More

    “ಅಮೃತ್​ಪಾಲ್​ ಸಿಂಗ್​ ಸರೆಂಡರ್​ ಆಗಿಲ್ಲ…” ಸ್ಪಷ್ಟನೆ ನೀಡಿದ ಪಂಜಾಬ್​ ಪೊಲೀಸರು

    ಪಂಜಾಬ್​: ಪರಾರಿಯಾಗಿರುವ ಖಲಿಸ್ತಾನಿ ಪರ ನಾಯಕ ಅಮೃತಪಾಲ್ ಸಿಂಗ್ ಅವರನ್ನು ಭಾನುವಾರ ಬೆಳಗ್ಗೆ ಶರಣಾಗಿಲ್ಲ. ಬದಲಾಗಿ ಆತನನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಭಾನುವಾರ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಅಮೃತ್​ಪಾಲ್​ ಸಿಂಗ್​ ಸಹಚರನ ಬಂಧನ; ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು

    ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇನ್ಸ್‌ ಪೆಕ್ಟರ್ ಜನರಲ್ ಆಫ್ ಪೊಲೀಸ್‌ (ಪ್ರಧಾನ ಕಛೇರಿ) ಸುಖಚೈನ್ ಸಿಂಗ್ ಗಿಲ್, ಪೊಲೀಸರು ಅಮೃತಪಾಲ್ ಸಿಂಗ್ ಮೇಲೆ ನಿರಂತರ ಒತ್ತಡ ಹೇರಿದ್ದು ಅದರಿಂದಾಗಿ ಶರಣಾಗುವುದನ್ನು ಬಿಟ್ಟು ಆತನಿಗೆ ಬೇರೆ ದಾರಿಯೇ ಇರಲಿಲ್ಲ. ಆತನನ್ನು ಮೊಗಾದ ರೋಡ್ ಗ್ರಾಮದ ಬಳಿ ಬೆಳಗ್ಗೆ 6;45ಕ್ಕೆ ಬಂಧಿಸಲಾಯಿತು” ಎಂದು ಹೇಳಿದರು. 

    ಇದನ್ನೂ ಓದಿ: ಪಂಜಾಬ್​ ಸರ್ಕಾರಕ್ಕೆ ನನ್ನನ್ನು ಬಂಧಿಸುವ ಉದ್ದೇಶ ಇದ್ದಿದ್ದರೆ ಪೊಲೀಸರು ನನ್ನ ಮನೆಗೆ ಬರುತ್ತಿದ್ದರು: ಅಮೃತ್​ಪಾಲ್​ ಸಿಂಗ್​

    “ಅಮೃತ್​ಪಾಲ್ ರೋಡ್‌ ಎಂಬಲ್ಲಿದ್ದಾನೆ ಎಂಬ ವಿಶ್ವಾಸಾರ್ಹ ಮಾಹಿತಿ ಪೊಲೀಸರಿಗೆ ಇತ್ತು. ಅಮೃತಪಾಲ್‌ಗೆ ಯಾವುದೇ ತಪ್ಪಿಸಿಕೊಂಡು ಹೋಗಲು ಯಾವುದೇ ಅವಕಾಶ ಸಿಗದೇ ಹೋದಾಗ ಬಂಧಿಸಲಾಯಿತು. ಗುರುದ್ವಾರದ ಮರ್ಯಾದಾ ಮಿತಿಗಳನ್ನು ಅನುಸರಿಸಿರುವ ಪೊಲೀಸರು ಗುರುದ್ವಾರದ ಒಳಗೆ ಪ್ರವೇಶಿಸಲಿಲ್ಲ” ಎಂದು ಐಜಿಪಿ ಹೇಳಿದರು. ಗುಪ್ತಚರ ವಿಭಾಗ ಮತ್ತು ಅಮೃತಸರ ಗ್ರಾಮಾಂತರ ಪೊಲೀಸರ ಜಂಟಿ ಕಾರ್ಯಾಚರಣೆಯಡಿ ಅಮೃತಪಾಲ್​ನನ್ನು ಬಂಧಿಸಲಾಗಿದೆ ಎಂದು ಐಜಿಪಿ ತಿಳಿಸಿದ್ದಾರೆ. ಅಮೃತಪಾಲ್​ನನ್ನು ಬಂಧಿಸಿದ ನಂತರ ಅಸ್ಸಾಂನ ದಿಬ್ರುಗಢ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts