More

    ನಿರಂತರ ಮಳೆಯಿಂದ ಬೇಸತ್ತ ಜನತೆಗೆ ಗುಡ್​ನ್ಯೂಸ್​: ಬದಲಾದ ಹವಾಮಾನ ಹಿನ್ನೆಲೆ ಸೈಕ್ಲೋನ್ ಇಲ್ಲ

    ಬೆಂಗಳೂರು: ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿಯು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ 3 ದಿನ ಮಳೆ ಪ್ರಮಾಣ ಕುಂಠಿತವಾಗಲಿದೆ. ಸದ್ಯ ತೇವಾಂಶ ಭರಿತ ಮೋಡಗಳು ಇರುವ ಕಾರಣದಿಂದ ಕೆಲ ಭಾಗಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

    ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಬಂಗಾಳಕೊಲ್ಲಿಯಲ್ಲಿ ಸದ್ಯ ಮೇಲ್ಮೈ ಸುಳಿಗಾಳಿ ಇದೆ. ಆದರೆ, ಬುಧವಾರ(ನ.24) ವಾಯುಭಾರ ಕುಸಿತವಾಗಲಿದ್ದು, ಇದರ ಪರಿಣಾಮದಿಂದ ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನ.27ರಿಂದ ನ.30ರವರೆಗೆ ಮಳೆಯಾಗಲಿದೆ. ಚೆನ್ನೈನ ಉತ್ತರ ದಿಕ್ಕಿನಲ್ಲಿ ವಾಯುಭಾರ ಕುಸಿತವಾದರೆ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗುತ್ತದೆ. ಆದರೆ, ಈಗ ಚೆನ್ನೈ ದಕ್ಷಿಣ ದಿಕ್ಕಿನಲ್ಲಿ ವಾಯುಭಾರ ಕುಸಿತವಾಗಲಿರುವ ಹಿನ್ನೆಲೆಯಲ್ಲಿ ಕೇರಳಕ್ಕೆ ಹೆಚ್ಚು ಮಳೆಯಾಗಲಿದೆ ಎಂದರು.

    ನಾಲ್ಕೈದು ದಿನಗಳ ಹಿಂದೆ ಸೈಕ್ಲೋನ್ ರೂಪುಗೊಳ್ಳುವ ಸಾಧ್ಯತೆಯಿತ್ತು. ಆದರೆ, ಬದಲಾದ ಹವಾಮಾನ ಹಾಗೂ ಶ್ರೀಲಂಕಾ ಸಮೀಪದಲ್ಲಿ ವಾಯುಭಾರ ಕುಸಿತವಾಗಲಿರುವ ಹಿನ್ನೆಲೆಯಲ್ಲಿ ಸದ್ಯ ಸೈಕ್ಲೋನ್ ರೂಪುಗೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಬರೀ ವಾಯುಭಾರ ಕುಸಿತವಾಗಲಿದೆ. ಇದರಿಂದ ದಕ್ಷಿಣ ಒಳನಾಡನಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅಷ್ಟೇನೂ ಮಳೆ ಇರುವುದಿಲ್ಲ ಎಂದರು.

    ದುನಿಯಾ ವಿಜಯ್​ ಬಾರದಿದ್ದಲ್ಲಿ ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಹಠ ಹಿಡಿದ ಮದುಮಗಳು!

    ಇಂದಿರಾ ಗಾಂಧಿ ವಿರುದ್ಧ ಕಣಕ್ಕಿಳಿಸಲು ನಡೆದಿತ್ತು ಭಾರೀ ಕಸರತ್ತು: ರಾಜ್​ಗಾಗಿ ಬೆಂಗ್ಳೂರನ್ನೇ ಜಾಲಾಡಿದ್ರು!

    ಮುದ್ದೇನಹಳ್ಳಿ ಸರಳಾ ಆಸ್ಪತ್ರೆಯಲ್ಲಿ ಉಚಿತ ಸೇವೆ : 23 ಮಕ್ಕಳಿಗೆ ಯಶಸ್ವಿ ಶಸಚಿಕಿತ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts