More

    ಬಸವಣ್ಣ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಿದರು: ಕೂಡಲಸಂಗಮದಲ್ಲಿ ರಾಹುಲ್ ಗಾಂಧಿ ಹೇಳಿಕೆ

    ಬಾಗಲಕೋಟೆ: ಕೂಡಲಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆದಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ ಬಸವಣ್ಣ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಿದರು ಎಂದಿದ್ದಾರೆ.

    ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, “ಬಸವಣ್ಣನವರ ಜಯಂತಿ ದಿನದಂದು ನಾನು ಇಲ್ಲಿಗೆ ಆಗಮಿಸಿದ್ದು ನನಗೆ ಬಹಳ ಖುಷಿಯಾಗಿದೆ. ಸ್ವಾಮೀಜಿಗಳು ಭಾಷಣದಲ್ಲಿ ಹಿಂದಿಯಲ್ಲಿ ಮಾತನಾಡಿ ನನಗೆ ಮಾಹಿತಿ ಹೇಳಿದರು. ಅವರಿಗೆ ಧನ್ಯವಾದಗಳು. ಸ್ವಾಮೀಜಿಗಳು ತಮ್ಮ ಮಾತಿನ ಮೂಲಕ ನನಗೆ ಎಲ್ಲವನ್ನ ಅರ್ಥ ಮಾಡಿಸಿಕೊಟ್ಟರು.

    ಬಸವಣ್ಣ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಿದರು: ಕೂಡಲಸಂಗಮದಲ್ಲಿ ರಾಹುಲ್ ಗಾಂಧಿ ಹೇಳಿಕೆ

     

    ಇದನ್ನೂ ಓದಿ: ಕೂಡಲಸಂಗಮಕ್ಕೆ ಇಂದು ರಾಹುಲ್ ಗಾಂಧಿ ಆಗಮನ

    ಪ್ರಜಾಪ್ರಭುತ್ವ ವನ್ನ ಭಾರತವನ್ನ ಬಸವಣ್ಣನವರು ಸಧೃಡಗೊಳಿಸಿದರು. ಇದು ಸತ್ಯ ಇದನ್ನ ಅಲ್ಲಗಳೆಯಲು ಆಗಲ್ಲ. ಇವತ್ತು ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಬರಲು ಬಸವಣ್ಣನವರ ಅನುಭವ ಮಂಟಪ ಕಾರಣ. ಎಲ್ಲಿ ನಿಮಗೆ ಕತ್ತಲು ಕಾಣುತ್ತೋ, ಅಲ್ಲೇ ಒಂದು ಕಡೆ ಬೆಳಕು ಸಿಗುತ್ತೆ. ಅದೇ ರೀತಿ ಸಮಾಜದಲ್ಲಿ ಕತ್ತಲು ಇರುತ್ತೋ. ಬಸವಣ್ಣನವರು ಸಮಾಜಕ್ಕೆ ಬೆಳಕು ತಂದುಕೊಟ್ಟರು. ಅವರು‌ ಮೊಟ್ಟಮೊದಲು ತಮ್ಮನ್ನ ತಾವು ಪ್ರಶ್ನೆ ಮಾಡಿಕೊಳ್ತಿದ್ರು. ತಾವು ಶುದ್ಧರಾಗಿದ್ರೆ, ಬೇರೆಯವರ ಶುದ್ಧತೆ ಬಗ್ಗೆ ಮಾತನಾಡಬಹುದು.

    ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿ ಜೈಲಿಗೆ ಹೋಗುವುದು ಖಚಿತ: ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ

    ಬಸವಣ್ಣನವರು ಜನಿವಾರ ಧಾರಣೆ ನಿರಾಕರಿಸಿದ್ರು. ನಾನು ಸ್ವಾಮೀಜಿಯವ್ರಿಗೆ ಕೇಳಿದೆ. ಎಂಟು ವರ್ಷದವರಿದ್ದಾಗ ಅವರಿಗೆ ಈ ವಿಚಾರಧಾರಗಳು ಹೇಗೆ ಬಂದವು ಅಂತಾ ಕೇಳಿದೆ. ಜಾತಿ, ಪ್ರಜಾಪ್ರಭುತ್ವ, ಸಮಾಜದ ಬಗ್ಗೆ ತಮ್ಮನ್ನ ತಾವು ಪ್ರಶ್ನೆ ಮಾಡಿಕೊಳ್ತಿದ್ರು. ತಮ್ಮನ್ನ ತಾವು ಪ್ರಶ್ನೆ ಮಾಡಿಕೊಂಡು, ಅದ್ರ ಸತ್ಯ ತಿಳಿದು ಕೊಳ್ಳುತ್ತಿದ್ದರು.

    ಬಸವಣ್ಣ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಿದರು: ಕೂಡಲಸಂಗಮದಲ್ಲಿ ರಾಹುಲ್ ಗಾಂಧಿ ಹೇಳಿಕೆ

    ಆದ್ರೆ ಬಹಳಷ್ಟು ಜನ ಸತ್ಯವನ್ನ ತಿಳ್ಕೋತಾರೆ, ಆದ್ರೆ ಸಮಾಜದ ಮುಂದೆ ನಾನು ಮಾತನಾಡಲು ಹೆದರಿಕೊಳ್ತಾರೆ. ಬಸವಣ್ಣನವರು ಪ್ರಶ್ನೆ ಸಮಾಜದ ಮುಂದಿಟ್ಟು ಅದನ್ನ ಪಾಲನೆ ಮಾಡ್ತಿದ್ರು. ಬಸವಣ್ಣನವರಿಗೆ ಪುಷ್ಪಾರ್ಚನೆ ಮಾಡಿದ್ದೀವಿ. ಆದ್ರೆ ಅವರು ಜೀವಂತ ಇದ್ದಾಗ ಅವರನ್ನು ಹೆದರಿಸುವ, ಸಮಸ್ಯೆ ಮಾಡುವ ಕೆಲಸ ಆಯಿತು.

    ಅದಕ್ಕಾಗಿಯೇ ಅವ್ರ ಪುತ್ಥಳಿಗೆ ಪುಷ್ಪಾರ್ಚನೆ ಮಾಡ್ತೇವೆ. ಯಾರೂ ತಮ್ಮನ್ನ ತಾವು ಪ್ರಶ್ನೆ ಮಾಡಿಕೊಳ್ತಾರೆ, ಸಮಾಜದ ಮುಂದೆ ಹೇಳಲ್ಲ, ಅವರು ಯಶಸ್ವಿಯಾಗಲ್ಲ” ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts