More

    ತಾಂಡವ್​ ವಿವಾದ ತಂದ ಫಜೀತಿ; ಹಾರ್ಟ್​ ಅಟ್ಯಾಕ್​, ಖಿನ್ನತೆಗೆ ಒಳಗಾಗಿದ್ದ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್​ ಜೀವನದ ರಿಯಲ್​ ಸ್ಟೋರಿ

    ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗ ಕಂಡ ಟ್ಯಾಲೆಂಟೆಡ್​ ನಿರ್ದೇಶಕ, ನಿರ್ಮಾಪಕ ಹಾಗೂ ಸ್ಕ್ರಿಪ್ಟ್​ ಬರಹಗಾರ ಅನುರಾಗ್ ಕಶ್ಯಪ್. ಹಿಟ್​ ಚಿತ್ರಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ ಅನುರಾಗ್​ ಒಂದೆರಡು ವರ್ಷಗಳ ಹಿಂದೆ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದರು. ಹೆಚ್ಚು ಮದ್ಯಪಾನ ಕೂಡ ಮಾಡುತ್ತಿದ್ದರು. ಎರಡು ಬಾರಿ ಹೃದಯಾಘಾತಗಳನ್ನು ಎದುರಿಸಿ ಬದುಕುಳಿದರು ಕೂಡ. ತಮ್ಮ ಜೀವನದ ಸಂಕಷ್ಟದ ಸಮಯವನ್ನು ವಾಷಿಗ್ಟನ್​ ಪೋಸ್ಟ್​ ಪತ್ರಿಕೆಯ ಸಂದರ್ಶನದಲ್ಲಿ ಅವರು ಹಂಚಿಕೊಂಡಿದ್ದಾರೆ.

    ನೆಟ್‌ಫ್ಲಿಕ್ಸ್‌ಗಾಗಿ ಸುಕೇತು ಮೆಹ್ತಾ ಅವರ ‘ಮ್ಯಾಕ್ಸಿಮಮ್ ಸಿಟಿ’ ರೂಪಾಂತರ ಕಾರ್ಯದಲ್ಲಿ ಅವರು ತೊಡಗಿದ್ದರು. 2021 ರ ‘ತಾಂಡವ್’ ವಿವಾದದ ನಂತರ ದೇಶದ ಅಂದಿನ ರಾಜಕೀಯ ವಾತಾವರಣದ ನಂತರ ಒಟಿಟಿ (OTT) ದೈತ್ಯ ಕಂಪನಿ ನೆಟ್​ಫ್ಲಿಕ್ಸ್ ಈ ಯೋಜನೆಯಿಂದ ಹೊರಗುಳಿಯಿತು. ತಾಂಡವ ವಿವಾದದ ನಂತರ ವಿವಿಧ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾದ ಹಲವಾರು ವೆಬ್ ಶೋಗಳು ಮತ್ತು ಚಲನಚಿತ್ರಗಳನ್ನು ಸ್ಥಗಿತಗೊಳಿಸಲಾಯಿತು.

    ಅನುರಾಗ್ ಅವರು ಸಂದರ್ಶನದಲ್ಲಿ, ತಮ್ಮ ಸ್ಥಗಿತಗೊಂಡ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಈ ಘಟನೆಯು ತಮ್ಮ ಮೇಲೆ ಹೇಗೆ ಪರಿಣಾಮ ಬೀರಿತು ಎಂದು ಹೇಳಿಕೊಂಡಿದ್ದಾರೆ. ಎಷ್ಟರ ಮಟ್ಟಿ ಪರಿಣಾಮ ಬೀರಿತೆಂದರೆ, ಅವರು ಖಿನ್ನತೆಗೆ ಒಳಗಾಗಿದ್ದರು, ಹೆಚ್ಚು ಮದ್ಯಪಾನ ಮಾಡಿದ್ದರು. ಅಲ್ಲದೆ, ಆ ಸಮಯದಲ್ಲಿ ಎರಡು ಹೃದಯಾಘಾತಗಳನ್ನು ಸಹ ಅನುಭವಿಸಿದರು. ಈ ಎಲ್ಲ ಸಂಗತಿಗಳನ್ನು ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

    ಅನುರಾಗ್ ಕಶ್ಯಪ್ ಅವರ ‘ಮ್ಯಾಕ್ಸಿಮಮ್ ಸಿಟಿ’ ರೂಪಾಂತರದಿಂದ ನೆಟ್‌ಫ್ಲಿಕ್ಸ್ ಹೊರಹೋಗಿದ್ದು ಅವರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿತು. “ಇದು ನನ್ನ ಅತ್ಯುತ್ತಮ ಕೆಲಸವಾಗಿತ್ತು. ಅಂತಹ ಪ್ರಾಮಾಣಿಕ, ಮಹತ್ವದ ಕೆಲಸವನ್ನು ನಾನು ಎಂದಿಗೂ ಮಾಡಿಲ್ಲ” ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ‘ಮ್ಯಾಕ್ಸಿಮಮ್ ಸಿಟಿ’ಯಿಂದ ನೆಟ್‌ಫ್ಲಿಕ್ಸ್‌ನ ನಿರ್ಗಮನವು ಸೂಕ್ತ ತಾರ್ಕಿಕ ಕಾರಣ ಹೊಂದಿರಲಿಲಲ್ಲ ಎಂದೂ ಅನುರಾಗ್ ಹೇಳಿದ್ದಾರೆ. ತಾವು ಇದಕ್ಕಾಗಿ ಆಯ್ದುಕೊಂಡ ವಿಷಯವು ಸೂಕ್ಷ್ಮವಾಗಿತ್ತು ಇಲ್ಲವೆ OTT ಪ್ಲಾಟ್‌ಫಾರ್ಮ್‌ಗೆ ತಾವು ಸೂಕ್ಷ್ಮ ವ್ಯಕ್ತಿ ಎಂದು ಅವರು ಭಾವಿಸಿದ್ದಾರೆ.

    ಈ ಘಟನೆ ತಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿತು ಎಂದು ಅನುರಾಗ್ ಹೇಳಿದ್ದಾರೆ.
    “ಮಾಕ್ಸಿಮಮ್​ ಸಿಟಿಗೆ ನನ್ನ ಶಕ್ತಿಯೆಲ್ಲ ಹೋಯಿತು. ನಾನು ಎದೆಗುಂದಿದ್ದೇನೆ. ನಾನು ಪೂರ್ಣವಾಗಿ ಕಳೆದುಕೊಂಡಿದ್ದೇನೆ’ ಎಂದು ಚಿತ್ರನಿರ್ಮಾಪಕರು ಕೂಡ ಪ್ರಾಜೆಕ್ಟ್ ಬಗ್ಗೆ ಹೇಳಿದ್ದರು.

    ಸಂದರ್ಶನದಲ್ಲಿ ಕಶ್ಯಪ್ ಅವರು “ಮ್ಯಾಕ್ಸಿಮಮ್ ಸಿಟಿ’ಯ ಮಹತ್ವವನ್ನು ಚರ್ಚಿಸಿದರು, ಅದನ್ನು ತಮ್ಮ ಅತ್ಯುತ್ತಮ ಕೆಲಸ ಎಂದು ಹೇಳಿಕೊಂಡರು. ಅಲ್ಲದೆ, ಇದರ ಮಹತ್ವವನ್ನು ಒತ್ತಿ ಹೇಳಿದರು. ತಾಂಡವ್ ವಿವಾದದ ನಂತರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಅಳವಡಿಸಿಕೊಂಡ ಸ್ವಯಂ-ಸೆನ್ಸಾರ್‌ಶಿಪ್ ಬಗ್ಗೆ ಅವರು ನಿರಾಸೆ ವ್ಯಕ್ತಪಡಿಸಿದರು, ಇದನ್ನು “ಅದೃಶ್ಯ ಸೆನ್ಸಾರ್‌ಶಿಪ್” (nvisible censorship) ಎಂದೂ ಅವರು ಉಲ್ಲೇಖಿಸಿದ್ದಾರೆ.

    ಮ್ಯಾಕ್ಸಿಮಮ್ ಸಿಟಿ ಬಗ್ಗೆ ಮಾತನಾಡಿದ ಅವರು, “ಇದು ನನ್ನ ಅತ್ಯುತ್ತಮ ಕೆಲಸ. ಇಂತಹ ಪ್ರಾಮಾಣಿಕ, ಮಹತ್ವದ ಕೆಲಸವನ್ನು ನಾನು ಎಂದಿಗೂ ಮಾಡಿಲ್ಲ. ಮ್ಯಾಕ್ಸಿಮಮ್ ಸಿಟಿಯಿಂದ ನೆಟ್‌ಫ್ಲಿಕ್ಸ್ ನಿರ್ಗಮನವು ನಿರ್ದಿಷ್ಟ ತಾರ್ಕಿಕತೆ ಹೊಂದಿಲ್ಲ ಎಂದರು. ಅವರು ಬರೆದಿರುವ ವಿಷಯವು ಸೂಕ್ಷ್ಮವಾಗಿದೆ ಅಥವಾ ಅವರು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ಸೂಕ್ಷ್ಮ ವ್ಯಕ್ತಿಯಾಗಿದ್ದಾರೆ ಎಂದು ಅಂದಾಜಿಸಿದರು.

    ಮುಂದುವರಿದ ಪಯಣ: ಅನುರಾಗ್ ಕಶ್ಯಪ್ ಅವರು ಕೊನೆಯದಾಗಿ ಥ್ರಿಲ್ಲರ್ ‘ಕೆನಡಿ’ ನಿರ್ದೇಶಿಸಿದ್ದಾರೆ, ಇದರಲ್ಲಿ ರಾಹುಲ್ ಭಟ್ ಮತ್ತು ಸನ್ನಿ ಲಿಯೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ಆಗಸ್ಟ್ 25 ರಂದು ಝಿಸ್ (ZEE5) ನಲ್ಲಿ ಮೊದಲು ಪ್ರದರ್ಶನಗೊಂಡಿತು. ಅವರು 2003 ರಲ್ಲಿ ‘ಪಾಂಚ್’ ಚಿತ್ರದ ಮೂಲಕ ನಿರ್ದೇಶಕರಾಗಿ ತಮ್ಮ ಪಯಣ ಮುಂದುವರಿಸಿದರು. ಅನುರಾಗ್ ಅವರು ‘ಕೆನಡಿ’, ‘ಗ್ಯಾಂಗ್ಸ್ ಆಫ್ ವಾಸೇಪುರ್’, ‘ದೋಬಾರಾ’, ‘ಬ್ಲಾಕ್ ಫ್ರೈಡೆ’, ‘ಲಸ್ಟ್ ಸ್ಟೋರೀಸ್​,’ಮನ್ಮರ್ಜಿಯಾನ್’, ‘ಮಸಾನ್’, ‘ಬಾಂಬೆ ಟಾಕೀಸ್’ ಮೊದಲಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅನುರಾಗ್ ಅವರು ಕೊನೆಯದಾಗಿ ‘ಹಡ್ಡಿ’ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಜತೆಗೆ ಕಾಣಿಸಿಕೊಂಡಿದ್ದಾರೆ.. ಇದು ಈಗ Zee5 ನಲ್ಲಿ ಸ್ಟ್ರೀಮ್ ಆಗುತ್ತಿದೆ.

    ಏನಿದು ತಾಂಡವ್ ವಿವಾದ: ಭಾರತೀಯ ವೆಬ್ ಸರಣಿಗಳಲ್ಲಿ ಒಂದಾದ ಅಮೆಜಾನ್ ಪ್ರೈಮ್ ವಿಡಿಯೋದ ತಾಂಡವ್​ ಬಿಡುಗಡೆಯಾದಾಗಿನಿಂದ ಅನೇಕ ದೂರುಗಳು ಮತ್ತು ಟ್ರೋಲಿಂಗ್‌ಗಳು ಬಂದವು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪಿಸಲಾಯಿತು. ಬಿಜೆಪಿ ಶಾಸಕ ರಾಮ್ ಕದಂ ಅವರು ತಾಂಡವ್ ಕಲಾವಿದರು, ನಿರ್ಮಾಪಕರು ಮತ್ತು ನಿರ್ದೇಶಕರ ವಿರುದ್ಧ ಅಧಿಕೃತ ದೂರು ದಾಖಲಿಸಿದರು. ತಾಂಡವ್ ತಂಡದ ಕೆಲ ಸದಸ್ಯರು ಬಂಧನಕ್ಕೆ ಒಳಗಾಗುವುದರಿಂದ ಮಧ್ಯಂತರ ರಕ್ಷಣೆ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕಾಯಿತು. ಸೈಫ್ ಅಲಿ ಖಾನ್ ನಟನೆಯ ಸರಣಿಯಲ್ಲಿ ಹಿಂದೂ ದೇವರುಗಳನ್ನು ಅವಮಾನಿಸುತ್ತಿದೆ ಎಂದು ಜನರು ಅದನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts