More

    ರಫೇಲ್ ಯುದ್ಧ ವಿಮಾನಗಳ ಮತ್ತೊಂದು ಬ್ಯಾಚ್​ನ ನವೆಂಬರ್​ನಲ್ಲಿ ಭಾರತಕ್ಕೆ ಬರಲಿವೆ

    ನವದೆಹಲಿ: ರಫೇಲ್ ಯುದ್ಧ ವಿಮಾನಗಳ ಮತ್ತೊಂದು ಬ್ಯಾಚನ್ನು ಮುಂದಿನ ತಿಂಗಳು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಫ್ರಾನ್ಸ್​​ನ ಡಸಾಲ್ಟ್ ಏವಿಯೇಷನ್ ಸಿದ್ಧತೆ ನಡೆಸಿದೆ. ಇದು ಎರಡನೇ ಬ್ಯಾಚ್ ಆಗಿದ್ದು, ಮೊದಲ ಬ್ಯಾಚಿನ ವಿಮಾನಗಳು ಜುಲೈ 29ಕ್ಕೆ ಭಾರತಕ್ಕೆ ಆಗಮಿಸಿದ್ದು, ಸೆಪ್ಟೆಂಬರ್​ 10ರಂದು ಅಂಬಾಲ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆ ಸೇರ್ಪಡೆಗೊಂಡಿತ್ತು.

    ಎರಡನೇ ಬ್ಯಾಚಿನ ವಿಮಾನಗಳನ್ನು ಸ್ವೀಕರಿಸುವುದಕ್ಕೆ ಅಗತ್ಯ ಸಿದ್ಧತೆ ನಡೆಸಲು ಪ್ರಾಜೆಕ್ಟ್​ ನ ಅಸಿಸ್ಟೆಂಟ್ ಚೀಫ್ ಆಫ್ ಏರ್ ಸ್ಟಾಫ್ ನೇತೃತ್ವದ ಪರಿಣತರ ತಂಡ ಫ್ರಾನ್ಸ್​ಗೆ ತೆರಳಿದೆ. ವಾಯುಪಡೆಯ ಪೈಲಟ್​ಗಳಿಗೆ ಬ್ಯಾಚ್​ಗಳಲ್ಲಿ ಫ್ರಾನ್ಸ್​ನ ಸೇಂಟ್ ಡಿಝಿಯೆರ್ ವಾಯುನೆಲೆಯಲ್ಲಿ ತರಬೇತಿ ಒದಗಿಸಲಾಗುತ್ತಿದೆ.

    ಇದನ್ನೂ ಓದಿ: PHOTOS|ಫ್ರೆಂಚ್​ ನಿರ್ಮಿತ ರಫೇಲ್​ ಸೇನೆ ಸೇರಿದ ಕ್ಷಣ : ಚೀನಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ

    ಭಾರತ ಸರ್ಕಾರ ಫ್ರಾನ್ಸ್ ಜತೆಗೆ 36 ರಫೇಲ್ ಯುದ್ಧ ವಿಮಾನ ಖರೀದಿಯ ಒಪ್ಪಂದ ಮಾಡಿಕೊಂಡಿದೆ. ಇದರ ಮೊತ್ತ 59,000 ಕೋಟಿ ರೂಪಾಯಿ ಆಗಿದೆ. ಮೊದಲ ಬ್ಯಾಚಿನಲ್ಲಿ 5 ವಿಮಾನಗಳನ್ನು ಡಸಾಲ್ಟ್​ ಕಂಪನಿ ಕಳುಹಿಸಿತ್ತು. (ಏಜೆನ್ಸೀಸ್)

    ಬಲೂಚ್​ನಲ್ಲಿ ತೈಲ,ಅನಿಲ ಕಾರ್ಮಿಕ ಕಾವಲು ಪಡೆ ಮೇಲೆ ಉಗ್ರ ದಾಳಿ: 7 ಯೋಧರು ಸೇರಿ 14 ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts