More

    41 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ: ಹಾಕಿಯಲ್ಲಿ ಕಂಚು ಗೆದ್ದ ಪುರುಷರ ತಂಡ

    ಟೋಕಿಯೋ (ಜಪಾನ್‌) : ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನ ಹಾಕಿಯಲ್ಲಿ ಪುರುಷರ ತಂಡವು ಕಂಚಿನ ಪದಕವನ್ನು ಗೆದ್ದುಕೊಂಡು 41 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ ಮಾಡಿದೆ.

    ಜರ್ಮನಿ ವಿರುದ್ಧ 5-4 ಅಂತರದಲ್ಲಿ ಗೆದ್ದ ಭಾರತ ತಂಡ, ಪದಕ ಗೆದ್ದುಕೊಂಡಿದೆ. 2008, 2012ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಜರ್ಮನಿ, 2016ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿತ್ತು. ತಂಡ ಸತತ 4ನೇ ಬಾರಿಗೆ ಪದಕ ಗೆಲ್ಲುವ ಗುರಿ ಹೊಂದಿದ್ದು ಇದೀಗ ಕನಸು ಭಗ್ನವಾಗಿದ್ದು, ಭಾರತದ ತಂಡ ಗೆಲುವು ಸಾಧಿಸಿದೆ.

    ಆರಂಭದಲ್ಲಿ 1-3 ಹಿನ್ನಡೆ ಅನುಭವಿಸಿದ್ದ ಮನ್‌ಪ್ರೀತ್‌ ಸಿಂಗ್‌ ನಾಯಕತ್ವದ ಭಾರತ ಪುರುಷರ ಹಾಕಿ ತಂಡ, ನಂತರ ಭರ್ಜರಿಯಾಗಿ ಆಟವಾಡಿ 5-4 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ. ಭಾರತ ಹಾಕಿ ತಂಡವು 1980ರ ಬಳಿಕ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು. ಜರ್ಮನಿಗೆ ಬರೋಬ್ಬರಿ 13 ಪೆನಾಲ್ಟಿ ಕಾರ್ನರ್‌ ಗಳಿಸುವ ಅವಕಾಶವಿದ್ದರೂ ಕೇವಲ ಒಂದು ಗೋಲು ಗಳಿಸಲಷ್ಟೇ ಜರ್ಮನಿ ಶಕ್ತವಾಯಿತು.

    Breaking: ಹಾಕಿಯಲ್ಲಿ ದಾಖಲೆ ಬರೆದ ಭಾರತದ ವನಿತೆಯರು: 41 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts