More

    ಮುದ್ದೇನಹಳ್ಳಿ ಸರಳಾ ಆಸ್ಪತ್ರೆಯಲ್ಲಿ ಉಚಿತ ಸೇವೆ : 23 ಮಕ್ಕಳಿಗೆ ಯಶಸ್ವಿ ಶಸಚಿಕಿತ್ಸೆ

    ಚಿಕ್ಕಬಳ್ಳಾಪುರ: ಭಗವಾನ್ ಶ್ರೀ ಸತ್ಯಸಾಯಿ ಬಾಬಾರ 96ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ತಾಲೂಕಿನ ಮುದ್ದೇನಹಳ್ಳಿಯಲ್ಲಿರುವ ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಯಲ್ಲಿ ಒಳರೋಗಿಗಳ ಉಚಿತ ಆರೋಗ್ಯ ಸೇವೆ ಪ್ರಾರಂಭವಾಗಿದೆ.

    ಆ.27ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದರು. ಅಂದಿನಿಂದಲೇ ಪ್ರಾಯೋಗಿಕವಾಗಿ ಆಸ್ಪತ್ರೆಯ ವೈದ್ಯಕೀಯ ಸೇವೆಗಳು, ಪ್ರಾಥಮಿಕ ಹೊರರೋಗಿ ಕೇಂದ್ರವಾಗಿ ಕಾರ್ಯಾರಂಭ ಮಾಡಿದ್ದು ನ.15 ರಿಂದ ಅರ್ಹ ಮಕ್ಕಳ ಹೃದಯ ಶಸಚಿಕಿತ್ಸೆಗಳಿಗೆ ಚಾಲನೆ ನೀಡಲಾಗಿದೆ. ನ.23 ರಂದು ಸತ್ಯಸಾಯಿ ಬಾಬಾರ ಜನ್ಮದಿನದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ನೆರೆ ಜಿಲ್ಲೆಗಳ 23 ಮಕ್ಕಳಿಗೆ ಯಶಸ್ವಿಯಾಗಿ ಶಸಚಿಕಿತ್ಸೆಗಳನ್ನು ನೆರವೇರಿಸಲಾಗಿದೆ.

    ಒಳರೋಗಿ ಸೇವೆಗಳ ಪ್ರಾರಂಭದೊಂದಿಗೆ ಈಗ ಪ್ರಸೂತಿ ಮತ್ತು ಸೀರೋಗ ಶಾಸ, ಇಎನ್‌ಟಿ, ದಂತವೈದ್ಯಶಾಸ ಮತ್ತು ಸಾಮಾನ್ಯ ಶಸಚಿಕಿತ್ಸೆಯಂತಹ ಇತರ ವಿಶೇಷ ಸೇವೆ ಒದಗಿಸುತ್ತಿದ್ದು ಜಿಲ್ಲೆ ಮಾತ್ರವಲ್ಲದೇ ಸುತ್ತಲಿನ ಜಿಲ್ಲೆಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗುವಂತಾಗಿದೆ. ಪ್ರಾರಂಭವಾದಲ್ಲಿ ನಿಗದಿತ ದಿನದಂದು ಜನರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಕೈಗೊಳ್ಳಲಿದ್ದು ಹಂತ ಹಂತವಾಗಿ ಜನರಿಗೆ ಪೂರ್ಣ ಪ್ರಮಾಣದಲ್ಲಿ ಸೇವೆ ಸಿಗಲಿದೆ.

    ಆರೋಗ್ಯ ಉಚಿತ ಸೇವೆ: ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತ. ರೋಗಿಗಳಿಂದ ಯಾವುದೇ ರೀತಿಯ ಶುಲ್ಕವನ್ನು ಸಂಗ್ರಹಿಸುವುದಿಲ್ಲ. ಬಹು ವಿಶೇಷ ಸವಲತ್ತುಗಳಿದ್ದು, ಬಾಬಾರ ಭಕ್ತೆ ದಿವಂಗತ ಸರಳಾ ಇಂದುಲಾಲ್ ಷಾ ಆಸ್ಪತ್ರೆಯನ್ನು ಕೊಡುಗೆಯಾಗಿ ನೀಡಿದ್ದು ‘ಸರಳಾ ಸ್ಮಾರಕ ಆಸ್ಪತ್ರೆ’ ಎಂಬ ಹೆಸರಿನ್ನಿಡಲಾಗಿದೆ. 2018 ರಿಂದ ಆಸ್ಪತ್ರೆಯು ಜನರಲ್ ಮೆಡಿಸಿನ್, ಪೀಡಿಯಾಟ್ರಿಕ್ಸ್, ಪ್ರಸೂತಿ ಮತ್ತು ಸೀರೋಗ ಶಾಸ, ಇಎನ್‌ಟಿ, ಡೆೆಂಟಿಸ್ಟ್ರಿ, ಪೆಥಾಲಜಿ ಸೇರಿ ವಿವಿಧ ವಿಭಾಗಗಳ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಕಮ್ಯುನಿಟಿ ಮೆಡಿಸಿನ್ ಮತ್ತು ಫಿಸಿಯೋಥೆರಪಿ, ಎಂಡೋಕ್ರೈನಾಲಜಿ, ಕಾರ್ಡಿಯಾಲಜಿ, ನ್ಯೂರಾಲಜಿ, ಫೀಟಲ್ ಮೆಡಿಸಿನ್, ಡರ್ಮಟಾಲಜಿ, ಪ್ಲ್ಯಾಸ್ಟಿಕ್ ಸರ್ಜರಿ, ಪೋಡಿಯಾಟ್ರಿ, ರೇಡಿಯಾಲಜಿ ಮತ್ತು ಆರ್ಥೋಪೆಡಿಕ್ಸ್ ವಿಶೇಷ ಸೇವೆಗಳನ್ನು ಒದಗಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts