More

    ತನಗಿಂತ 10 ವರ್ಷ ಚಿಕ್ಕವನನ್ನು ಮದುವೆ ಆಗಲು ಖತರ್ನಾಕ್​ ಐಡಿಯಾ ಮಾಡಿ ಸಿಕ್ಕಿಬಿದ್ದ ಮಹಿಳೆ..!

    ಡೆಹ್ರಾಡೂನ್​: ಯುವಕನನ್ನು ಮದುವೆ ಆಗಲು ತಂದೆ ಮತ್ತು ಸಹೋದರಿಯೊಂದಿಗೆ ಸೇರಿ ಯುವತಿ ಎಂದು ಬಿಂಬಿಸಲು ದಾಖಲಾತಿಗಳನ್ನು ಫೋರ್ಜರಿ ಮಾಡಿದ ಆರೋಪದ ಮೇಲೆ 38 ವರ್ಷದ ಮಹಿಳೆ ಹಾಗೂ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

    ಮೂವರು ಕೂಡ ಉತ್ತರ ಪ್ರದೇಶದ ಲಖನೌ ಮೂಲದವರು. ಮತ್ತೊಂದು ಮದುವೆ ಆಗಲು ಮುಂದಾಗಿದ್ದ ಮಹಿಳೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

    ತನಿಖಾಧಿಕಾರಿ ಸತೇಂದ್ರ ಭಂಡಾರಿ ಹೇಳುವ ಪ್ರಕಾರ, ಯುವಕನಿಗೆ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ಮಹಿಳೆಯೊಬ್ಬಳ ಪರಿಚಯವಾಗಿದೆ. ಆಕೆ ತನ್ನ ಪ್ರೊಫೈಲ್​ನಲ್ಲಿ ತನೆಗೆ 28 ವರ್ಷ ಎಂದು ಘೋಷಣೆ ಮಾಡಿಕೊಂಡಿದ್ದರಿಂದ ಯುವಕ ಆಕೆಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಅಲ್ಲದೆ, 1991 ಒಂದರಲ್ಲಿ ಹುಟ್ಟಿರುವಂತೆ ಬಿಂಬಿಸಲು ತಂದೆಯ ಕೆಲವು ದಾಖಲೆಗಳನ್ನು ಮಹಿಳೆ ತನ್ನ ಪ್ರೋಫೈಲ್​ನಲ್ಲಿ ಸೇರಿಸಿದ್ದರಿಂದ ಯುವಕ ನಂಬಿದ್ದಾನೆ.

    ಮದುವೆ ಇನ್ನು 20 ದಿನಗಳಿವೆ ಅನ್ನುವಷ್ಟರಲ್ಲಿ ಯುವಕನಿಗೆ ಮಹಿಳೆಯ ಅಸಲಿ ವಿಚಾರ ಗೊತ್ತಾಗಿದೆ. ಆಕೆ ಹುಟ್ಟಿದ ವರ್ಷ 1991 ಅಲ್ಲ, ಬದಲಾಗಿ 1983 ಎಂಬುದು ತಿಳಿದಿದೆ. ಮ್ಯಾಟ್ರಿಮೋನಿಯಲ್​ ಪ್ರೊಫೈಲ್​ನಲ್ಲಿ ಅಪ್​ಲೋಡ್​ ಮಾಡಿರುವುದು ಫೋರ್ಜರಿ ದಾಖಲೆಗಳು ಎಂಬುದು ತಿಳಿದಿದೆ. ಇದಾದ ಬಳಿಕ ಮಹಿಳೆಯ ತಂದೆ ಮತ್ತು ಸಹೋದರಿ ಯುವಕನಿಗೆ ಬೆದರಿಕೆ ಒಡ್ಡಿದ್ದಾರೆ. ಏನಾದರೂ ಪೊಲೀಸ್​ ದೂರು ದಾಖಲಿಸಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಡೆಹ್ರಾಡೂನ್​ನಲ್ಲಿ ಕೆಲಸ ಮಾಡುತ್ತಿರುವ ಯುವಕ ಮೂವರ ವಿರುದ್ಧ ಬುಧವಾರ ದೂರು ದಾಖಲಿಸಿದ್ದು, ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಈವರೆಗೂ ಯಾವೊಬ್ಬರನ್ನು ಬಂಧಿಸಿಲ್ಲ. ವಿಚಾರಣೆ ನಡೆಸಲು ಉತ್ತರಾಖಂಡ ಪೊಲೀಸರು ಲಖನೌಗೆ ತೆರಳಲಿದ್ದಾರೆ ಎಂಬ ಮಾಹಿತಿ ಇದೆ. (ಏಜೆನ್ಸೀಸ್​)

    ಬಿಗ್​ಬಾಸ್​ಗೆ ರೇಪ್​ ಆರೋಪಿ ಫನ್​ ಬಕೆಟ್​ ಭಾರ್ಗವನ ಎಂಟ್ರಿ? ಆಯೋಜಕರು ಕೊಟ್ಟ ಸ್ಪಷ್ಟನೆ ಹೀಗಿದೆ…

    ಹೆಚ್ಚಿನ ಎತ್ತರ ತೋರಿಸಲು PSI ದೇಹದಾರ್ಢ್ಯತೆ ಪರೀಕ್ಷೆಗೆ ವಿಗ್​ ಬಳಕೆ! ಯುವಕರಿಬ್ಬರು ಸಿಕ್ಕಿಬಿದ್ದಿದ್ದೇ ರೋಚಕ

    ಮಾಸ್ಟರ್​ ಭೇಟಿಯಾದ ಬ್ಲ್ಯಾಸ್ಟರ್​! ಒಂದೇ ಗಂಟೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಲೈಕ್ಸ್​, ಫ್ಯಾನ್ಸ್​​ ಕ್ರೇಜಿ ಕಮೆಂಟ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts