More

    ಬೆಂಗಳೂರಿನಲ್ಲಿ ಪಾದಚಾರಿ ಬಲಿ ಪಡೆದ ಟಿಪ್ಪರ್ ಲಾರಿ ಚಾಲಕನಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಹೀಗಿದೆ…

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಪಾದಚಾರಿ ಬಲಿ ಪಡೆದ ಟಿಪ್ಪರ್ ಲಾರಿ ಚಾಲಕನಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿ 4ನೇ ಎಂಎಂಟಿಸಿ ನ್ಯಾಯಾಲಯ ತೀರ್ಪು ನೀಡಿದೆ.

    2003ರ ಮಾರ್ಚ್ 24ರಂದು ಸೀತಾ ಸರ್ಕಲ್‌ನಲ್ಲಿ ರಂಗಯ್ಯ ನಾಯ್ದು ಎಂಬಾತನ ರಸ್ತೆಬದಿ ಹೋಗುತ್ತಿದ್ದರು. ಅದೇ ವೇಳೆ ಟಿಪ್ಪರ್ ಲಾರಿ ಚಾಲಕ ನಾರಾಯಣಸ್ವಾಮಿ, ವೇಗವಾಗಿ ಬಂದು ಪಾದಚಾರಿಗೆ ಗುದ್ದಿದ ಪರಿಣಾಮ ರಂಗಯ್ಯ ಅಸುನೀಗಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬನಶಂಕರಿ ಸಂಚಾರ ಪೊಲೀಸರು, ಚಾಲಕನನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 2005ರಲ್ಲಿ 6 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ 1ನೇ ತ್ವರಿತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದ. ಅಲ್ಲಿಯೂ ಕೆಳಹಂತದ ಕೋರ್ಟ್ ಆದೇಶ ಎತ್ತಿಹಿಡಿದಿತ್ತು.

    ಆದಾಗ್ಯೂ ಅಪರಾಧಿ, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಕೆಳ ಹಂತದ ನ್ಯಾಯಾಲಯಗಳ ಆದೇಶ ಎತ್ತಿಹಿಡಿದ ಹೈಕೋರ್ಟ್, ಅಪರಾಧಿಯನ್ನು ಬಂಧಿಸಿ ಜೈಲಿಗೆ ಕಳುಹಿಸುವಂತೆ ಆದೇಶಿಸಿದೆ.

    ರಷ್ಯಾ ಹಿಡಿತ, ಕದನವಿರಾಮ ಸನ್ನಿಹಿತ: ಹತಾಶ ಯೂಕ್ರೇನ್​ನಿಂದ ಸಂಧಾನ ಸೂತ್ರ  

    16 ಸಾವಿರ ಭಾರತೀಯರ ಏರ್​ಲಿಫ್ಟ್​ಗೆ ಕ್ಷಣಗಣನೆ

    ವೈದ್ಯ ಪದವಿ ಕನಸು ಹೊತ್ತು ಯೂಕ್ರೇನ್​ನತ್ತ ಪಯಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts