More

    ಲೈಂಗಿಕ ದೌರ್ಜನ್ಯದ ಆರೋಪ; ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಹುಡುಕುತ್ತಾ ಬೆಂಗಳೂರಿಗೆ ಬಂದ ಅಸ್ಸಾಂ ಪೊಲೀಸರು!

    ಬೆಂಗಳೂರು: ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಅಸ್ಸಾಂ ಪೊಲೀಸರು ಹುಡುಕಿಕೊಂಡು ಬಂದಿದ್ದಾರೆ.

    ರಾಷ್ಟ್ರೀಯ ಯುವ ಕಾಂಗ್ರೆಸ್​ ಘಟಕದ ಅಧ್ಯಕ್ಷರಾಗಿರು ಶ್ರಿನಿವಾಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು ಯುವತಿಯೊಬ್ಬರು ಪ್ರಕರಣವನ್ನೂ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರನ್ನು ಹುಡುಕಿಕೊಂಡು ಅಸ್ಸಾಂ ಪೊಲೀಸರು ಬಂದಿದ್ದಾರೆ.

    ದಾಖಲಾಗಿರವ ಪ್ರಕರಣದಲ್ಲಿ “ಸೆಕ್ಷನ್ 509 (ಮಹಿಳೆಯ ಗೌರವವನ್ನು ಅವಮಾನಿಸುವ ಉದ್ದೇಶದಿಂದ ಪದಗಳು, ಸನ್ನೆಗಳು ಅಥವಾ ಕೃತ್ಯಗಳನ್ನು ಬಳಸುವುದು), 294 (ಇತರರಿಗೆ ಕಿರಿಕಿರಿ ಉಂಟುಮಾಡುವ ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು), 341 (ತಪ್ಪಾದ ಸಂಯಮ), 352 (ಯಾವುದೇ ವ್ಯಕ್ತಿಗೆ ಹಲ್ಲೆ ಅಥವಾ ಕ್ರಿಮಿನಲ್ ಬಲವನ್ನು ಬಳಸುವುದು), 354/354 ಎ (iv) (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಅಡಿಯಲ್ಲಿ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯವನ್ನು ಪ್ರಕಟಿಸುವುದು ಅಥವಾ ರವಾನಿಸುವುದು)” ಮುಂತಾದ ಆರೋಪಗಳು ಉಲ್ಲೇಖಗೊಂಡಿವೆ.

    ಗುವಾಹಟಿಯ ಐಪಿಎಸ್​ ಅಧಿಕಾರಿ JOINT COMMISSIONER OF POLICE ಪ್ರತೀಕ್ ಖುದ್ದು ಆಗಮಿಸಿದ್ದಾರೆ. ಅಸ್ಸಾಂನ ಗುವಾಹಟಿಯ ಪೊಲೀಸರು ಬಸವೇಶ್ವರ ನಗರ ನಿವಾಸಕ್ಕೆ ಬೆಂಗಳೂರು ನಗರ ಪೊಲೀಸರ ಸಹಾಯದಿಂದ ಅರೆಸ್ಟ್ ಮಾಡಲು ಆಗಮಿಸಿದ್ದು ಈ ಸಂದರ್ಭ ಶ್ರೀನಿವಾಸ್ ಮನೆಯಲ್ಲಿರಿಲಿಲ್ಲ. ಹೀಗಾಗಿ ನೋಟಿಸ್ ಅಂಟಿಸಿ ಅಸ್ಸಾಂ ಪೊಲೀಸರು ತೆರಳಲಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts