More

    ವಿಜಯಪುರದ ಹುಡುಗಿಯ ಸಾಧನೆ: ಜಪಾನಿನ ವಿದ್ಯಾರ್ಥಿ ವೇತನಕ್ಕೆ ಭಾಜನಳಾದ ರಾಜ್ಯದ ಏಕೈಕ ವಿದ್ಯಾರ್ಥಿನಿ

    ವಿಜಯಪುರ: ಅಖಿಲ ಭಾರತದಾದ್ಯಂತ ನಡೆಯುವ ಲಿಖಿತ ಮತ್ತು ಮೌಖಿಕ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿನಿ ಜಪಾನಿನ ವಿದ್ಯಾರ್ಥಿ ವೇತನಕ್ಕೆ ಭಾಜನಳಾದ ಕರ್ನಾಟಕದ ಏಕೈಕ ವಿದ್ಯಾರ್ಥಿನಿ ಎಂಬ ಕೀರ್ತಿ ಪತಾಕೆ ಹಾರಿಸಿದ್ದಾಳೆ.

    ಜಪಾನ ದೇಶದ ಪ್ರಧಾನಮಂತ್ರಿಗಳ ಪ್ರತಿಷ್ಠಿತ ಏಷಿಯಾ ಕಾಕೇಹಾಸಿ ಶಿಷ್ಯವೇತನಕ್ಕೆ ವಿಜಯಪುರ ಜಿಲ್ಲೆಯ ಗೌರಿ ಸಂಕೇತ ಬಗಲಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿ ಗೌರಿ ಸದ್ಯಕ್ಕೆ ಕೊಲ್ಲಾಪುರದ ಸಂಜಯ ಘೋಡಾವತ್ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈ ಶಿಷ್ಯವೇತನಕ್ಕಾಗಿ ಭಾರತದಾದ್ಯಂತ ಲಿಖಿತ ಹಾಗೂ ಮೌಖಿಕವಾಗಿ ಪರೀಕ್ಷೆ ನಡೆಸಿದ್ದು , ಆಯ್ಕೆಯಾಗಿರುವ 21 ವಿದ್ಯಾರ್ಥಿಗಳ ಪೈಕಿ ಗೌರಿ ಬಗಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ.

    ಈಕೆಯ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜಪಾನ ಪ್ರಧಾನಿಯಿಂದ ಸ್ಕಾಲರ್ ಶಿಪ್ ಪಡೆಯಲಿದ್ದಾಳೆ ವಿಜಯಪುರದ ಈ ಕುವರಿ. ಜಪಾನ ವಿದ್ಯಾರ್ಥಿ ವೇತನಕ್ಕೆ ಭಾಜನರಾದ ಗೌರಿ ಸಂಕೇತ ಬಗಲಿ, ಜಪಾನಿನ ಪ್ರಧಾನಿಯವರಿಂದ ಘೋಷಿತ, ಏಷ್ಯಾ ದೇಶದ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಕೊಡಮಾಡುವ ಒಂದು ವರ್ಷದ ಶಿಷ್ಯವೇತನ ಸಹಿತ ಶಿಕ್ಷಣವನ್ನು ಪಡೆಯಲು ಕುಮಾರಿ ಗೌರಿ ಸಂಕೇತ ಬಗಲಿ ಅರ್ಹರಾಗಿದ್ದಾರೆ.

    ಈ ಮೂಲಕ ವಿಜಯಪುರದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಕುಮಾರಿ ಗೌರಿ, ಸಂಕೇತ್ ಮತ್ತು ಜಯಲಕ್ಷ್ಮಿ ಬಗಲಿ ಅವರ ಸುಪುತ್ರಿಯಾಗಿದ್ದು, ಇಂಡಿ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಹಾಗೂ ಡಾ. ಸತೀಶ ಜಿಗಜಿನ್ನಿ ಯವರ ಮೊಮ್ಮಗಳಾಗಿದ್ದಾರೆ.

    ರಾತ್ರಿ ಸಮಯದಲ್ಲೇಕೆ ವೈದ್ಯರು ಶವಪರೀಕ್ಷೆ ಮಾಡುವುದಿಲ್ಲ? ಇಲ್ಲಿದೆ ಅಚ್ಚರಿಯ ಉತ್ತರ..!

    13 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ದುರಂತ: ಬೆಂಕಿಯ ಕೆನ್ನಾಲಿಗೆಗೆ 46 ಮಂದಿ ಬಲಿ

    ‘ಕೋಟಿಗೊಬ್ಬ’ನ ಕಾಣದೇ ರಾಜ್ಯದೆಲ್ಲೆಡೆ ರೊಚ್ಚಿಗೆದ್ದ ಕಿಚ್ಚನ ಅಭಿಮಾನಿಗಳು- ಆತ್ಮಹತ್ಯೆ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts