More

    ಪರಿಸರ ರಕ್ಷಣೆಗೆ ಎಲ್ಲರ ಕಾಳಜಿ ಅಗತ್ಯ; ವಿಎಸ್‌ಕೆ ವಿವಿ ಪ್ರಭಾರ ಕುಲಪತಿ ಪ್ರೊ.ತಿಪ್ಪೇರುದ್ರಪ್ಪ ಅಭಿಮತ


    ಬಳ್ಳಾರಿ: ಪರಿಸರ ಸಂರಕ್ಷಣೆಗೆ ಮಾನವನ ಕೊಡುಗೆಗಳು ಗಣನೀಯವಾಗಿ ಕ್ಷೀಣಿಸುತ್ತಿದ್ದು, ಮನುಕುಲಕ್ಕೆ ಸಂಕಷ್ಟ ಎದುರಾಗಲಿದೆ ಎಂದು ವಿಎಸ್‌ಕೆ ವಿವಿ ಪ್ರಭಾರ ಕುಲಪತಿ ಜೆ.ತಿಪ್ಪೇರುದ್ರಪ್ಪ ಅಭಿಪ್ರಾಯಪಟ್ಟರು.

    ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ಮಂಗಳವಾರ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಯೋಜನೆಯ ಭಾಗವಾಗಿ ಆಯೋಜಿಸಿದ್ದ ಯುವಮಂಥನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪ್ರಸ್ತುತ ದಿನಗಳಲ್ಲಿ ಪರಿಸರ ರಕ್ಷಣೆ ಕುರಿತು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಸ್ವಚ್ಛ ಪರಿಸರ ನಿರ್ಮಾಣಕ್ಕೆ ಅಳಿಲು ಸೇವೆ ಸಲ್ಲಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗಿ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

    ವಿವಿ ಕುಲಸಚಿವ ಎಸ್.ಎನ್.ರುದ್ರೇಶ್ ಮಾತನಾಡಿ, ಸುಸ್ಥಿರ ಬದುಕಿಗೆ ಪ್ಲಾಸ್ಟಿಕ್‌ಮುಕ್ತ ವಾತಾವರಣ ನಿರ್ಮಾಣವಾಗಬೇಕು. ನೈಸರ್ಗಿಕ ತಾಪಮಾನ ನಿಯಂತ್ರಣ ಮಾಡಲು ಮರ-ಗಿಡಗಳನ್ನು ನೆಟ್ಟು ಪೋಷಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳು ಕಠಿಣವಾಗಲಿವೆ ಎಂದರು. ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ವಿಜಯಕುಮಾರ ಮಾತನಾಡಿದರು.

    24 ಎರ‌್ರಿಸ್ವಾಮಿ 05
    ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಯುವಮಂಥನ ಸಂವಾದ ಕಾರ್ಯಕ್ರಮವನ್ನು ಪ್ರಭಾರ ಕುಲಪತಿ ಜೆ.ತಿಪ್ಪೇರುದ್ರಪ್ಪ ಉದ್ಘಾಟಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನಿರಂಜನ, ಪ್ರಾಧ್ಯಾಪಕರಾದ ಡಾ.ಹನುಮೇಶ್ ವೈದ್ಯ, ಡಾ.ಕೆ.ಎಸ್. ಲೋಕೇಶ್, ಡಾ.ಅಂಶುಮಾಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts