More

    VIDEO| ಪ್ಲೇಆಫ್​ ಹಂತಕ್ಕೇರಲು ಪಂಜಾಬ್​ ಕಿಂಗ್ಸ್​ ವಿಫಲ: ಶಿಖರ್​ ಧವನ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ತಂದೆ

    ನವದೆಹಲಿ: ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಪಂಜಾಬ್​ ಕಿಂಗ್ಸ್​ ತಂಡ ಪ್ಲೇಆಫ್​​ ಹಂತಕ್ಕೇರಲು ವಿಫಲವಾದರೂ ಕೂಡ ಸ್ಫೋಟಕ ಆಟಗಾರ ಶಿಖರ್​ ಧವನ್​ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ಮಾಡಿದರು. 14 ಲೀಗ್​ ಪಂದ್ಯಗಳಲ್ಲಿ 38.3 ರನ್​ ಸರಾಸರಿಯಲ್ಲಿ ಧವನ್​ ಒಟ್ಟು 460 ರನ್​ ಪೇರಿಸಿದ್ದಾರೆ. ತಂಡವನ್ನು ಪ್ಲೇಆಫ್​ಗೆ ತೆಗೆದುಕೊಂಡು ವಿಶ್ವಾಸವನ್ನು ಧವನ್​ ಹೊಂದಿದ್ದರು. ಆದರೆ, ಅದು ವಿಫಲವಾಯಿತು. ಆದರೂ, ಧೃತಿಗೆಡದ ಧವನ್​ ಮುಂದಿನ ಬಾರಿ ಪುಟಿದೇಳುವ ವಿಶ್ವಾಸ ಹೊಂದಿದ್ದಾರೆ.

    ಇನ್ನು ಧವನ್​ ಅವರಿಗೆ ಕ್ರಿಕೆಟ್​ ಹೊರತಾಗಿ ಮತ್ತೊಂದು ರೂಪವಿದೆ. ಅದೇನಪ್ಪಾ ಅಂದರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಧವನ್​, ಸಾಕಷ್ಟು ಫನ್​ ಮಾಡುತ್ತಿರುತ್ತಾರೆ. ಅವರ ಹಾಸ್ಯ ಜ್ಞಾನ ಚೆನ್ನಾಗಿದೆ. ಡಾನ್ಸ್​ ಕೂಡ ಸಖತ್​ ಆಗಿ ಮಾಡುತ್ತಾರೆ. ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಧವನ್​ ಆಗಾಗ ಫನ್ನಿ ವಿಡಿಯೋಗಳನ್ನು ಬಿಡುತ್ತಿರುತ್ತಾರೆ.

    ಇದೀಗ ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿರುವ ವಿಡಿಯೋದಲ್ಲಿ ಧವನ್​ ತಮ್ಮ ತಂದೆಯ ಜತೆಗೆ ಫನ್​ ಮಾಡುತ್ತಿರುವ ದೃಶ್ಯವಿದೆ. ವಿಡಿಯೋದಲ್ಲಿ ಧವನ್​ಗೆ ಅವರ ತಂದೆ ಹಿಗ್ಗಾಮುಗ್ಗಾ ಬಾರಿಸುವ ದೃಶ್ಯವನ್ನು ಕಾಣಬಹುದು. ಕೆಳಗೆ ಬಿದ್ದರೂ ಬಿಡದೇ ಧವನ್​ಗೆ ಬಾರಿಸುತ್ತಿರುವುದು ಮತ್ತು ಕುಟುಂಬದ ಇತರೆ ಸದಸ್ಯರು ತಡೆಯಲು ಯತ್ನಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

    ನಾಕೌಟ್​​ ಪಂದ್ಯಕ್ಕೆ ಅಥವಾ ಪ್ಲೇಆಫ್​ ಹಂತಕ್ಕೆ ಅರ್ಹತೆ ಪಡೆಯದಿದ್ದಕ್ಕೆ ನಮ್ಮ ತಂದೆ ನನಗೆ ನಾಕೌಟ್​ ಮಾಡಿದರು ಎಂಬ ಅಡಿಬರವನ್ನು ನೀಡಿ ಇನ್​ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಧವನ್​ ಹರಿಬಿಟ್ಟಿದ್ದಾರೆ. ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಈಗಾಗಲೇ 7 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ನಿಮ್ಮ ಕಾಮಿಡಿ ಟೈಂಗೆ ಸಲಾಂ ಎಂದಿದ್ದಾರೆ.

    ಇನ್ನೂ ಐಪಿಎಲ್​ ಟೂರ್ನಿಯಲ್ಲಿ ಪಂಜಾಬ್​ ಕಿಂಗ್ಸ್​ 6ನೇ ಸ್ಥಾನದೊಂದಿಗೆ ತನ್ನ ಜರ್ನಿಯನ್ನು ಮುಗಿಸಿತು. ಪಂಜಾಬ್​ ತಂಡವನ್ನು ಕನ್ನಡಿಗ ಮಯಾಂಕ್​ ಅಗರ್ವಾಲ್​ ಮುನ್ನಡೆಸಿದರು. ಐಪಿಎಲ್​ನಲ್ಲಿ ಧವನ್​ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದಾದರೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗದಿರುವುದು ಧವನ್​ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಜೂನ್​ 9ರಿಂದ 5 ಪಂದ್ಯಗಳ ಟಿ20 ಸರಣಿಯನ್ನು ಭಾರತ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. (ಏಜೆನ್ಸೀಸ್​)

    ನನ್ನ ಪತ್ನಿ ಕೈಗೆ ಸಿಕ್ಕಿದ್ದರಲ್ಲಿ ಬಾರಿಸ್ತಾಳೆ.. ಕಾಪಾಡಿ ಸರ್​: ವಿಡಿಯೋ ಸಮೇತ ಕೋರ್ಟ್​ ಮೆಟ್ಟಿಲೇರಿದ ಪ್ರಾಂಶುಪಾಲ

    ಐರ್ಲೆಂಡ್ ಪ್ರವಾಸಕ್ಕೆ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಸಾರಥ್ಯ?

    ಬಾಗಲಕೋಟೆಯಲ್ಲಿ ತಲೆಗೂದಲಿಗೆ ಬಣ್ಣ ಹಾಕುವ ವಿಚಾರದಲ್ಲಿ ಜಗಳ: ಗ್ರಾಹಕನ ಎದೆಗೆ ಇರಿದು ಹತ್ಯೆಗೈದ ಕ್ಷೌರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts