More

    ನಿಲ್ಲದ ಪ್ರಸವಪೂರ್ಣ ಮರಣ: ಮೂರು ವರ್ಷದಲ್ಲಿ ಹೆರಿಗೆ ಮುಂಚೆ 30 ಗರ್ಭಿಣಿಯರ ಸಾವು

    | ಮರಿದೇವ ಹೂಗಾರ ಹುಬ್ಬಳ್ಳಿ

    ರಕ್ತಹೀನತೆ ಸಮಸ್ಯೆ ಗರ್ಭಿಣಿಯರಿಗೆ ಬೆಂಬಿಡದೆ ಕಾಡುತ್ತಿದೆ. ಪರಿಣಾಮ ರಾಜ್ಯಾದ್ಯಂತ 3 ವರ್ಷದಲ್ಲಿ 30 ಗರ್ಭಿಣಿಯರು ಪ್ರಸವಪೂರ್ವ ಮರಣ ಹೊಂದಿದ್ದಾರೆ. ತೀವ್ರ ತರಹದ ರಕ್ತಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರು, ಬಾಣಂತಿಯರಿಗೆ ರಾಜ್ಯದ ಪ್ರತಿಯೊಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಐರಾನ್ ಫಾಲಿಕ್ ಆಸಿಡ್ (ಐಎಫ್​ಎ) ಮಾತ್ರೆಗಳನ್ನು ನೀಡಲಾಗುತ್ತಿದೆ. ಆದರೂ ತಾಯಂದಿರು ಪ್ರಸವಪೂರ್ವದಲ್ಲಿಯೇ ಮೃತಪಟ್ಟಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆತಂಕವನ್ನು ಹೆಚ್ಚಿಸಿದೆ.

    2018-19ನೇ ಸಾಲಿನಲ್ಲಿ 8, 2019-20ನೇ ಸಾಲಿನಲ್ಲಿ 10, 2020-21ನೇ ಸಾಲಿನಲ್ಲಿ 12 ತಾಯಂದಿರು ಜೀವ ತೆತ್ತಿದ್ದಾರೆ. ಮೂರು ವರ್ಷದಲ್ಲಿ ಮೈಸೂರು, ಬಾಗಲಕೋಟೆ, ದಾವಣಗೆರೆ ಜಿಲ್ಲೆಯಲ್ಲಿ ತಲಾ 4, ಬೆಳಗಾವಿ 3, ಧಾರವಾಡ, ಬಳ್ಳಾರಿ, ಹಾಸನ, ಕಲಬುರಗಿ, ಕೊಪ್ಪಳ ಜಿಲ್ಲೆಯಲ್ಲಿ ತಲಾ ಇಬ್ಬರು, ರಾಯಚೂರು, ತುಮಕೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ, ಯಾದಗಿರಿ ಜಿಲ್ಲೆಯಲ್ಲಿ ತಲಾ ಒಬ್ಬ ಗರ್ಭಿಣಿಯರು ಪ್ರಸವಪೂರ್ವದಲ್ಲಿ ಮೃತಪಟ್ಟಿದ್ದಾರೆ.

    ಉತ್ತರ ಕರ್ನಾಟಕದ 8 ಜಿಲ್ಲೆಯಲ್ಲಿ ಈ ಸಾವಿನ ಪ್ರಮಾಣ ಹೆಚ್ಚಿದೆ. ಇದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೂ ಒಪ್ಪಿಕೊಂಡಿದೆ. ಇದಕ್ಕೆ ಕಾರಣಗಳನ್ನು ಪತ್ತೆ ಹಚ್ಚಿದೆ. ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವ, ಅಧಿಕ ರಕ್ತದೊತ್ತಡ, ಹೆರಿಗೆ ಸಮಯದಲ್ಲಿ ಜನನಾಂಗ ಸೋಂಕು, ರಕ್ತ ಹೀನತೆ, ಅಸುರಕ್ಷಿತ ಗರ್ಭಪಾತ, ಗರ್ಭಾವಸ್ಥೆ ವೇಳೆ ಸಂಭವಿಸುವ ಹೃದಯ ಸಂಬಂಧಿ ಕಾಯಿಲೆ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಾರಣ ಎಂದು ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

    ಐಎಫ್​ಎ ಮಾತ್ರೆ ವಿತರಣೆ: 2020-21ನೇ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ 8,04,192 ಬಾಣಂತಿಯರಿಗೆ ಐರಾನ್ ಫಾಲಿಕ್ ಆಸಿಡ್ (ಐಎಫ್​ಎ) ಮಾತ್ರೆಗಳನ್ನು ವಿತರಿಸ ಲಾಗಿದೆ. ಈ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಿದೆ. 2020-21ನೇ ಸಾಲಿನಲ್ಲಿ 24,174 ಗರ್ಭಿಣಿಯರು ಮತ್ತು ಬಾಣಂತಿಯರು, ರಕ್ತ ಭಂಡಾರದಿಂದ ರಕ್ತವನ್ನು ದಾನವಾಗಿ ಪಡೆದಿದ್ದಾರೆ. ಈ ಸಂಖ್ಯೆ ಪ್ರತಿ ವರ್ಷವೂ ಇಳಿಮುಖವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯೂ ಹೌದು ಎನ್ನುತ್ತಿವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ-ಅಂಶಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts