More

    VIDEO| ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಮರ್ಷಿಯಲ್ ಸ್ಟ್ರೀಟ್​ನಲ್ಲಿ ರಚಿತಾ ರಾಮ್ ಶಾಪಿಂಗ್

    ಬೆಂಗಳೂರು: ಕಳೆದ ಕೆಲ ತಿಂಗಳ ಹಿಂದಷ್ಟೇ ನಟಿ ರಚಿತಾ ರಾಮ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ನಮ್ಮ ಮೆಟ್ರೋದಲ್ಲಿ ಸುತ್ತಾಡಿ ಬಂದಿದ್ದರು. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದರು. ಇದೀಗ ಮತ್ತೆ ಅದೇ ರೀತಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಶಾಪಿಂಗ್ ಮಾಡಿದ್ದಾರೆ.

    ಇದನ್ನೂ ಓದಿ: ಟಾಲಿವುಡ್​ನಲ್ಲಿ ಘೀಳಿಡಲಿದೆ ಮದಗಜ!; ತೆಲುಗಿಗೆ ಹೊರಟು ನಿಂತ ಶ್ರೀಮುರಳಿ

    ಶಿವಾಜಿನಗರದ ಕಮರ್ಷಿಯಲ್​ ಸ್ಟ್ರೀಟ್​ನಲ್ಲಿ ವೀರಂ ಸಿನಿಮಾ ಸಲುವಾಗಿ ಕಾಸ್ಟ್ಯೂಮ್​ ಖರೀದಿ ಮಾಡಲು ಇಡೀ ತಂಡ ತೆರಳಿತ್ತು. ಒಂದಷ್ಟು ಹೊತ್ತು ಇಡೀ ಮಾರುಕಟ್ಟೆಯನ್ನು ಸುತ್ತಾಡಿ ಬೇಕಾದ ಬಟ್ಟೆಗಳನ್ನು ಖರೀದಿ ಮಾಡಿದ್ದಾರೆ.

    ಇದನ್ನೂ ಓದಿ: ಸ್ಯಾಂಡಲ್​ವುಡ್​ ಖ್ಯಾತ ನಿರ್ಮಾಪಕ ಕೆ. ಮಂಜು ವಿರುದ್ಧ ಎಫ್​ಐಆರ್​ ದಾಖಲು

    ಈ ರೀತಿಯ ಶಾಪಿಂಗ್​ ಮಾಡುತ್ತಿರುವುದರ ಬಗ್ಗೆ ಮಾತನಾಡಿದ ರಚಿತಾ, ಇದೊಂದು ಹೊಸ ರೀತಿ ಅನುಭವ. ಈ ಮೊದಲು ಮೆಟ್ರೋದಲ್ಲಿ ಈ ರೀತಿ ಸುತ್ತಾಡಿದ್ದೆ. ಇದೀಗ ಅದೇ ರೀತಿ ಕಮರ್ಷಿಯಲ್ ಸ್ಟ್ರೀಟ್​ನಲ್ಲಿದ್ದೇವೆ. ನನ್ನನ್ನು ಯಾರು ಗುರುತಿಸುತ್ತಿಲ್ಲ. ಸಿನಿಮಾಗಾಗಿ ಶಾಪಿಂಗ್ ಬಂದಿದ್ದೇವೆ. ಇಡೀ ಚಿತ್ರತಂಡ ಇಲ್ಲಿದೆ’ ಎಂದು ಎಲ್ಲರನ್ನು ಪರಿಚಯ ಮಾಡಿಕೊಟ್ಟಿದ್ದಾರೆ.

    ಸೂಪರ್​ಸ್ಟಾರ್​ ರಜಿನಿಕಾಂತ್​ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts