More

    ಸಚಿನ್ ತೆಂಡುಲ್ಕರ್ ನಾಯಕರಾಗಿ ಯಾಕೆ ಯಶಸ್ವಿಯಾಗಲಿಲ್ಲ? ಮದನ್ ಲಾಲ್ ಕೊಡ್ತಾರೆ ಕಾರಣ…

    ಬೆಂಗಳೂರು: ತಂಡಕ್ಕೆ ನಾಯಕನಾಗುವವನು ಶ್ರೇಷ್ಠ ಆಟಗಾರನಾಗಬೇಕಾಗಿಲ್ಲ. ಶ್ರೇಷ್ಠ ಆಟಗಾರ ಆದವನು ಶ್ರೇಷ್ಠ ನಾಯಕ ಆಗಲಾರ. ಈ ರೀತಿಯ ಮಾತು ಕೇಳಿ ಬಂದಾಗಲೆಲ್ಲಾ ಸಾಮಾನ್ಯವಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಉದಾಹರಣೆಯನ್ನು ನೀಡಲಾಗುತ್ತದೆ. ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದರೂ ಅವರು ನಾಯಕರಾಗಿ ಹೆಚ್ಚಿನ ಯಶಸ್ಸು ಕಾಣಲಿಲ್ಲ. ಹಾಗಾದರೆ ಸಚಿನ್ ನಾಯಕರಾಗಿ ವಿಫಲರಾಗಲು ಕಾರಣವೇನು? ಸಚಿನ್ ನಾಯಕರಾಗಿದ್ದ ಸಮಯದಲ್ಲಿ ಭಾರತ ತಂಡದ ಕೋಚ್ ಆಗಿದ್ದ ಮಾಜಿ ಕ್ರಿಕೆಟಿಗ ಮದನ್ ಲಾಲ್ ಇದಕ್ಕೆ ಸೂಕ್ತ ಕಾರಣಗಳನ್ನು ವಿವರಿಸಿದ್ದಾರೆ.

    ಇದನ್ನೂ ಓದಿ: ಕ್ರಿಕೆಟ್‌ಗೆ ಎಸ್.ಶ್ರೀಶಾಂತ್ ವಾಪಸ್..!

    ‘ಸಚಿನ್ ತೆಂಡುಲ್ಕರ್ ಉತ್ತಮ ನಾಯಕನಲ್ಲ ಎಂಬ ಮಾತನ್ನು ನಾನು ಒಪ್ಪಿಕೊಳ್ಳಲಾರೆ. ಆದರೆ ಅವರು ನಾಯಕರಾಗಿ ಯಶಸ್ಸು ಕಾಣದಿರುವುದಕ್ಕೆ ಕಾರಣಗಳು ಬಹಳ ಸರಳವಾಗಿವೆ. ಅವರು ನಾಯಕರಾಗಿದ್ದ ಸಮಯದಲ್ಲಿ ತಮ್ಮ ನಿರ್ವಹಣೆಯ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿದ್ದರು. ಹೀಗಾಗಿ ಆ ವೇಳೆ ಅವರಿಗೆ ತಂಡದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಾಯಕರಾಗಿ ನೀವು ನಿಮ್ಮ ನಿರ್ವಹಣೆಯ ಜತೆಗೆ ತಂಡದ ನಿರ್ವಹಣೆಯ ಬಗ್ಗೆಯೂ ಆದ್ಯತೆ ನೀಡಬೇಕು. ತಂಡದ ಅತ್ಯುತ್ತಮ ನಿರ್ವಹಣೆ ಹೊರಹೊಮ್ಮಿಸಲು ಪ್ರಯತ್ನಿಸಬೇಕು. ಯಾಕೆಂದರೆ ತಂಡ ಎಷ್ಟು ಉತ್ತಮವಾಗಿದೆಯೋ, ನಾಯಕನೂ ಅಷ್ಟೇ ಉತ್ತಮವಾಗಿರಲು ಸಾಧ್ಯ. ನಾಯಕ ತಂಡಕ್ಕೆ ನಿರ್ದೇಶನವನ್ನಷ್ಟೇ ನೀಡಬಹುದು’ ಎಂದು ಮದನ್ ಲಾಲ್ ಫೇಸ್‌ಬುಕ್ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

    ಸಚಿನ್ ತೆಂಡುಲ್ಕರ್ ನಾಯಕರಾಗಿ ಯಾಕೆ ಯಶಸ್ವಿಯಾಗಲಿಲ್ಲ? ಮದನ್ ಲಾಲ್ ಕೊಡ್ತಾರೆ ಕಾರಣ...

    ಇದನ್ನೂ ಓದಿ: ಭಾರತೀಯ ಕ್ರಿಕೆಟ್ ಚಿತ್ರಣವನ್ನೇ ಬದಲಾಯಿಸಿದ ಕಪಿಲ್ ದೇವ್ ಇನಿಂಗ್ಸ್‌ಗೆ 37 ವರ್ಷ

    ‘ತಂಡ ಉತ್ತಮ ನಿರ್ವಹಣೆ ನೀಡಿದಾಗ, ನಾಯಕನಿಗೂ ಆತ್ಮವಿಶ್ವಾಸ ಬರುತ್ತದೆ. ಆಗ ಆಟಗಾರರಿಗೆ ಆತ ಯಾವುದೇ ಹಿಂಜರಿಕೆ ಇಲ್ಲದೆ ಹೆಚ್ಚಿನ ಅವಕಾಶಗಳನ್ನು ನೀಡಲು ಸಾಧ್ಯ. ಆ ಆಟಗಾರನೂ ತಂಡದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಾನೆ’ ಎಂದು 69 ವರ್ಷದ ಮದನ್ ಲಾಲ್ ವಿವರಿಸಿದ್ದಾರೆ. ಸಚಿನ್ ನಾಯಕತ್ವದಲ್ಲಿ ಭಾರತ 73 ಏಕದಿನ ಮತ್ತು 23 ಟೆಸ್ಟ್‌ಗಳನ್ನು ಆಡಿದೆ. ಆದರೆ ಕೇವಲ 23 ಏಕದಿನ ಮತ್ತು 4 ಟೆಸ್ಟ್ ಪಂದ್ಯಗಳನ್ನಷ್ಟೇ ಜಯಿಸಿದೆ.

    ಇದನ್ನೂ ಓದಿ: 81ನೇ ವಯಸ್ಸಿನಲ್ಲಿ ಟೆಸ್ಟ್ ಕ್ಯಾಪ್ ಪಡೆದ ಇಂಗ್ಲೆಂಡ್ ಕ್ರಿಕೆಟಿಗ

    ಸಚಿನ್ ತೆಂಡುಲ್ಕರ್ ನಾಯಕರಾಗಿ ಯಾಕೆ ಯಶಸ್ವಿಯಾಗಲಿಲ್ಲ? ಮದನ್ ಲಾಲ್ ಕೊಡ್ತಾರೆ ಕಾರಣ...

    ಕೆಲವೊಮ್ಮೆ ನೀವು ಬಯಸಿದಂತೆ ಯಾವುದೂ ನಡೆಯುವುದಿಲ್ಲ. ಸಚಿನ್ ನಾಯಕತ್ವದ ವಿಷಯದಲ್ಲೂ ಇದೇ ರೀತಿ ಆಯಿತು ಎಂದು 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿರುವ ಮದನ್ ಲಾಲ್ ತಿಳಿಸಿದ್ದಾರೆ. ‘ಸಚಿನ್ ಆಟವನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದ್ದರು. ಎಲ್ಲಿ ತಪ್ಪಾಗುತ್ತಿದೆ. ಹೇಗೆ ಬೌಲಿಂಗ್ ಮಾಡಬೇಕು ಎಂದೆಲ್ಲ ಹೇಳುತ್ತಿದ್ದರು. ಆದರೆ ಕೆಲವೊಮ್ಮೆ ನಿಮ್ಮ ಆಟದ ಮೇಲೆಯೇ ಹೆಚ್ಚಿನ ಗಮನ ನೀಡಿದಾಗ ಇತರ ವಿಷಯಗಳು ಜಟಿಲವಾಗುತ್ತ ಹೋಗುತ್ತವೆ. ಅದರ ಅರ್ಥ ಅವರೊಬ್ಬ ಉತ್ತಮ ನಾಯಕನಲ್ಲ ಎಂದಲ್ಲ’ ಎಂದು ಹೇಳಿದ್ದಾರೆ. ಮದನ್ ಲಾಲ್ 1996ರ ಸೆಪ್ಟೆಂಬರ್‌ನಿಂದ 1997ರ ಸೆಪ್ಟೆಂಬರ್‌ವರೆಗೆ ಭಾರತ ತಂಡದ ಕೋಚ್ ಆಗಿದ್ದರು. ಅವರು ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಭಾರತ ಪರ 39 ಟೆಸ್ಟ್ ಮತ್ತು 67 ಏಕದಿನ ಪಂದ್ಯವಾಡಿದ್ದಾರೆ.

    ಕೊಹ್ಲಿ, ಧೋನಿ, ರೋಹಿತ್ ಹುಡುಗಿಯರಾಗಿದ್ದರೆ ಹೇಗೆ ಕಾಣುತ್ತಿದ್ದರು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts