More

    ಇವರೇನಾದ್ರು ನಿಮ್ಮ ಊರಿಗೆ ಬಂದ್ರೆ 1 ರೂಪಾಯಿ ನೀಡುವ ಮೂಲಕ ಈ ಉತ್ತಮ ಕೆಲಸಕ್ಕೆ ಕೈಜೋಡಿಸಿ..!

    ಕೊಚ್ಚಿ: ಈ ಜಗತ್ತಿನಲ್ಲಿ ಬಡ ಜನರಿಗಾಗಿ ಮಿಡಿಯುವ ಹೃದಯಗಳು ಸಿಗುವುದು ತುಂಬಾ ಅಪರೂಪ. ಕೇರಳದ ವಯನಾಡಿನ ಈ ಇಬ್ಬರು ನಿವಾಸಿಗಳು ಕೂಡ ಸಹೃದಯಿಗಳ ಸಾಲಿಗೆ ಸೇರುತ್ತಾರೆ. ವಾಸಿಸಲು ಮನೆಯಿಲ್ಲದ ಕಡು ಬಡವರಿಗಾಗಿ ಮನೆ ನಿರ್ಮಿಸಿಕೊಡಲು ದೇಶಾದ್ಯಂತ ಸೈಕ್ಲಿಂಗ್​ ಆರಂಭಿಸಿರುವ ಇವರು ಪ್ರತಿಯೊಬ್ಬರಿಂದಿ ಒಂದೊಂದು ರೂಪಾಯಿ ಸಂಗ್ರಹಿಸಲು ಮುಂದಾಗಿದ್ದಾರೆ.

    ರನೀಶ್ ಮತ್ತು ಕೆ.ಜಿ ನಿಜಿನ್ ಎಂಬುವರು 40 ದಿನಗಳ ಹಿಂದೆ ಅಂಬಲವಾಯಲ್‌ನಲ್ಲಿರುವ ತಮ್ಮ ಸ್ಥಳೀಯ ಸ್ಥಳದಿಂದ ದೇಶಾದ್ಯಂತ ಸೈಕ್ಲಿಂಗ್​ನಲ್ಲಿ ಪ್ರವಾಸ ಆರಂಭಿಸಿದ್ದು, ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಮನೆಯಿಲ್ಲದ ಐವರಿಗೆ ಮನೆ ನಿರ್ಮಿಸಿಕೊಡಲು ಮುಂದಾಗಿರುವ ಈ ಯುವಕರಿಗೆ ಜನರು ಸಾಥ್​ ನೀಡಿದ್ದು, ಒಂದೊಂದು ರೂಪಾಯಿಯನ್ನು ಕೊಡುತ್ತಿದ್ದಾರೆ.

    ಇದೇ ಸಂದರ್ಭದಲ್ಲಿ ಯುವಕರ ಒಳ್ಳೆಯ ಉದ್ದೇಶವನ್ನು ಅರಿತುಕೊಂಡ ಕೆಲವರು ಒಂದು ರೂಪಾಯಿಗಿಂತ ಹೆಚ್ಚು ಹಣವನ್ನು ಪಾವತಿಸುತ್ತಿದ್ದಾರೆ. ಬೈಸಿಕಲ್ ಪ್ರವಾಸದ ಉದ್ದೇಶವನ್ನು ಸೂಚಿಸುವ ಒಂದು ಸೈನ್ ಬೋರ್ಡ್ ಮತ್ತು ದೇಣಿಗೆ ಪೆಟ್ಟಿಗೆಯನ್ನು ಬೈಸಿಕಲ್​ನಲ್ಲಿ ಅಳವಡಿಸಲಾಗಿದೆ. ಈ ಮೂಲಕ 39 ದಿನಗಳಲ್ಲಿ ಸಂಗ್ರಹವಾಗಿರುವ 1
    ಲಕ್ಷ ರೂ. ಮೊತ್ತವನ್ನು ಈಗಾಗಲೇ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿರುವ ಬಡವರಿಗೆ ಹಂಚಲಾಗಿದೆ.

    ಕೊಟ್ಟಿಯೂರಿನಿಂದ ಆರಂಭವಾದ ಬೈಸಿಕಲ್​ ಪಯಣ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಒಳನಾಡಿನ ಮೂಲಕ ರಾಜಪುರಂ ತಲುಪಿತು. ಕಾಸರಗೋಡು ತಲುಪಿದ ನಂತರ ಅವರ ಪ್ರಯಾಣವು ರಾಷ್ಟ್ರೀಯ ಹೆದ್ದಾರಿ ಮೂಲಕವೇ ಸಾಗಿತು. ಮುಂದಿನ 11 ತಿಂಗಳಲ್ಲಿ ರಾಜ್ಯಾದ್ಯಂತ ಸಂಚರಿಸಲಿದ್ದು, ಬೇರೆ ರಾಜ್ಯಗಳಿಗೂ ಪ್ರಯಾಣ ಮುಂದುವರಿಸಲಿದ್ದಾರೆ. ಭಾರತದಾದ್ಯಂತ ಪ್ರಯಾಣವನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದಾರೆ. ಪ್ರವಾಸದ ಮೂಲಕ 42 ಲಕ್ಷ ರೂ. ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ.

    ಅಂಬಲವಾಯಲ್ ಮೂಲದ ಜೋಶಿ ಎಂಬುವರು ತಮ್ಮ 20 ಸೆಂಟ್ ಜಮೀನನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮನೆ ನಿರ್ಮಿಸಲು ಮಾರಾಟ ಮಾಡಲು ಒಪ್ಪಿಕೊಂಡಿದ್ದಾರೆ. ಇಲ್ಲಿ ಫಲಾನುಭವಿಗಳಿಗೆ 600 ಚದರ ಅಡಿಯ ಐದು ಮನೆಗಳನ್ನು ನಿರ್ಮಿಸಲಾಗುವುದು.

    ಬೈಸಿಕಲ್​ ಪ್ರಯಾಣವು ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ರಾತ್ರಿ 9 ಗಂಟೆಗೆ ಕೊನೆಗೊಳ್ಳುತ್ತದೆ. ಅವರು ರಾತ್ರಿಯಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಬಿಡಾರ ಹೂಡುತ್ತಾರೆ. ನಿಜಿನ್ ಖಾಸಗಿ ಶಾಲೆಯ ಶಿಕ್ಷಕನಾಗಿದ್ದು, ರನೀಶ್ ಮೊಬೈಲ್ ಅಂಗಡಿ ಉದ್ಯೋಗಿಯಾಗಿದ್ದಾರೆ. ಇವರು ನಿಮ್ಮ ಊರಿಗೆ ಬಂದರೆ ಒಂದು ರೂಪಾಯಿ ನೀಡುವ ಮೂಲಕ ಈ ಒಳ್ಳೆಯ ಕೆಲಸದಲ್ಲಿ ನೀವು ಪಾಲುದಾರರಾಗಬಹುದು. (ಏಜೆನ್ಸೀಸ್​)

    ಲವರ್​ ತಾಯಿಗೆ ಕಿಡ್ನಿ ದಾನ ಮಾಡಿದ ಒಂದೇ ತಿಂಗಳಲ್ಲಿ ಪ್ರಿಯಕರನಿಗೆ ಬಿಗ್​ ಶಾಕ್​ ಕೊಟ್ಟ ಪ್ರಿಯತಮೆ!

    ಮಧ್ಯರಾತ್ರಿ ದಿಢೀರ್​ ದಾಳಿ ಮಾಡಿದ ದುಷ್ಕರ್ಮಿಗಳಿಂದ ಗಂಡನ ಪ್ರಾಣ ಉಳಿಸಿದ ಪತ್ನಿಯ ಸಾಹಸವೇ ರೋಚಕ!

    ಪತಿಯ ಕಾಟ ಸಹಿಸದೇ ಆಗಿದ್ದಾಗಲೆಂದು ರುಂಡ-ಮುಂಡ ಬೇರೆ ಮಾಡಿ ಚೀಲಕ್ಕೆ ಹಾಕಿ ಠಾಣೆಗೆ ಹೋದ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts