More

    ಮಗನ ಆರೋಪಕ್ಕೆ ತಂದೆಯ ತಿರುಗೇಟು! ವಿಜಯ್​ ಅರ್ಜಿಗೆ ಪ್ರತ್ಯುತ್ತರವಾಗಿ ಅಫಿಡೆವಿಟ್​ ಸಲ್ಲಿಸಿದ ಚಂದ್ರಶೇಖರ್​

    ಚೆನ್ನೈ: ತಮ್ಮ ಹೆಸರಿನ ವಿಜಯ್​ ಮಕ್ಕಳ್​ ಇಯಕ್ಕಮ್ (ವಿಎಂಐ) ಸಂಘಟನೆಯು ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅನೇಕ ಸಭೆಗಳನ್ನು ನಡೆಸುತ್ತಿದೆ, ಅದನ್ನು ನಿಷೇಧಿಸಬೇಕೆಂದು ಕೋರಿ ತಂದೆ-ತಾಯಿ ವಿರುದ್ಧವೇ ಕಾಲಿವುಡ್​ ಸೂಪರ್​ ಸ್ಟಾರ್​ ವಿಜಯ್​ ಕಳೆದ ವಾರ ಕಾನೂನಿನ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್​ಗೆ ಅಫಿಡೆವಿಟ್​ ಸಲ್ಲಿರುವ ಮೂಲಕ ವಿಜಯ್​ ತಂದೆಯು ಕೂಡ ಮಗನಿಗೆ ತಿರುಗೇಟು ನೀಡಿದ್ದಾರೆ.

    ಚೆನ್ನೈ ನಗರ ನಾಗರಿಕ ನ್ಯಾಯಾಲಯಕ್ಕೆ ವಿಜಯ್​ ತಂದೆ ಎಸ್​.ಎ. ಚಂದ್ರಶೇಖರ್​ ಅಫಿಡೆವಿಟ್​ ಸಲ್ಲಿಸಿದ್ದು, ಈ ಬಗ್ಗೆ ಮಾತನಾಡಿದ ಅವರು ವಿಜಯ್​ ಮಕ್ಕಳ್​ ಇಯಕ್ಕಮ್​ನ ಎಲ್ಲ ಸದಸ್ಯರಿಗೆ ಪೂರ್ವ ಸೂಚನೆ ನೀಡಿದ ನಂತರ 28-02-2021 ರಂದೇ ಚೆನ್ನೈನಲ್ಲಿ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ತಕ್ಷಣವೇ ಜಾರಿಗೆ ಬರುವಂತೆ ವಿಜಯ್​ ಮಕ್ಕಳ್​ ಇಯಕ್ಕಮ್​ ಪಕ್ಷವನ್ನು ರದ್ದು ಮಾಡುವುದಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಫಿಡೆವಿಟ್​​ನಲ್ಲಿ ತಿಳಿಸಿರುವುದಾಗಿ ವಿಜಯ್​ ತಂದೆ ಹೇಳಿದ್ದಾರೆ.

    ತನ್ನ ತಂದೆ ಎಸ್​.ಎ. ಚಂದ್ರಶೇಖರ್​ ಮತ್ತು ತಾಯಿ ಶೋಭಾ ಸೇರಿದಂತೆ ವಿಎಂಐ ಸಂಸ್ಥೆಯ ಮಾಜಿ ಮತ್ತು ಹಾಲಿ ಕಾರ್ಯನಿರ್ವಾಹಕರ ತಂಡವನ್ನು ನಿಷೇಧಿಸುವಂತೆ ವಿಜಯ್​ ಅವರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಚೆನ್ನೈ ಹೈಕೋರ್ಟ್​ನಲ್ಲಿ ಕೇಸು ದಾಖಲಾಗಿದ್ದು, ಇದೇ ತಿಂಗಳ 27ಕ್ಕೆ ಪ್ರಕರಣವನ್ನು ಮುಂದೂಡಿತ್ತು. ತನ್ನ ಹೆಸರನ್ನು ಬಳಸಿಕೊಂಡು ವಿಎಂಐ ತಂಡವು ಸಭೆಗಳನ್ನು ನಡೆಸುವುದನ್ನು ನಿಷೇಧಿಸುವಂತೆ ಕೋರಿ ವಿಜಯ್​ ಅರ್ಜಿ ಸಲ್ಲಿಸಿದ್ದಾರೆ.

    ಎಸ್‌.ಎ. ಚಂದ್ರಶೇಖರ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದು, ಪ್ರಕರಣದಲ್ಲಿ ಹತ್ತು ಮಂದಿ ಪ್ರತಿವಾದಿಗಳು ವಿಜಯ್ ಮಕ್ಕಳ ಇಯಕ್ಕಮ್​ನ ಪದಾಧಿಕಾರಿಗಳಾಗಿದ್ದು, ತಮ್ಮ ರಾಜೀನಾಮೆ ಪತ್ರಗಳನ್ನು ನೀಡಿದ್ದಾರೆ. ವಿಜಯ್ ಮಕ್ಕಳ್​ ಇಯಕ್ಕಮ್​ ಅನ್ನು ರದ್ದುಪಡಿಸಲಾಗಿದೆ. ಅದು ಈಗ ಅಸ್ತಿತ್ವದಲ್ಲಿಲ್ಲ. ನಾವು ಇನ್ನು ಮುಂದೆ ವಿಜಯ ಮಕ್ಕಲ್ ಇಯಕ್ಕಮ್​ನ ಸದಸ್ಯರಲ್ಲ, ಆದರೆ ನಾವೆಲ್ಲರೂ ಚಲನಚಿತ್ರ ನಟ ವಿಜಯ್ ಅವರ ಸಾಮಾನ್ಯ ಅಭಿಮಾನಿಗಳಾಗಿ ಮುಂದುವರಿಯುತ್ತೇವೆ ಎಂದು ಅವರು ಹೇಳಿದರು.

    ಅಂದಹಾಗೆ ವಿಜಯ್​ ಮಕ್ಕಳ್​ ಇಯಕ್ಕಮ್​ ಪಾರ್ಟಿಯನ್ನು ವಿಜಯ್​ ತಂದೆ ಚಂದ್ರಶೇಖರ್​ 2020 ಜೂನ್​ ತಿಂಗಳಲ್ಲಿ ಸ್ಥಾಪಿಸಿದರು. ಈ ಪಕ್ಷವನ್ನು ಭಾರತದ ಚುನಾವಣಾ ಆಯೋಗದಲ್ಲೂ ನೋಂದಣಿ ಮಾಡಿಸಲಾಗಿದೆ. ಆ ಸಂದರ್ಭದಲ್ಲಿ ಪಾರ್ಟಿ ಜತೆಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದು ವಿಜಯ್​ ಸ್ಪಷ್ಟನೆ ನೀಡಿದ್ದರು. ಅಲ್ಲದೆ, ಅಭಿಮಾನಿಗಳು ಪಕ್ಷಕ್ಕೆ ಸಂಬಂಧಿಸಬೇಕಾಗಿಲ್ಲ ಅಥವಾ ಕೆಲಸ ಮಾಡಬೇಕಿಲ್ಲ ಎಂದು ನಟ ಹೇಳಿಕೆ ನೀಡಿದ್ದರು ಮತ್ತು ರಾಜಕೀಯ ಅಜೆಂಡಾಗೆ ಯಾರೂ ತಮ್ಮ ಹೆಸರು ಅಥವಾ ಚಿತ್ರಗಳನ್ನು ಬಳಸಬಾರದು ಎಂದು ಕೇಳಿಕೊಂಡಿದ್ದರು. ಒಂದು ವೇಳೆ ಇದರಲ್ಲಿ ಭಾಗಿಯಾದವರು ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದರು. (ಏಜೆನ್ಸೀಸ್​)

    ತಂದೆ-ತಾಯಿ ವಿರುದ್ಧವೇ ಹೈಕೋರ್ಟ್​ ಮೆಟ್ಟಿಲೇರಿದ ನಟ ವಿಜಯ್​: ಬ್ಯಾನ್​ ಮಾಡುವಂತೆ ಕೋರ್ಟ್​ಗೆ ಮನವಿ!

    ದುಲ್ಖರ್ ಚಿತ್ರದಲ್ಲಿ ರಶ್ಮಿಕಾ ಅತಿಥಿ; ಮಲಯಾಳಂ ಹೀರೋ, ತೆಲುಗು ನಿರ್ದೇಶಕ, ಬಾಲಿವುಡ್ ನಟಿ

    ನಿಲ್ಲದ ಪ್ರಸವಪೂರ್ಣ ಮರಣ: ಮೂರು ವರ್ಷದಲ್ಲಿ ಹೆರಿಗೆ ಮುಂಚೆ 30 ಗರ್ಭಿಣಿಯರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts