More

    ಸರ್ಕಾರದ ಹಿಡಿತದಿಂದ ದೇವಸ್ಥಾನಗಳು ಮುಕ್ತ: ಸಿಎಂ ಹೇಳಿಕೆಗೆ ಕಾಶೀ ಜಗದ್ಗುರುಗಳ ಸ್ವಾಗತ

    ಶಿವಮೊಗ್ಗ: ಬಹುಸಂಖ್ಯಾತ ಹಿಂದೂಗಳ ಬಹುದಿನಗಳ ಬೇಡಿಕೆಯಾಗಿದ್ದ ಹಿಂದೂ ಧಾರ್ಮಿಕ ಸಂಸ್ಥೆಗಳ ಮೇಲಿನ ಸರ್ಕಾರದ ಹಿಡಿತವನ್ನು ಮುಕ್ತಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿರುವುದನ್ನು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸ್ವಾಗತಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂತಹ ಐತಿಹಾಸಿಕ ಹೇಳಿಕೆ ನೀಡಿದ್ದು, ಹಿಂದೂ ಧಾರ್ಮಿಕ ಸಂಸ್ಥೆಗಳ ಪಾಲಿಗೆ ಇದು ಐತಿಹಾಸಿಕ ನಿರ್ಣಯವಾಗಲಿದೆ ಎಂದು ಕಾಶೀ ಜಗದ್ಗುರುಗಳು ಬಣ್ಣಿಸಿದ್ದಾರೆ.

    ಪ್ರಾಚೀನ ಕಾಲದಿಂದ ಬಂದಿರುವ ದೇವಾಲಯಗಳು ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ. ಸರ್ಕಾರ ಈ ಬಗ್ಗೆ ಚಿಂತನೆ ಆರಂಭಿಸಿದ್ದು, ದೇವಸ್ಥಾನಗಳ ಆಡಳಿತದಲ್ಲಿ ಹಸ್ತಕ್ಷೇಪ ಸರಿಯಲ್ಲ ಎಂಬುದು ಮನವರಿಕೆಯಾಗಿದ್ದು, ಕೂಡಲೇ ಸರ್ಕಾರ ಆ ನಿಟ್ಟಿನಲ್ಲಿ ನಿರ್ಣಯವನ್ನು ತೆಗೆದುಕೊಳ್ಳುವಂತೆ ಜಗದ್ಗುರುಗಳು ಆಗ್ರಹಿಸಿದ್ದಾರೆ.

    Koo App

    ನಮ್ಮ ದೇವಾಲಯಗಳನ್ನು ಕಾನೂನು ಕಟ್ಟಳೆಗಳಿಂದ ಮುಕ್ತಗೊಳಿಸಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಮುಂಬರುವ ಬಜೆಟ್ ಅಧಿವೇಶನದ ಒಳಗಾಗಿ ಮುಖ್ಯಮಂತ್ರಿ @bsbommai ಅವರ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗುವುದು. ದೇವಾಲಯಗಳ ಅಭಿವೃದ್ಧಿಯ ಜತೆ ಅವುಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ.

    Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 30 Dec 2021

    ಸರ್ಕಾರದ ಹಿಡಿತದಿಂದ ದೇವಸ್ಥಾನಗಳು ಮುಕ್ತ: ಸಿಎಂ ಹೇಳಿಕೆಗೆ ಕಾಶೀ ಜಗದ್ಗುರುಗಳ ಸ್ವಾಗತ

    ಇಟಲಿಗೆ ಹಾರಿದ ರಾಹುಲ್‌ ಗಾಂಧಿ: ಪ್ಲೀಸ್‌… ಪ್ಲೀಸ್‌… ಜನರಲ್ಲಿ ಕೈಮುಗಿದು ಹೀಗೆ ಬೇಡಿಕೊಂಡ್ರು ಕಾಂಗ್ರೆಸ್‌ ವಕ್ತಾರ!

    ಸ್ಟಾರ್​ ನಟ-ನಟಿಯರನ್ನೇ ಹಿಂದಿಕ್ಕಿದ ರಾಮ್​ಚರಣ್​ ಪತ್ನಿ ಉಪಾಸನ: ಟಾಲಿವುಡ್​ನಲ್ಲೇ ಇದು ಮೊದಲು!

    ಮೂರನೇ ಅಲೆ ಹೊಸ್ತಿಲಲ್ಲಿ ಭಾರತ: ದೇಶದಲ್ಲಿ ಕರೊನಾ ದೈನಂದಿನ ಕೇಸ್ ಶೇ.44 ಹೆಚ್ಚಳ; ರಾಜ್ಯದಲ್ಲೂ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts