More

    ರಷ್ಯಾ ಹಿಡಿತ, ಕದನವಿರಾಮ ಸನ್ನಿಹಿತ: ಹತಾಶ ಯೂಕ್ರೇನ್​ನಿಂದ ಸಂಧಾನ ಸೂತ್ರ  

    ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ರಷ್ಯಾ- ಯೂಕ್ರೇನ್ ಸಮರ ನಿರ್ಣಾಯಕ ಘಟ್ಟ ತಲುಪಿದೆ. ಅಮೆರಿಕ ಹಾಗೂ ನ್ಯಾಟೋ ಪಡೆಗಳ ಬೆಂಬಲದ ನಿರೀಕ್ಷೆ ಹುಸಿಯಾಗಿದ್ದರಿಂದ ಯುದ್ಧ ಆರಂಭಗೊಂಡ ಒಂದೇ ದಿನದಲ್ಲಿ ಕಂಗಾಲಾಗಿರುವ ಯೂಕ್ರೇನ್ ರಷ್ಯಾ ಎದುರು ಶಾಂತಿ, ಸಂಧಾನದ ಪ್ರಸ್ತಾಪ ಮುಂದಿಟ್ಟಿದೆ. ಅತ್ತ ಯೂಕ್ರೇನ್ ರಾಜಧಾನಿ ಕಿಯೆವ್ ಸುತ್ತುವರಿದು ವಿಜಯ ಪತಾಕೆ ಹಾರಿಸಲು ರಷ್ಯಾ ಸೇನೆ ಸಜ್ಜಾಗಿರುವಂತೆಯೇ, ಶಸ್ತ್ರ ತೊರೆದು ಶರಣಾದರಷ್ಟೇ ಮಾತುಕತೆ ಎಂಬ ಖಡಕ್ ಸಂದೇಶವನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ರವಾನಿಸಿದ್ದಾರೆ. ಈಗಾಗಲೇ ಸಾವಿರಾರು ನಾಗರಿಕರು, ಯೋಧರು ಸಾವನ್ನಪ್ಪಿದ್ದು, ಅಪಾರ ಆಸ್ತಿಪಾಸ್ತಿ ಹಾನಿ ಗೀಡಾಗಿದೆ. ಜೀವರಕ್ಷಣೆಗಾಗಿ ಮನೆ ತೊರೆದು ಓಡುತ್ತಿರುವ ಜನತೆ ಆಹಾರಕ್ಕೆ ಪರದಾಡು ವಂತಾಗಿದೆ.

    ಶಾಂತಿ ಸಂಧಾನ ಸೂತ್ರ: ಯುದ್ಧದಿಂದ ಕಂಗಾಲಾಗಿರುವ ಯೂಕ್ರೇನ್ ರಷ್ಯಾ ಎದುರು ಸಂಧಾನ ಸೂತ್ರ ಪ್ರಸ್ತಾಪಿಸಿದೆ. ಪುತಿನ್ ಜತೆ ಮಾತುಕತೆಗೆ ಸಿದ್ಧವಿದ್ದು, ದಾಳಿ ನಿಲ್ಲಿಸಿ ಶಾಂತಿ ಮಾತುಕತೆಗೆ ಬರುವಂತೆ ಯೂಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲನ್ಸ್​ಸ್ಕಿ ಪ್ರಸ್ತಾಪ ಇಟ್ಟಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರಷ್ಯಾ ವಿದೇಶಾಂಗ ಸಚಿವ ಸೆರ್ಗ್ಯೆಲಾವ್ ರೊವ್ ಯೂಕ್ರೇನ್ ಸೇನೆ ಶಸ್ತ್ರ ಕೆಳಗಿಳಿಸಿದರೆ ಮಾತ್ರ ಮಾತುಕತೆಗೆ ಸಿದ್ಧ ಎಂದಿದ್ದಾರೆ. ಮತ್ತೊಂದೆಡೆ ಮಾತುಕತೆಗೆ ನಿಯೋಗ ಕಳುಹಿಸಲು ಸಿದ್ಧ ಎಂದೂ ರಷ್ಯಾ ಹೇಳಿಕೊಂಡಿದೆ.

    ಏನೇನಾಯ್ತು?

    1.  ಶುಕ್ರವಾರ ಯೂಕ್ರೇನ್ ರಾಜಧಾನಿ ಕಿಯೆವ್ ಸುತ್ತುವರಿದ ರಷ್ಯಾ ಪಡೆಗಳಿಂದ ವಿಮಾನ ನಿಲ್ದಾಣ ಸೇರಿ ಪ್ರಮುಖ ಪ್ರದೇಶ ವಶ
    2.  ಕಿಯೆವ್ ಸುತ್ತಲಿನ ಎಲ್ಲ ನಗರಗಳು ರಷ್ಯಾ ಸೇನೆ ಕೈವಶ
    3.   ಯೂಕ್ರೇನ್​ನಲ್ಲಿ 57 ನಾಗರಿ ಕರು ಸೇರಿ 194 ಜನರ ಸಾವು, ಮೂಲಗಳ ಪ್ರಕಾರ ಸಾವಿನ ಸಂಖ್ಯೆ ಸಾವಿರ ದಾಟಿದೆ
    4.   ಬ್ರಿಟನ್ ರಕ್ಷಣಾ ಮೂಲಗಳ ಪ್ರಕಾರ 800 ಮಂದಿ ರಷ್ಯಾ ಸೈನಿಕರು ಸಾವು
    5.   ಕಪು್ಪ ಸಮುದ್ರದಲ್ಲೂ ರಷ್ಯಾ ನೌಕಾಪಡೆ ದಾಳಿ, ಶರಣಾಗದ 13 ಸೈನಿಕರ ಹತ್ಯೆ
    6.   ಯೂಕ್ರೇನ್​ನ ಒಟ್ಟು 74 ಸೇನಾ ನೆಲೆ ನಾಶ, ಚನೋ ಬಿಲ್ ಅಣುಸ್ಥಾವರ ಸೇರಿ ಪ್ರಮುಖ ಪ್ರದೇಶಗಳು ವಶ
    7.  30ಕ್ಕೂ ಹೆಚ್ಚು ರಷ್ಯನ್ ಟ್ಯಾಂಕ್​ಗಳು, 12 ವಿಮಾನ, ಹೆಲಿಕಾಪ್ಟರ್ ಧ್ವಂಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts