More

    ವರ್ಷ ಕಳೆದರೂ ನೆಲೆ ಕಾಣದ ಸಂತ್ರಸ್ತರು, ಈ ವರ್ಷವೂ ಭೀತಿ ತಂದ ಮಹಾಮಳೆ

    ಬಣಕಲ್: ಮೂಡಿಗೆರೆ ತಾಲೂಕಿನ ಮಲೆಮನೆ, ದುರ್ಗದಹಳ್ಳಿ, ಮಧುಗುಂಡಿ, ಚನ್ನಡ್ಲು, ಆಲೇಕಾನು ಸೇರಿ ಬಹುತೇಕ ಗ್ರಾಮದಲ್ಲಿ ಕಳೆದ ವರ್ಷ ಆ.9ರಂದೇ ಪ್ರವಾಹ ಉಂಟಾಗಿತ್ತು. ವಿಪತ್ತಿಗೆ ವರ್ಷ ಕಳೆದರೂ ಈ ಭಾಗದ ನೆರೆ ಸಂತ್ರಸ್ತರ ಬದುಕು ಇನ್ನೂ ನೆಲೆ ಕಂಡುಕೊಂಡಿಲ್ಲ.

    ಜಾವಳಿ ಗ್ರಾಪಂ ವ್ಯಾಪ್ತಿಯ ಮಲೆಮನೆಯಲ್ಲಿ 5 ಮನೆಗಳು ಸಂಪೂರ್ಣ ಕೊಚ್ಚಿಹೋಗಿ ಸುಮಾರು 35 ಎಕರೆ ಜಮೀನು ಪ್ರವಾಹದ ಪಾಲಾಗಿತ್ತು. ಅಂದು ಮನೆ ಕಳೆದುಕೊಂಡ ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಸರ್ಕಾರದಿಂದ 5 ಕುಟುಂಬಗಳಿಗೆ ಪ್ರತಿ ತಿಂಗಳು 5 ಸಾವಿರ ರೂ.ನಂತೆ 5 ತಿಂಗಳ ಬಾಡಿಗೆ ನೀಡಿದ್ದರೆ, ಮನೆ ತಳಪಾಯ ನಿರ್ವಿುಸಲು 1 ಲಕ್ಷ ರೂ. ನೀಡಲಾಗಿದೆ.

    ಈ ಗ್ರಾಮದಲ್ಲೇ ಪುನರ್ವಸತಿ ಕಲ್ಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರ ಪರ್ಯಾಯವಾಗಿ ಮನೆ ಕಟ್ಟಲು ಜಾಗ ಮತ್ತು ಕೃಷಿ ಭೂಮಿ ನೀಡಲಾಗುವುದು ಎಂದಿದ್ದು ಭರವಸೆಯಾಗಿಯೇ ಉಳಿದಿದೆ. ಸರ್ಕಾರ ಪರ್ಯಾಯ ಜಾಗ ಗುರುತಿಸದ ಕಾರಣ ಮೂಲ ಸ್ಥಳಕ್ಕೂ ಹೋಗಲಾಗದೆ ಬಾಡಿಗೆ ಮನೆಯಲ್ಲೂ ಇರಲಾಗದ ಅತಂತ್ರ ಸ್ಥಿತಿಯಲ್ಲಿ ಇಲ್ಲಿನ ನೆರೆ ಸಂತ್ರಸ್ತ ಕುಟುಂಬಗಳಿವೆ.

    ಕಳೆದ ವರ್ಷ ಪ್ರವಾಹವಾದ ಜಾಗದಲ್ಲಿ ಈ ವರ್ಷವೂ ಅಲ್ಲಲ್ಲಿ ಗುಡ್ಡ ಕುಸಿತ, ಮನೆ ಹಾನಿಯಾಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಬದುಕು ನರಕವಾಗಿಸಿಕೊಂಡವರು ಮತ್ತೆ ಬದುಕು ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts