More

    ಸುಡಾನ್ ಅಂತರ್ಯುದ್ಧದಲ್ಲಿ 3 ಸಾವಿರ ಭಾರತೀಯರು ಅತಂತ್ರ; ಯುದ್ಧ ಆರಂಭವಾದದ್ದು ಹೀಗೆ…

    ಸುಡಾನ್​: ಸುಡಾನ್‌ನಲ್ಲಿ 400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 3,000 ಮಂದಿ ಗಾಯಗೊಂಡು ಅನೇಕರು ಸ್ಥಳಾಂತರಗೊಂಡರು. ಈದ್ ಹಬ್ಬದ ಹಿನ್ನೆಲೆಯಲ್ಲಿ ಕದನ ವಿರಾಮದ ಪ್ರಯತ್ನವೂ ವ್ಯರ್ಥವಾಗಿದ್ದು ಹೋರಾಟ ಮುಂದುವರಿದಿದೆ.

    ಶನಿವಾರ (ಏಪ್ರಿಲ್ 22), ಸುಡಾನ್ ಸೇನೆಯು ಅಮೆರಿಕ, ಇಂಗ್ಲೆಂಡ್​, ಚೀನಾ ಮತ್ತು ಫ್ರಾನ್ಸ್‌ನ ರಾಜತಾಂತ್ರಿಕರನ್ನು ಮಿಲಿಟರಿ ವಿಮಾನಗಳಲ್ಲಿ ದೇಶದಿಂದ ಸ್ಥಳಾಂತರಿಸುವ ಪ್ರಯತ್ನಗಳನ್ನು ಸಂಘಟಿಸುತ್ತಿದೆ ಎಂದು ವರದಿಯಾಗಿತ್ತು.

    ಪರಿಸ್ಥಿತಿ ಅಸ್ಥಿರವಾಗಿದ್ದು ವಿಮಾನ ನಿಲ್ದಾಣಗಳು ಅಸುರಕ್ಷಿತವಾಗಿರುವ ಕಾರಣ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸುವುದು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಸೇನೆಯೊಂದಿಗಿನ ಪೈಪೋಟಿಯು ಪ್ರಸ್ತುತ ಹಿಂಸಾಚಾರಕ್ಕೆ ಕಾರಣವಾಗಿರುವ ಅರೆಸೈನಿಕ ಗುಂಪು ರಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ರಾಜಧಾನಿ ಖಾರ್ಟೌಮ್‌ನಲ್ಲಿರುವ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ.

    ಸುಡಾನ್​ನಲ್ಲಿ ಸಿಕ್ಕಿಬಿದ್ದಿರುವ ವಿದೇಶಿ ಪ್ರಜೆಗಳಲ್ಲಿ ಸುಮಾರು 3,000 ಭಾರತೀಯರು ಸೇರಿದ್ದಾರೆ. ಅವರಲ್ಲಿ ಕೇರಳದ 48 ವರ್ಷದ ಆಲ್ಬರ್ಟ್ ಆಗಸ್ಟೀನ್ ಗುಂಡಿಗೆ ಬಲಿಯಾಗಿದ್ದಾರೆ.

    ಸೈನ್ಯ ಮತ್ತು ಆರ್‌ಎಸ್‌ಎಫ್ ಇದುವರೆಗೆ ಮಾತುಕತೆಗೆ ಸಿದ್ಧವಾಗಿಲ್ಲದಿದ್ದರೂ – ಅಂತರ್ಯುದ್ಧದ ಹೆಚ್ಚಾಗುತ್ತಿದೆ. ಶನಿವಾರ, ಸೇನಾ ಮುಖ್ಯಸ್ಥ ಮತ್ತು ಸುಡಾನ್​ ದೇಶದ ಅಧ್ಯಕ್ಷ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಅಲ್ ಅರೇಬಿಯಾ ಟಿವಿಗೆ ಕಾದಾಡುತ್ತಿರುವ ಬಣಗಳು ಒಟ್ಟಿಗೆ ಕುಳಿತು ಜೀವನವನ್ನು ಪುನಃ ಸ್ಥಾಪಿಸಲು ಸರಿಯಾದ ಮಾರ್ಗವನ್ನು ಕಂಡುಕೊಳ್ಳುವ ಅಗತ್ಯವಿದೆ. ಈ ಯುದ್ಧದಲ್ಲಿ ಎಲ್ಲರೂ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ” ಎಂದಿದ್ದಾರೆ.

    ಸುಡಾನ್‌ನಲ್ಲಿ ಸಂಘರ್ಷಕ್ಕೆ ಕಾರಣವೇನು?

    ಪ್ರಬಲ RSFಅನ್ನು 2013 ರಲ್ಲಿ ರಚಿಸಲಾಗಿತ್ತು. ಮುಖ್ಯವಾಗಿ 2000ದ ದಶಕದಲ್ಲಿ ಡಾರ್ಫರ್‌ನಲ್ಲಿ ನಡೆದ ಯುದ್ಧದ ಸಮಯದಲ್ಲಿ ಸುಡಾನ್ ಸರ್ಕಾರದ ಪರವಾಗಿ ಹೋರಾಡಿದ ಜಂಜಾವೀಡ್ ಮಿಲಿಷಿಯಾಗಳನ್ನು ಒಳಗೊಂಡಿದೆ. ಇದನ್ನು ಮೊಹಮ್ಮದ್ ಹಮ್ದಾನ್ ದಗಾಲೊ ನೇತೃತ್ವ ವಹಿಸಿದ್ದು ಅದನ್ನು ಹೆಮೆಟ್ಟಿ ಎಂದೂ ಕರೆಯುತ್ತಾರೆ. ಅದಲ್ಲದೇ ಇವರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವಿದೆ.

    ಪ್ರಸ್ತುತ ಸಂಘರ್ಷ ಏಪ್ರಿಲ್ 2019 ರಿಂದ ಮೆಲ್ಲಮೆಲ್ಲಬೇ ಶುರುವಾಗಿದ್ದು ಸುಡಾನ್‌ನಲ್ಲಿ ದೀರ್ಘಕಾಲ ಅಧಿಕಾರದಲ್ಲಿದ್ದ ಅಧ್ಯಕ್ಷ ಒಮರ್ ಅಲ್-ಬಶೀರ್​ರನ್ನು ದೇಶಾದ್ಯಂತದ ಪ್ರತಿಭಟನೆಗಳು ನಡೆದ ನಂತರ ಮಿಲಿಟರಿ ಜನರಲ್‌ಗಳು ಪದಚ್ಯುತಗೊಳಿಸಿದಾಗ. ಮಿಲಿಟರಿ ಜನರಲ್‌ಗಳಿಗೆ ಅಧಿಕಾರ ನೀಡಿದ ನಂತರ ಪ್ರತಿಭಟನಾಕಾರರು ಪ್ರಜಾಪ್ರಭುತ್ವ ಸರ್ಕಾರಕ್ಕೆ ಒತ್ತಾಯಿಸಿದ್ದರು.

    ಇದು ಮಿಲಿಟರಿ ಮತ್ತು ಪ್ರತಿಭಟನಾಕಾರರ ನಡುವಿನ ಒಪ್ಪಂದಕ್ಕೆ ಕಾರಣವಾಯಿತು. ಅದರ ಅಡಿಯಲ್ಲಿ ಮಿಲಿಟರಿ ಅಧಿಕಾರಿಗಳು ಮತ್ತು ನಾಗರಿಕರ ಅಧಿಕಾರ ಹಂಚಿಕೆಯ ಸಂಸ್ಥೆಯನ್ನು ಸಾರ್ವಭೌಮ ಮಂಡಳಿ ಒಂದನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಇದು 2023 ರ ಕೊನೆಯಲ್ಲಿ ಸುಡಾನ್ ಚುನಾವಣೆಗೆ ಕಾರಣವಾಗುತ್ತದೆ. 2021 ರ ದಂಗೆಯ ನಂತರ, ಮಿಲಿಟರಿ ಮತ್ತು ಆರ್ಎಸ್ಎಫ್ ನಡುವಿನ ಸಂಬಂಧಗಳು ಹದಗೆಟ್ಟವು. ದಗಾಲೊ, ತನ್ನನ್ನು ನಿಜವಾದ ‘ಜನರ ನಾಯಕ’ ಎಂದು ಹೇಳುತ್ತಾ, 2021 ರ ದಂಗೆ ಆಗಬಾರದಿತ್ತು ಎಂದು ಹೇಳಿದರು. ಇದರ ನಂತರ ಘಟನೆಗಳು ಒಂದಕ್ಕೊಂದು ಪೂರಕವಾಗಿ ಬೆಳೆದು ಸೇನೆ ಮತ್ತು ಆರ್​ಎಸ್​ಎಫ್​ ನಡುವೆ ವೈಮನಸ್ಸು ಬೆಳೆದು ಇದೀಗ ಸುಡಾನ್​ ಅತಂತ್ರವಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts