More

    ನಾನು ಅವರ ಉತ್ತರಾಧಿಕಾರಿ ಹೇಗೆ ಆದೆ ಅನ್ನೋದೆ ಗೊತ್ತಿಲ್ಲ: ಶಿವಕುಮಾರ ಶ್ರೀಗಳನ್ನು ನೆನೆದು ಕಂಬನಿ ಮಿಡಿದ ಸಿದ್ಧಲಿಂಗ ಸ್ವಾಮೀಜಿ…

    ತುಮಕೂರು: ನೂತನ ಉತ್ತರಾಧಿಕಾರಿಯವರನ್ನು ನೇಮಕ ಮಾಡಿರುವ ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮಿಜಿ, ನಂತರ ಸಮಾರಂಭದಲ್ಲಿ ಭಾಷಣ ಮಾಡಿದರು. ಈ ಸಂದರ್ಭ ಅವರು ಶಿವಕುಮಾರ ಸ್ವಾಮೀಜಿಗಳನ್ನು ನೆನೆದು ಕಂಬನಿ ಮಿಡಿದರು.

    ತಮ್ಮ ಭಾಷಣದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರು, “ಇಂದು ಪವಿತ್ರ ಮಂಗಳ ಸಮಾರಂಭ. ಬಸವ ಜಯಂತಿ ಪವಿತ್ರ ಸಮಾರಂಭದ ವೇಳೆ ಮಠದಲ್ಲಿ ಮಂಗಳ ಸಮಾರಂಭ ನಡೆದಿದೆ. ಉತ್ತರಾಧಿಕಾರಿ ನೇಮಕದ ಚಿಂತನೆ ಮಾಡಿ ಮನೋಜ್ ಕುಮಾರ್ ರನ್ನು ಆಯ್ಕೆ ಮಾಡಿ, ಶ್ರೀ ಶಿವಸಿದ್ಧೇಶ್ವರ ಎಂದು ಅಭಿದಾನ ಮಾಡಿದ್ಧೇವೆ.

    ಶಿವಕುಮಾರ ಶ್ರೀಗಳ ಉತ್ತರಾಧಿಕಾರಿಯಾಗಿ ನಾನು ಹೇಗೆ ಆದೆ ಅನ್ನೋದೆ ನನಗೆ ಗೊತ್ತಿಲ್ಲ. ನನಗೆ ವಿದ್ಯೆ ರೂಪ, ಬುದ್ಧಿ ಏನೂ ಇರಲಿಲ್ಲ. ನನ್ನಲ್ಲಿನ ಯಾವ ಗುಣ ಶಿವಕುಮಾರ ಶ್ರೀಗಳಿಗೆ ಇಷ್ಟ ಆಯಿತೋ ಗೊತ್ತಿಲ್ಲ. ಅಂತು ನಾನು ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾದೆ‌. ಶಿವಕುಮಾರ ಶ್ರೀಗಳ ಬದುಕು, ಸಾಧನೆ ವಿಸ್ಮಯ ಆಶ್ಚರ್ಯ.

    ಇದನ್ನೂ ಓದಿ: ಸಿದ್ಧಿಯ ಗದ್ದುಗೆಯನ್ನೇರಿದ ಪರಮ ತಪಸ್ವಿ; ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಪುಣ್ಯಸ್ಮರಣೆ ನಾಳೆ

    ಶಿವಕುಮಾರ ಶ್ರೀಗಳ ಆಶಯದಂತೆ ಆಶೀರ್ವಾದದಂತೆ ಮಠ ನಡೆಯುತ್ತಿದೆ. ನೀತಿ ಸಂಹಿತೆಯಿಂದಾಗಿ ಇವತ್ತು ಕಾರ್ಯಕ್ರಮ ಸರಳವಾಗಿದೆ. ನಮ್ಮ ಉತ್ತರಾಧಿಕಾರಿ ಶಿವಸಿದ್ಧೇಶ್ವರ ಸ್ವಾಮಿಗಳು ಶಿವಕುಮಾರ ಶ್ರೀಗಳ ಕಾರುಣ್ಯಕ್ಕೆ ಒಳಗಾದವರು. ಆಗಾಗ ಶಿವಕುಮಾರ ಶ್ರೀಗಳು, ನಾನು ಅಲ್ಪ ಆಯುಷ್ಯಿ ಎಂದು ಹೇಳುತ್ತಿದ್ರು. ಹಾಗಾಗಿ ಅವರೇ ನನ್ನ ಉತ್ತರಾಧಿಕಾರಿಯನ್ನು ನೇಮಿಸಿಕೊಳ್ಳುವಂತೆ ಹೇಳುತಿದ್ಧರು. ಆದರೆ ನಾನು ಒಪ್ಪಿರಲಿಲ್ಲ”

    ಈ ವಿಚಾರವನ್ನು ನೆನಪಿಸುತ್ತಲೇ ಸಿದ್ಧಲಿಂಗ ಸ್ವಾಮಿಜಿಗಳು ಗದ್ಗದಿತರಾದರು. ಸಿದ್ಧಲಿಂಗ ಶ್ರೀಗಳ ಜೊತೆಗೆ ವೇದಿಕೆ ಮೇಲಿದ್ದ ಮಠಾಧೀಶರುಗಳೂ ಶಿವಕುಮಾರ ಸ್ವಾಮಿಗಳನ್ನು ನೆನೆದು ಕೆಲ‌ಕಾಲ ಕಣ್ಣೀರು ಹಾಕಿದರು.

    ಇದನ್ನೂ ಓದಿ: ಪರಸ್ಪರ ಹೊಂದಾಣಿಕೆಯಿಂದ ಬಾಳು ಬಂಗಾರ: ಉಜ್ಜಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರ ಆಶೀರ್ವಚನ 

    ನಂತರ ಭಾಷಣ ಮುಂದುರೆಸಿದ ಸಿದ್ಧಲಿಂಗ ಸ್ವಾಮಿಜಿಗಳು, “ಶಿವಕುಮಾರ ಶ್ರೀಗಳು ಅಧಿಕಾರ ಹಸ್ತಾಂತರ ಮಾಡಿದರೂ ಸಹ ಅವರೇ ಎಲ್ಲವನ್ನೂ ನೋಡಿಕೊಳ್ಳುತಿದ್ದರು. ನಾನು ಯಾವತ್ತು ಅಧಿಕಾರ‌ ಕುರ್ಚಿಗಾಗಿ ಆಸೆ ಪಟ್ಟವನಲ್ಲ, ಪಡುವವನು ಅಲ್ಲ. ನೂತನ ಉತ್ತರಾಧಿಕಾರಿ ನೇಮಕದಿಂದ ನನ್ನ ಕಾರ್ಯ ಬಾಹುಳ್ಯ ಕಡಿಮೆ ಆಗಬಹುದು” ಎಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ನಿರಾಭಾರಿ ನಿರಂಜನ ಜಂಗಮಪಟ್ಟಾಧಿಕಾರ ಮಹೋತ್ಸವದಲ್ಲಿ ಸಿದ್ಧಲಿಂಗ ಶ್ರೀಗಳು ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts