More

    ನನ್ನಲ್ಲೂ ಆಸೆಗಳಿವೆ ಆದ್ರೆ ನನ್ನ ಗಂಡನಿಗೆ ಬರೀ ಅವನದ್ದೆ ಚಿಂತೆ: ಡೆತ್​ನೋಟ್​ ಬರೆದಿಟ್ಟು ಮಹಿಳೆ ಆತ್ಮಹತ್ಯೆ!

    ರಾಯಚೂರು: ಡೆತ್​ನೋಟ್​ ಬರೆದಿಟ್ಟು ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂಧನೂರಿನ ಶರಣಬಸವೇಶ್ವರ ಕಾಲನಿಯಲ್ಲಿ ನಡೆದಿದೆ.

    ವೀಣಾ ಶರಣಬಸವ (35) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ನನ್ನ ಜೀವನದಲ್ಲಿ ದೇವರು ಖುಷಿ ಅನ್ನೋದೆ ಕೊಟ್ಟಿಲ್ಲ. ಯಾವಾಗಲೂ ಕಾಯೋದೆ ಆಯ್ತು. ನನ್ನ ಗಂಡ ನನ್ನ ಭಾವನೆಗಳಿಗೆ ಕೊಡುವುದಿಲ್ಲ. ಆತನಿಗೆ ಬರೀ ಅವನದ್ದೆ ಚಿಂತೆ. ನನ್ನ ಮೇಲೆ ಪ್ರೀತಿ, ಕಾಳಜಿ ಅನ್ನೋದೆ ಇಲ್ಲ. ನಾನು ಸಹ ಒಬ್ಬ ಮನುಷ್ಯಳು, ನನ್ನಲ್ಲೂ ಆಸೆಗಳು ಇದಾವೆ. ಎಷ್ಟು ದಿನ ಅಂತ ಹಾಗೇ ಇಟ್ಟುಕೊಂಡು ಕೂರಲಿ.

    ಇದನ್ನೂ ಓದಿರಿ: ನರ್ಸಿಂಗ್​ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ! ಪ್ರಕರಣ ಬೆನ್ನತ್ತ ಪೊಲೀಸರಿಂದ ಸ್ಫೋಟಕ ರಹಸ್ಯ ಬಯಲು

    ನನ್ನನ್ನು ಪ್ರೀತಿಯಿಂದ ಮಾತನಾಡಿಸೋ ವ್ಯಕ್ತಿಯು ಇಲ್ಲ. ಜೀವನ ಪೂರ್ತಿ ಹೀಗೆ ಬದುಕುವುದಕ್ಕೆ ಆಗುವುದಿಲ್ಲ. ಹೀಗಾಗಿ ನಾನು ಸಾಯುತ್ತಿದ್ದೇನೆ. ಸತ್ತ ಮೇಲಾದರೂ ಖುಷಿಯಿಂದ ಇರುತ್ತೇನೆ. ನಾನು ಮಾಡುತ್ತಿರುವುದು ತಪ್ಪು ಅಂತ ನನಗೆ ಗೊತ್ತು. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ. ನನ್ನ ಸಾವಿಗೆ ನಾನೇ ಕಾರಣ. ನನ್ನ ಗಂಡನಿಗೆ ಹಿಂಸೆ ನೀಡಬೇಡಿ. ಅವರು ನನ್ನು ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂದು ಡೆತ್​ನೋಟ್ ಬರೆದು ವೀಣಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಘಟನಾ ಸ್ಥಳಕ್ಕೆ ಸಿಂಧನೂರು ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪ್ರೇಯಸಿಯನ್ನು ಇಂಪ್ರೆಸ್​ ಮಾಡಲು ಗುಪ್ತಾಂಗಕ್ಕೆ ಸ್ಟೀಲ್​ ರಿಂಗ್ ಹಾಕಿಕೊಂಡ ಯುವಕ! ಮುಂದೇನಾಯ್ತು ಗೊತ್ತಾ?

    ಬೆಡ್​ ಮೇಲೆ ಮಲಗಿರುವುದು ಮನುಷ್ಯನೇ ಅಲ್ಲ! ಏನಂತ ಗೆಸ್​ ಮಾಡೋದಕ್ಕೂ ನಿಮ್ಮಿಂದ ಸಾಧ್ಯ ಇಲ್ಲ

    ಕೋರ್ಟ್​ಗೆ ಕಾಂಡೋಮ್​ ಗಿಫ್ಟ್​ ಕಳುಹಿಸಿಕೊಟ್ಟ ಮಹಿಳೆ! ಅನ್ಯಾಯಕ್ಕೆ ಇದೇ ಉತ್ತರ ಎಂದ ಹೋರಾಟಗಾರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts