More

    ಪರಸ್ಪರ ಹೊಂದಾಣಿಕೆಯಿಂದ ಬಾಳು ಬಂಗಾರ: ಉಜ್ಜಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರ ಆಶೀರ್ವಚನ

    ಕುಷ್ಟಗಿ: ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇದ್ದರೆ ಬಾಳು ಬಂಗಾರವಾಗುತ್ತದೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

    ಶರಣಬಸವೇಶ್ವರ ಜಾತ್ರೆ ನಿಮಿತ್ತ ಶ್ಯಾಡಲಗೇರಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಬಹುತೇಕರು ಹೆತ್ತವರನ್ನು ಕಡೆಗಣಿಸುತ್ತಾರೆ. ಎಷ್ಟೇ ಜನ್ಮ ಎತ್ತಿ ಬಂದರೂ ಹೆತ್ತವರ ಋಣ ತೀರಿಸಲಾಗದು. ವೈಯಕ್ತಿಕ ಜೀವನದ ಜತೆಗೆ ಪಾಲಕರ ಕಾಳಜಿಯನ್ನೂ ಮಾಡುವ ಮೂಲಕ ಬದುಕಿನ ಸಂಧ್ಯಾ ಕಾಲದಲ್ಲಿ ನೆರವಾಗಬೇಕಿದೆ. ಪರಸ್ಪರ ಪ್ರೀತಿ-ಪ್ರೇಮ ಹಾಗೂ ಪರೋಪಕಾರ ಗುಣಗಳಿಂದ ವ್ಯಕ್ತಿ ಶ್ರೇಷ್ಠ ಎನಿಸಿಕೊಳ್ಳುತ್ತಾನೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಮೂಹಿಕ ವಿವಾಹ ಏರ್ಪಡಿಸುವುದರಿಂದ ಬಡ ಕುಟುಂಬಗಳ ಹೊರೆ ಕಡಿಮೆ ಮಾಡಿದಂತಾಗುತ್ತದೆ. ದೇವರಲ್ಲಿ ನಂಬಿಕೆ ಹಾಗೂ ಗುರುಗಳಲ್ಲಿ ಭಕ್ತಿ ಹೊಂದಿ ಜೀವನ ನಡೆಸಿ ಎಂದು ಉಪದೇಶ ಮಾಡಿದರು.

    ಕುಷ್ಟಗಿ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯರು ಮಾತನಾಡಿ, ಜಾತಿ ಭೇದ ಮರೆತು ಎಲ್ಲರೂ ಒಂದಾಗಿ ಜಾತ್ರೆ ಉತ್ಸವಗಳಲ್ಲಿ ಪಾಲ್ಗೊಳ್ಳುವಂತೆ ಉಳಿದ ದಿನಗಳಲ್ಲಿಯೂ ಸೌಹಾರ್ದದಿಂದ ಬಾಳಬೇಕಿದೆ ಎಂದರು. ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ಪುಟ್ಟ ಗ್ರಾಮವಾದರೂ ಜಗದ್ಗುರುಗಳನ್ನು ಆಹ್ವಾನಿಸಿ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿಸುವ ಮೂಲಕ ಗ್ರಾಮಸ್ಥರು ಭಕ್ತಿ ಮೆರೆದಿದ್ದಾರೆ. ಹಿರಿಯರ ಸಲಹೆ ಹಾಗೂ ಮಾರ್ಗದರ್ಶನ ಪಡೆದು ನವದಂಪತಿಗಳು ಸುಖಕರ ಜೀವನ ನಡೆಸುವಂತೆ ಶುಭಹಾರೈಸಿದರು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉಜ್ಜಿನಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಸಲಾಯಿತು.

    ಜೀಗೇರಿಯ ಗುರುಸಿದ್ದಯ್ಯ ಸ್ವಾಮೀಜಿ, ಏಕದಂಡಗಿಮಠದ ಎ.ತೀಥೇಂದ್ರ ಸ್ವಾಮೀಜಿ, ಹನುಮನಾಳದ ಪಿ.ಎಸ್.ಚೌಕಿಮಠ, ದೇವಸ್ಥಾನದ ಅರ್ಚಕ ಮುತ್ತಯ್ಯ ಹಿರೇಮಠ, ಇಳಕಲ್‌ನ ನಿವೃತ್ತ ಉಪನ್ಯಾಸಕ ಬಿ.ಎಸ್.ದುಂಡಾರಡ್ಡಿ, ಪ್ರಮುಖರಾದ ರಾಚಮ್ಮ ಹಿರೇಮಠ, ಸಿದ್ದಪ್ಪ ಆರಿ, ನಾಗನಗೌಡ ಪೊಲೀಸ್ ಪಾಟೀಲ್, ವೀರನಗೌಡ ಗೌಡ್ರ, ಸಂಗಪ್ಪ ಅಂಗಡಿ, ಶಿವಪ್ಪ ರಡ್ಡೇರ್, ಭೀಮಪ್ಪ ವಕ್ರ, ಸಂಗಣ್ಣ ಹಳದೂರು, ಅಯ್ಯಪ್ಪ ನಸಗುನ್ನಿ, ರೇಖಾ ಆರಿ, ಲಾಲ್ ಸಾಬ್ ಕಡೇಮನಿ, ಜಗದೀಶ ಹಿರೇಮಠ, ಮೌನೇಶ ಕಮ್ಮಾರ್, ಅಮರಪ್ಪ ವಡ್ರಾವತರ್, ಗುರುರಾಜ ಹಡಪದ್, ಶರಣಪ್ಪ ಹೊಸೂರು, ವಿರೂಪಾಕ್ಷಪ್ಪ ಗೋನಾಳ, ಗುರುಪಾದಪ್ಪ ಹಡಪದ್, ಅಬ್ದುಲ್ ಮುಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts