ಫ್ಲುಯೆಂಜಾ ಪ್ರಕರಣಗಳು ಹೆಚ್ಚಿವೆ.

Share This Article

ಹೃದಯಾಘಾತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಎಣ್ಣೆ ಇದು! ಹೊಸ ಸಂಶೋಧನೆಯಿಂದ ಸಾಬೀತು | Oil

Oil: ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಹೆಚ್ಚು ಬಳಸುವ ವಸ್ತುಗಳಲ್ಲಿ ಒಂದಾಗಿದೆ. ಎಣ್ಣೆ ಇಲ್ಲದೆ ಬೇಯಿಸಿದ ಆಹಾರಗಳು…

ಈ ಅಭ್ಯಾಸಗಳು ನಿಮ್ಮನ್ನು ಎಂದಿಗೂ ಶ್ರೀಮಂತರಾಗಲು ಬಿಡುವುದಿಲ್ಲ, ಅವುಗಳನ್ನು ತಕ್ಷಣ ಬಿಟ್ಟುಬಿಡಿ | Chanakya Niti

Chanakya Niti: ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ಪಿತಾಮಹ ಎಂದೂ ಕರೆಯಲ್ಪಡುವ ಆಚಾರ್ಯ ಚಾಣಕ್ಯ ಅವರು ತಮ್ಮ…