More

    ಸುಶಾಂತ್​ ವಿವಾದದಲ್ಲಿ ನಮ್ಮ ಪಕ್ಷ ತಲೆಹಾಕಲ್ಲ: ರಾಜ್​ ಠಾಕ್ರೆ

    ಸುಶಾಂತ್​ ಸಾವಿನ ಬೆನ್ನಲ್ಲೇ ಬಾಲಿವುಡ್​ನಲ್ಲಿನ ನೆಪೋಟಿಸಂ ಬಗ್ಗೆ ಹಲವಾರು ಕಲಾವಿದರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಹೊರಗಿನ ಪ್ರತಿಭೆಗಳಿಗೆ ಬಾಲಿವುಡ್​ನಲ್ಲಿ ಮನ್ನಣೆ ನೀಡುವುದಿಲ್ಲ ಎಂಬ ಮಾತುಗಳು ಹೇಳಿಬರುತ್ತಿವೆ. ಒಂದಷ್ಟು ಸಂಸ್ಥೆಗಳು ಇಡೀ ಬಾಲಿವುಡ್​ನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದರ್ಬಾರ್ ಮಾಡುತ್ತಿವೆ ಎಂದೂ ಆರೋಪಗಳು ಹೇಳಿಬರುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಎಂಎನ್​ಸಿ ಪಕ್ಷ, ಸಿನಿಮಾ ವಿಚಾರದಲ್ಲಿ ನೆಪೋಟಿಸಂ ಎದುರಾದರೆ, ನಮ್ಮ ಗಮನಕ್ಕೆ ತನ್ನಿ, ಅಂಥವರಿಗೆ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದಿತ್ತು. ಇದೀಗ ಆ ಹೇಳಿಕೆ ಉಲ್ಟಾ ಹೊಡೆದಿದೆ.

    ಇದನ್ನೂ ಓದಿ: ‘ಮರ್ಡರ್​’ ಸಿನಿಮಾ ವಿವಾದದ ಬೆನ್ನಲ್ಲೇ ಆರ್​ಜಿವಿ ಕೊಟ್ಟರು ಹೀಗೊಂದು ಸ್ಪಷ್ಟನೆ

    ಅಂದರೆ, ನಮಗೂ ಮತ್ತು ಬಾಲಿವುಡ್​ಗೂ ಯಾವುದೇ ಸಂಬಂಧವಿಲ್ಲ. ನಮ್ಮ ಪಕ್ಷ ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಲೆ ಹಾಕುವುದಿಲ್ಲ ಎಂದು ರಾಜ್ ಠಾಕ್ರೆ ಹೇಳಿಕೊಂಡಿದ್ದಾರೆ. ಅಂದಹಾಗೆ, ಎಂಎನ್​ಎಸ್​ ಪಕ್ಷದ ಉಪಾಧ್ಯಕ್ಷ ವಾಗಿಶ್​ ಸರಸ್ವತ್​, ರಾಜ್ ಠಾಕ್ರೆ ಗಮನಕ್ಕೆ ತರದೆ, ‘ಬಾಲಿವುಡ್​ನಲ್ಲಿ ನೆಪೋಟಿಸಂ ರೀತಿಯ ಘಟನೆಗಳು ನಡೆದರೆ, ಶೀಘ್ರ ನಮ್ಮ ಗಮನಕ್ಕೆ ತನ್ನಿ. ಸರಿಯಾದ ಪಾಠ ಕಲಿಸಲಾಗುವುದೆಂದು‘ ಹೇಳಿದ್ದರು. ಇದೀಗ ಆ ಸುದ್ದಿಗೆ ಸ್ವತಃ ರಾಜ್​ ಠಾಕ್ರೆ ಸ್ಪಷ್ಟನೆ ನೀಡಿದ್ದಾರೆ.

    ಇದನ್ನೂ ಓದಿ: ಕೋವಿಡ್​ ಸೋಂಕಿತರಿಗೆ ರಿಷಿ ಕಪೂರ್​ ಅಳಿಯನಿಂದ ಪ್ಲಾಸ್ಮಾ ದಾನ

    ಇನ್ನು ನೆಪೋಟಿಸಂನ ಶಾಶ್ವತವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಸುಶಾಂತ್​ ಕುಟುಂಬದಿಂದ ನೆಪೋಮೀಟರ್​ ಹೆಸರಿನ ಆ್ಯಪ್ ಅಭಿವೃದ್ಧಿಪಡಿಸಲಾಗಿತ್ತು. ನೆಪೋಮೀಟರ್​ ಆ್ಯಪ್​ನಲ್ಲಿ ಒಟ್ಟು 5 ಕೆಟಗೆರಿ ಮಾಡಲಾಗಿದೆ. ಆ ಪೈಕಿ ನಿರ್ಮಾಪಕರು, ಮುಖ್ಯ ಪಾತ್ರಧಾರಿಗಳು, ಪೋಷಕ ಕಲಾವಿದರು, ನಿರ್ದೇಶಕರು, ಬರಹಗಾರರು. ಇದರಲ್ಲಿ ಅವರವರ ಹಿನ್ನೆಲೆಯನ್ನೂ ನೀಡಲಾಗುತ್ತಿದ್ದು, ಎಷ್ಟು ಪ್ರಮಾಣದಲ್ಲಿ ಹೊರಗಿನ ಕಲಾವಿದರನ್ನು, ತಾಂತ್ರಿಕ ವರ್ಗದವರನ್ನು ಬಳಸಿಕೊಂಡಿದ್ದಾರೆಂಬುದು ಗೊತ್ತಾಗುತ್ತದೆ. ನೆಪೋಮೀಟರ್ ಆ್ಯಪ್​ ಅಭಿವೃದ್ಧಿಪಡಿಸಿದ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸುಶಾಂತ್​ ಸಿಂಗ್​ಗೆ ಆದ ಸ್ಥಿತಿ ಇನ್ಯಾರಿಗೂ ಬರುವುದು ಬೇಡ ಎಂದು ನೆಟ್ಟಿಗರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

    ಸುಶಾಂತ್​ ಕೊನೇ ಚಿತ್ರಕ್ಕೆ ಬಿಡುಗಡೆ ಡೇಟ್​ ಫಿಕ್ಸ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts