More

    ಟೋಕಿಯೊ ಒಲಿಂಪಿಕ್ಸ್​: ಕಚ್ಚಿದರೂ ಜಗ್ಗದೇ ಎದುರಾಳಿಯ ಮಣ್ಣು ಮುಕ್ಕಿಸಿದ ರವಿಕುಮಾರ್ ದಾಹಿಯ​ ಭಾರತದ ಹೆಮ್ಮೆ..!

    ಟೋಕಿಯೋ : ಒಲಿಂಪಿಕ್ಸ್​ನಲ್ಲಿ ಭಾರತದ ಕುಸ್ತಿಪಟು ರವಿಕುಮಾರ್ ದಾಹಿಯ ಅವರು ಸೆಮಿಫೈನಲ್ಸ್​ ಗೆದ್ದು, ಫೈನಲ್ಸ್​ ಹಂತ ತಲುಪಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ರಜತ ಪದಕವಂತೂ ಖಚಿತವಾಗಿದೆ. ಎದುರಾಳಿಯ ಕುತಂತ್ರಕ್ಕೂ ಜಗ್ಗದೇ ಕ್ರೀಡಾಸ್ಫೂರ್ತಿ ಮೆರೆದ ದಾಹಿಯ ಎದುರಾಳಿಯನ್ನು ಮಣ್ಣು ಮುಕ್ಕಿಸಿ ಭಾರತೀಯ ಹೆಮ್ಮೆಯ ಮಗನಾದರು.

    54 ಕೆಜಿ ಕುಸ್ತಿ ವಿಭಾಗದಲ್ಲಿ ದಾಹಿಯ ಕಜಕಸ್ತಾನಿನ ನುರಿಸ್ಲಮ್​ ಸನಯೆವ್​ ವಿರುದ್ಧ ಸೆಮಿಫೈನಲ್​ನಲ್ಲಿ ಅಮೋಘ ಜಯ ಸಾಧಿಸಿ ಫೈನಲ್​ ಪ್ರವೇಶಿಸಿದ್ದಾರೆ. ಅದ್ಭುತ ಗೆಲುವಿನ ಮೂಲಕ ಒಲಿಂಪಿಕ್ಸ್​ನಲ್ಲಿ ಫೈನಲ್​ ಪ್ರವೇಶಿಸಿದ ಎರಡನೇ ಕುಸ್ತಿಪಟು ಎಂಬ ಕೀರ್ತಿಗೆ ಸುಶೀಲ್​ ಕುಮಾರ್​ ಪಾತ್ರರಾಗಿದ್ದಾರೆ. 2012ರ ಲಂಡನ್​ ಒಲಿಂಪಿಕ್ಸ್​ನಲ್ಲಿ ಸುಶೀಲ್​ ಕುಮಾರ್​ ಅವರು ಒಲಿಂಪಿಕ್ಸ್​ ಫೈನಲ್​ ಸುತ್ತಿಗೇರಿದ್ದರು.

    ದಾಹಿಯ ಅವರು ಫೈನಲ್​ ಎಂಟ್ರಿ ಸುಗಮವಾಗಿರಲಿಲ್ಲ. ಕುಸ್ತಿಯಲ್ಲಿ ಎದುರಾಳಿಯ ಬಲ ಮಾತ್ರವಲ್ಲದೆ, ಆತನ ಕ್ರೂರ ಮತ್ತು ನೋವಿನ ಕಡಿತವನ್ನು ದಾಹಿಯ ಸಹಿಸಿಕೊಳ್ಳಬೇಕಾಯಿತು. ಎದುರಾಳಿ ಸ್ಪರ್ಧಿ ಕಚ್ಚಿದ ಗುರುತು ದಾಹಿಯ ತೋಳಿನ ಮೇಲೂ ಮೂಡಿದ್ದು, ಅಷ್ಟರ ಮಟ್ಟಿಗೆ ಎದುರಾಳಿ ಕಚ್ಚಿದ್ದಾನೆ. ಆದರೂ ತಮ್ಮ ಗುರಿ ಮುಟ್ಟಿದ ದಾಹಿಯ ಕ್ರೀಡಾಸ್ಫೂರ್ತಿಯೊಂದಿಗೆ ಕೋಟ್ಯಂತರ ಮಂದಿಯ ಹೃದಯ ಗೆಲ್ಲುವ ಜತೆಗೆ ಭಾರತದ ಹೆಮ್ಮೆಯಾದರು.

    ಸೆಮಿಫೈನಲ್​ನ ಕೊನೆಯ ಕೆಲವು ಸೆಕೆಂಡ್​ಗಳಲ್ಲಿ ದಾಹಿಯ ಎದುರಾಳಿ ಕಜಖಸ್ತಾನ್​ನ ಕುಸ್ತಿಪಟು ಸನಯೇವ್​ನನ್ನು ನೆಲಕ್ಕುರುಳಿಸಲು ಯತ್ನಿಸುವಾಗ ಸನಯೇವ್​, ದಾಹಿಯ ಅವರ ತೋಳನ್ನು ಬಲವಾಗಿ ಕಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಯನೇವ್​ ವರ್ತನೆ ಭಾರೀ ಆಕ್ರೋಶದ ಜತೆಗೆ ದಾಹಿಯ ಅವರ ಗಟ್ಟಿತನವನ್ನು ಕೊಂಡಾಡುತ್ತಿದ್ದಾರೆ.

    23 ವರ್ಷದ ದಹಿಯಾ ಉತ್ತಮ ಆಟಗಾರಿಕೆ ಪ್ರದರ್ಶಿಸಿ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ನಾಲ್ಕನೇ ಪದಕವನ್ನು ಖಾತ್ರಿಗೊಳಿಸಿದ್ದಾರೆ. ರವಿ ಕುಮಾರ್​ ಅವರು ಅಂತಿಮ ಘಟ್ಟದ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಸೆಣೆಸಲಿದ್ದಾರೆ. ಇಂದು ನಡೆಯಲಿರುವ ಫೈನಲ್​ ಪಂದ್ಯದಲ್ಲಿ ರಷ್ಯಾದ ಜೌರ್​​ ಉಗ್ಯೂವ್​ ಎದುರು ದಾಹಿಯ ಸೆಣಸಾಡಲಿದ್ದಾರೆ. ಫೈನಲ್​ ಪಂದ್ಯದಲ್ಲಿ ಗೆದ್ದರೆ ಚಿನ್ನ ಖಚಿತವಾಗಲಿದೆ. ಒಂದು ವೇಳೆ ಸೋತರೂ ಬೆಳ್ಳಿ ಪದಕವಂತೂ ದೊರೆಯಲಿದೆ. (ಏಜೆನ್ಸೀಸ್​)

    41 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ: ಹಾಕಿಯಲ್ಲಿ ಕಂಚು ಗೆದ್ದ ಪುರುಷರ ತಂಡ

    ‘ಐತಿಹಾಸಿಕ! ಆತ್ಮವಿಶ್ವಾಸದಿಂದ ಕೂಡಿದ ಭಾರತವಿದು!’ – ಹಾಕಿ ವಿಜಯಕ್ಕೆ ಪ್ರಧಾನಿ ಮೋದಿ ಹರ್ಷೋದ್ಗಾರ

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಇಂದು ಭರ್ಜರಿ ಪದಕ ಬೇಟೆಯ ನಿರೀಕ್ಷೆಯಲ್ಲಿ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts