More

    ‘ಬಾಹುಬಲಿ 2’ ಬಿಡುಗಡೆಯಾದ ದಿನದಂದೇ ‘ರಾಧೇ ಶ್ಯಾಮ್​’?

    ಹೈದರಾಬಾದ್​​: ಶುಕ್ರವಾರ (ಅಕ್ಟೋಬರ್​ 23) ಟಾಲಿವುಡ್​ ನಟ ಪ್ರಭಾಸ್​ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬದ ಸಂದರ್ಭದಲ್ಲಿ ‘ರಾಧೇ ಶ್ಯಾಮ್​’ ತಂಡದವರು ಎರಡು ಗಿಫ್ಟ್​ಗಳನ್ನು ಕೊಡುವ ಸಾಧ್ಯತೆ ಇದೆ.

    ಇದನ್ನೂ ಓದಿ: ‘ಜನ ಗಣ ಮನ’ ಎನ್ನುತ್ತಿದ್ದ ಪೃಥ್ವಿರಾಜ್​ಗೆ ಕರೊನಾ ಪಾಸಿಟಿವ್​

    ಮೊದಲನೆಯದಾಗಿ, ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿಯೇ, ಅಂದರೆ ನಾಳೆ ಗುರುವಾರ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆಯಾಗಲಿದೆಯಂತೆ. ಇದಕ್ಕೂ ಮೊದಲು ಚಿತ್ರದ ಒಂದು ಪೋಸ್ಟರ್​ ಮತ್ತು ನಾಯಕಿಯನ್ನು ಪರಿಚಯಿಸುವ ಒಂದು ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಇದೀಗ ಮೋಷನ್​ ಪೋಸ್ಟರ್​ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

    ಇನ್ನು ಎರಡನೆಯದಾಗಿ, ಪ್ರಭಾಸ್​ ಹುಟ್ಟುಹಬ್ಬಕ್ಕೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗುತ್ತದಂತೆ. ಈಗಾಗಲೇ, ಚಿತ್ರದ ಆರ್ಧದಷ್ಟು ಚಿತ್ರೀಕರಣ ಮುಗಿದಿದ್ದು, ಮುಂದಿನ ಎರಡು ತಿಂಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗಲಿದೆಯಂತೆ. ಆ ನಂತರ, ಮುಂದಿನ ವರ್ಷ ಚಿತ್ರ ಬಿಡುಗಡೆ ಎಂದು ಹೇಳಲಾಗುತ್ತಿದೆ.

    ಎಲ್ಲಾ ಸರಿ, ಚಿತ್ರದ ಬಿಡುಗಡೆ ಯಾವಾಗ ಆಗಬಹುದು ಎಂಬ ಪ್ರಶ್ನೆಗೆ, ‘ಬಾಹುಬಲಿ 2’ ಬಿಡುಗಡೆಯಾದ ದಿನವೇ ‘ರಾಧೇ ಶ್ಯಾಮ್​’ ಸಹ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ‘ಬಾಹುಬಲಿ 2’ ಚಿತ್ರವು ಏಪ್ರಿಲ್​ 28ಕ್ಕೆ ಬಿಡುಗಡೆಯಾಗಿತ್ತು. ಈಗ ‘ರಾಧೇ ಶ್ಯಾಮ್​’ ಚಿತ್ರವನ್ನು ಸಹ ಏಪ್ರಿಲ್​ 28 ಅಥವಾ ಅದೇ ವಾರದಲ್ಲಿ ಮಾಡುವುದು ಚಿತ್ರತಂಡದ ಯೋಚನೆ.

    ಇದನ್ನೂ ಓದಿ: ಒಂದೇ ತಿಂಗಳಲ್ಲಿ ಪ್ರೀತಿಯಾಗಿ, ಮದುವೆಯಾಗೋಕೆ ಹೇಗೆ ಸಾಧ್ಯ?: ಆದಿತ್ಯ ನಾರಾಯಣ್​

    ಸದ್ಯಕ್ಕೆ ಚಿತ್ರಪ್ರದರ್ಶನ ಪ್ರಾರಂಭವಾಗುತ್ತಿದ್ದು, ಮುಂದಿನ ಬೇಸಿಗೆ ರಜೆಯ ಹೊತ್ತಿಗೆ ಜನ ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ಬರುತ್ತಾರೆ ಎಂಬ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದರೆ ಅನುಕೂಲ ಎಂದು ಚಿತ್ರತಂಡ ಯೋಚಿಸಿದ್ದು, ಅದರಂತೆ ಏಪ್ರಿಲ್ 28 ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಪ್ರೀತಿ ಮತ್ತು ಕ್ರೂರತೆ ಸಹಬಾಳ್ವೆ ನಡೆಸಬಹುದೇ?; ಶ್ರೀನಿಧಿಗೆ ಪ್ರಶಾಂತ್​ ನೀಲ್ ಹೀಗೆ ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts