ನೀತಾ ಅಂಬಾನಿ ಯಾವ ಉಡುಗೆ ತೊಡಬೇಕೆಂದು ನಿರ್ಧರಿಸುವುದು ಇವರೇ ನೋಡಿ…

blank

ಮುಂಬೈ: ರಿಲಯನ್ಸ್​ ಫೌಂಡೇಶನ್​ನ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರು ದೇಶದ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಉದ್ಯಮ ಮತ್ತು ಸಾಮಾಜಿಕ ಕಳಕಳಿಯುಳ್ಳ ಮಹತ್ತರ ಕೆಲಸಗಳಲ್ಲಿ ತೊಡಗಿಕೊಂಡಿರುವುದಲ್ಲದೇ ಫ್ಯಾಶನ್​ ಮೇಲೆಯೂ ಅವರಿಗೆ ಒಲವಿದೆ. ಯಾವಾಗಲೂ ತಮ್ಮ ಉಡುಗೆಗಳಲ್ಲಿ ವಿಭಿನ್ನತೆಯನ್ನು ಪ್ರಯತ್ನಿಸುವ ಮೂಲಕ ಫ್ಯಾಶನ್​ ಜಗತ್ತಿನ ಗಮನವನ್ನು ಸೆಳೆಯುತ್ತಿರುತ್ತಾರೆ.

ನೀತಾ ಅವರ ಫ್ಯಾಶನ್​ ಹಿಂದೆ ದೇಶಿ ಪ್ರತಿಭೆ ಹಾಗೂ ಪ್ರತಿಭಾನ್ವಿತ ವಸ್ತ್ರ ವಿನ್ಯಾಸಗಾರ್ತಿಯೊಬ್ಬರ ಶ್ರಮ ಇದೆ ಎಂಬುದು ಬಹುತೇಕರಿಗೆ ತಿಳಿದೇ ಇಲ್ಲ. ಯಾವುದೇ ವಿಶೇಷ ಸಂದರ್ಭದಲ್ಲಿ ನೀತಾ ಅವರು ಯಾವ ಉಡುಪನ್ನು ಧರಿಸಬೇಕು ಎಂಬುದನ್ನು ನಿರ್ಧರಿಸುವುದು ಈ ವಸ್ತ್ರ ವಿನ್ಯಾಸಗಾರ್ತಿಯ ಕೆಲಸವಾಗಿದೆ.

ಹಾಗಾದರೆ, ಆ ವಸ್ತ್ರ ವಿನ್ಯಾಸಗಾರ್ತಿ ಯಾರು ಅಂತಿರಾ… ಆಕೆಯೇ ಮಲಯಾಳಂ ಹುಡುಗಿ. ಹೆಸರು ಸ್ವಾತಿ ಅಂತಾ. ಮಲಯಾಳಂ ನಟ ಕುಂಚನ್​ ಅವರ ಮಗಳಾಗಿರುವ ಸ್ವಾತಿ, ನೀತಾ ಅಂಬಾನಿ ಅವರ ನೆಚ್ಚಿನ ಪರ್ಸನಲ್​ ಸ್ಟೈಲಿಸ್ಟ್​ ಆಗಿದ್ದಾರೆ. ಬಾಲ್ಯದಲ್ಲೇ ಚಿತ್ರಕಲೆಯ ಮೇಲಿನ ಆಸಕ್ತಿ ಸ್ವಾತಿ ಅವರನ್ನು ಫ್ಯಾಶನ್​ ಲೋಕಕ್ಕೆ ಎಳೆದು ತಂದಿದೆ.

ಅಲ್ಲದೆ, ಬಾಲ್ಯದಲ್ಲೇ ಸ್ವಾತಿ ಅವರು ಇತರರನ್ನು ಸುಂದರವಾಗಿ ತೋರಿಸಲು ತುಂಬಾ ಆಸಕ್ತಿ ಹೊಂದಿದ್ದರು. ಇದೇ ಆಸಕ್ತಿಯು ಆಕೆಯನ್ನು ಪಿಯುಸಿ ನಂತರ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಗೆ ಸೇರುವಂತೆ ಮಾಡಿತು. ಕೋರ್ಸ್​ ಪೂರ್ಣಗೊಳಿಸಿದ ಬಳಿಕ ಸ್ವಾತಿ ಅವರು ಫ್ಯಾಶನ್​ ಡಿಸೈನರ್​ ಆಗಿ ಫೆಮಿನಾಗೆ ಸೇರಿದರು.

ನೀತಾ ಅಂಬಾನಿ ಯಾವ ಉಡುಗೆ ತೊಡಬೇಕೆಂದು ನಿರ್ಧರಿಸುವುದು ಇವರೇ ನೋಡಿ...

ಪ್ರಪಂಚದಾದ್ಯಂತ ಇರುವ ಡಿಸೈನರ್‌ಗಳು ತಾವು ತಯಾರಿಸಿದ ಅತ್ಯಾಧುನಿಕ ಉಡುಪುಗಳಲ್ಲಿ ಯಾವುದನ್ನು ನೀತಾ ಅವರಿಗೆ ಆಯ್ಕೆ ಮಾಡಬೇಕೆಂದು ಸ್ವಾತಿ ಅವರು ನಿರ್ಧರಿಸುತ್ತಾರೆ. ಬಳಿಕ ತಮ್ಮ ಐಡಿಯಾಗಳನ್ನು ಸೇರಿಸಿ ಅಂತಿಮ ವಿನ್ಯಾಸವನ್ನು ನಿರ್ಧರಿಸುತ್ತಾರೆ. ಅಂದಹಾಗೆ ಸ್ವಾತಿ ಅವರು ಮುಂಬೈನಲ್ಲಿರುವ ಅಂಬಾನಿ ಒಡೆತನದ ಗೆಸ್ಟ್​ಹೌಸ್​ನಲ್ಲಿ ಉಳಿದುಕೊಂಡಿದ್ದಾರೆ. (ಏಜೆನ್ಸೀಸ್​)

blank

ಅಕ್ರಮ ಸಂಬಂಧ ಮುಂದುವರಿಸಲು ಪತಿಯ ವಿರುದ್ಧ ಸಂಚು ರೂಪಸಿದ ಪತ್ನಿಗೆ ಮರುಕ್ಷಣದಲ್ಲೇ ಬಿಗ್​ ಶಾಕ್​!

ಪತ್ನಿ ನಾಪತ್ತೆ, ಗಂಡನ ಫೇಸ್​ಬುಕ್​ನಲ್ಲಿ ಶ್ರದ್ಧಾಂಜಲಿ ಪೋಸ್ಟ್​! ಅಬ್ಬಬ್ಬಾ ದೊಡ್ಡಬಳ್ಳಾಪುರದಲ್ಲಿ ಇದೆಂಥಾ ಹೈಡ್ರಾಮ?

ಕೇಳುವವರು ಕೇಳುತ್ತಾರೆ….ಪಾತ್ರಕ್ಕಾಗಿ ಪಲ್ಲಂಗದ ಬಗ್ಗೆ ಶಾಕಿಂಗ್​ ಕಾಮೆಂಟ್​ ಮಾಡಿದ ನಟಿ ಸ್ನೇಹಾ ಶರ್ಮಾ!

Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…