More

    ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಈವರೆಗೆ ಸೀಜ್‌ ಆದ ವಸ್ತುಗಳ ಮೌಲ್ಯ, ದಾಖಲಾದ ಪ್ರಕರಣಗಳಿಗೆ ಲೆಕ್ಕವೇ ಇಲ್ಲ!

    ಬೆಂಗಳೂರು: ಚುನಾವಣೆಯ ಸಲುವಾಗಿ ಅಕ್ರಮವಾಗಿ ಸಾಗಾಟ‌ ಮಾಡುತ್ತಿದ್ದ ಹಣ ಮತ್ತು ಇನ್ನಿತರೆ ವಸ್ತುಗಳು ಬಹುಕೋಟಿ ಮೌಲ್ಯವನ್ನು ಹೊಂದಿದ್ದು ಅವು ಜಪ್ತಿ ಆಗಿವೆ.
    ಇನ್ನು ದಾಖಲಾಗಿರುವ ಪ್ರಕರಣಗಳಿಗಂತೂ ಲೆಕ್ಕವೇ ಇಲ್ಲ. ಕೇವಲ ಬೆಂಗಳೂರಿನಲ್ಲಿ ಸರಿ ಸುಮಾರು 76 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ವಸ್ತುಗಳು ಹಾಗೂ ನಗದು ಜಪ್ತಿ ಆಗಿದೆ. ಒಟ್ಟಾರೆಯಾಗಿ ವಶಕ್ಕೆ ಸಿಕ್ಕಿರುವ ವಸ್ತುಗಳ ಮೌಲ್ಯದ ಲೆಕ್ಕಾಚಾರ ಹೀಗಿದೆ:

    1. ನಗದು – 11 ಕೋಟಿ 35 ಲಕ್ಷ 88 ಸಾವಿರದ 541 ರೂಪಾಯಿ..
    2. ಮಧ್ಯ – 25 ಕೋಟಿ 91 ಲಕ್ಷದ 58 ಸಾವಿರದ 127 ರೂ ಮೊತ್ತದ 5,95,684 ಲೀಟರ್ ಮದ್ಯ ವಶಕ್ಕೆ..
    3. ಡ್ರಗ್ಸ್ – 10 ಕೋಟಿ 26 ಲಕ್ಷದ 86 ಸಾವಿರದ 663 ರೂ. ಮೌಲ್ಯದ 377 ಕೆ.ಜಿ.
    4. ಚಿನ್ನ ಬೆಳ್ಳಿ – 17ಕೋಟಿ 09 ಲಕ್ಷದ 97 ಸಾವಿರದ 093 ರೂ ಮೌಲ್ಯದ 291 ಕೆ. ಜಿ
    5. ಗಿಫ್ಟ್ ಗಳು – 5 ಕೋಟಿ74 ಲಕ್ಷದ 14 ಸಾವಿರದ 592 ರೂ ಮೌಲ್ಯದ 49937 ವಸ್ತುಗಳು
    6. ವಾಹನಗಳು – 5ಕೋಟಿ 88ಲಕ್ಷದ 81 ಸಾವಿರದ 040 ರೂಗಳ 365 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

    ಇದುವರೆಗೆ ನಗರದಲ್ಲಿ ಚುನಾವಣೆಯ ಸಲುವಾಗಿ ಒಟ್ಟು 2894 ಎಫ್ಆರ್ ದಾಖಲುಮಾಡಲಾಗಿದ್ದು ಬರೋಬ್ಬರಿ 76,30,86,056 ರೂ. ಮೌಲ್ಯದ ವಸ್ತುಗಳು ಹಾಗೂ ನಗದನ್ನು ಜಪ್ತಿ ಮಾಡಲಾಗಿದೆ.

    ಈವರೆಗೆ ಒಟ್ಟು ಬೆಂಗಳೂರು ನಗರದಲ್ಲಿ 743 ದೂರುಗಳು ಚುನಾವಣೆಯ ಸಂಭಂದ ದಾಖಲಾಗಿದ್ದು ಅದರಲ್ಲಿ 119 ಸುಳ್ಳು ದೂರುಗಳಿದ್ದು, 622 ಪ್ರಕರಣದಲ್ಲಿ ಕ್ರಮಕೈಗೊಳ್ಳಲಾಗಿದೆ. ಉಳಿದ 2 ಪ್ರಕರಣದಲ್ಲಿ ತನಿಖೆ ಮುಂದುವರೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts