More

    VIDEO: ರಾಹುಲ್ ದ್ರಾವಿಡ್‌ಗೆ ಜಾಮಿ ಎಂದು ಕರೆಯಲು ಕಾರಣ ಗೊತ್ತೇ..?

    ಬೆಂಗಳೂರು: ರಾಹುಲ್ ದ್ರಾವಿಡ್, ಅದೆಷ್ಟೋ ಯುವ ಕ್ರಿಕೆಟಿಗರ ಪಾಲಿಗೆ ಸ್ಫೂರ್ತಿಯ ಚಿಲುಮೆ. ಟೀಮ್ ಇಂಡಿಯಾ ಪರ ಆಡುವಾಗ ‘ದಿ ವಾಲ್’ ಎಂದೇ ಬಿರುದು ಪಡೆದ ಆಟಗಾರ ದ್ರಾವಿಡ್. 12ನೇ ವಯಸ್ಸಿನಿಂದಲೂ ಕ್ರಿಕೆಟ್ ಆಡುತ್ತಿರುವ ದ್ರಾವಿಡ್, ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ವಾಲ್ ಎಂದೇ ಚಿರಪರಿಚಿತರಾದರೂ ಅವರ ಬಾಲ್ಯ ಸ್ನೇಹಿತರು ‘ಜಾಮಿ’ ಅಂತಾನೆ ಫೇಮಸ್. ಈ ಜಾಮಿ ಹೆಸರಿನ ಕುರಿತು ಆಸಕ್ತಿದಾಯಕ ಕಥೆ ಇಲ್ಲಿದೆ.

    ಇದನ್ನೂ ಓದಿ:ಸಚಿನ್ ತೆಂಡುಲ್ಕರ್ ನಾಯಕರಾಗಿ ಯಾಕೆ ಯಶಸ್ವಿಯಾಗಲಿಲ್ಲ? ಮದನ್ ಲಾಲ್ ಕೊಡ್ತಾರೆ ಕಾರಣ…

    ರಾಹುಲ್ ದ್ರಾವಿಡ್ ತಂದೆ ಜಾಮ್ಸ್ ತಯಾರಕ ಕಿಸಾನ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಇದರಿಂದ ದ್ರಾವಿಡ್ ಕ್ರಿಕೆಟ್ ಆಡಲು ಹೋದಾಗಲೆಲ್ಲಾ ಜಾಮ್ ತೆಗೆದುಕೊಂಡು ಹೋಗುತ್ತಿದ್ದರು. ಆ ವೇಳೆ ಇತರ ಆಟಗಾರರೆಲ್ಲಾ ಜಾಮಿ ಎಂದು ಕರೆಯಲು ಶುರು ಮಾಡಿದರಂತೆ, ಹೀಗೆ ಜಾಮಿ ಎಂದು ಹೆಸರು ನಿಂತುಕೊಂಡಿದೆ. ಬಳಿಕ ಕಿಸಾನ್ ಜಾಹೀರಾತುಗಳಲ್ಲಿ ದ್ರಾವಿಡ್ ಕಾಣಿಸಿಕೊಂಡಿದ್ದು ಇತಿಹಾಸ. ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಕಾಯ್ದುಕೊಳ್ಳುವ ಮೂಲಕ ತಂಡದ ಪಾಲಿಗೆ ‘ದಿ ವಾಲ್’ ಎಂದು ಕರೆಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts