More

    ಮಿಚೆಲ್​ ಜಾನ್ಸನ್​ ತಂಗಿದ್ದ ಲಖನೌ ಹೋಟೆಲ್​ ರೂಮ್​ಗೆ ಹಾವು ಎಂಟ್ರಿ! ಆಸಿಸ್​ ಮಾಜಿ ವೇಗಿ ಹೇಳಿದ್ದಿಷ್ಟು…

    ಲಖನೌ: ಭಾರತದಲ್ಲಿ ಹಿರಿಯರ ಟಿ20 ಲೀಗ್​ ನಡೆಯುತ್ತಿದ್ದು, ವಿವಿಧ ದೇಶದ ಮಾಜಿ ಆಟಗಾರರು ಲೀಗ್​ನಲ್ಲಿ ಪಾಲ್ಗೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಬೌಲರ್​ ಮಿಚೆಲ್​ ಜಾನ್ಸನ್​ ಸಹ ಲೀಗ್​ನಲ್ಲಿ ಭಾಗವಹಿಸಿದ್ದು, ಸೋಮವಾರ ಉತ್ತರ ಪ್ರದೇಶದ ರಾಜಧಾನಿ ಲಖನೌದ ಹೋಟೆಲ್​ ಒಂದರಲ್ಲಿ ಉಳಿದುಕೊಂಡಿದ್ದಾಗ ಅಪರೂಪದ ಅತಿಥಿಯನ್ನು ಭೇಟಿ ಮಾಡಿದ್ದಾಗಿ ಜಾನ್ಸನ್​, ಇನ್​ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.

    ಹೌದು, ಜಾನ್ಸನ್​ ಅವರಿದ್ದ ಹೋಟೆಲ್​ಗೆ ಹಾವೊಂದು ಪ್ರವೇಶ ಪಡೆದಿದೆ. ಇದಕ್ಕೆ ಸಂಬಂಧಿಸಿದ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿರುವ ಜಾನ್ಸನ್​, ಹಾವು ಯಾವುದೆಂದು ಪತ್ತೆಹಚ್ಚಲು ಸಹಾಯ ಮಾಡುವಂತೆ ಅಭಿಮಾನಿಗಳನ್ನು ಕೋರಿದ್ದಾರೆ.

    ಇದು ಯಾವ ಬಗೆಯ ಹಾವು ಎಂದು ಯಾರಿಗಾದರೂ ಗೊತ್ತಿದೆಯೇ? ಈಗಷ್ಟ ತಾನೇ ನನ್ನ ಕೋಣೆಯ ಬಾಗಿಲ ಮೇಲೆ ನೇತಾಡುತ್ತಿತ್ತು ಎಂದು ಇನ್​ಸ್ಟಾಗ್ರಾಂ ಪೋಸ್ಟ್​ಗೆ ಅಡಿಬರಹ ನೀಡಿದ್ದಾರೆ. ಅಲ್ಲದೆ, ಮತ್ತೊಂದು ಫೋಟೋ ಅಪ್​ಲೋಡ್​ ಮಾಡಿ, ಹಾವಿನ ತಲೆ ಕಾಣುವ ಉತ್ತಮ ಚಿತ್ರವನ್ನು ಪಡೆದೆ. ಏನಿದು ಎಂದು ಈ ಕ್ಷಣದವರೆಗೂ ಖಚಿತವಾಗಿಲ್ಲ. ಲಖನೌದಲ್ಲಿರುವುದು ಆಸಕ್ತಿದಾಯಕವಾಗಿದೆ ಎಂದು ಬರೆದುಕೊಂಡಿದ್ದಾರೆ.

    ಅಂದಹಾಗೆ ಹಿರಿಯ ಆಟಗಾರರನ್ನು ಒಳಗೊಂಡ ಲೆಜೆಂಡ್ಸ್​ ಲೀಗ್​ ಕ್ರಿಕೆಟ್​ನಲ್ಲಿ ಜಾನ್ಸನ್​ ಅವರು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಕಸ್​ ಕಾಲೀಸ್​ ನೇತೃತ್ವದ ಇಂಡಿಯಾ ಕ್ಯಾಪಿಟಲ್ಸ್​ ತಂಡವನ್ನು ಪ್ರತಿನಿಧಿಸಿದ್ದಾರೆ.

    ಜಾನ್ಸನ್ ಅವರು 2015 ರಲ್ಲಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. 73 ಟೆಸ್ಟ್​ ಪಂದ್ಯಗಲ್ಲಿ 313 ವಿಕೆಟ್​ ಮತ್ತು 153 ಏಕದಿನ ಪಂದ್ಯಗಳಲ್ಲಿ 239 ವಿಕೆಟ್​ ಪಡೆದಿದ್ದಾರೆ. (ಏಜೆನ್ಸೀಸ್​)

    ಲಿಫ್ಟ್​ ನೀಡಿದ ಬೈಕ್​ ಸವಾರನಿಗೆ ಇಂಜೆಕ್ಷನ್​ ಚುಚ್ಚಿ ಕೊಲೆ: ಪತ್ನಿಯ ಫೋನ್​ಕಾಲ್​ನಲ್ಲಿತ್ತು ಭಯಾನಕ ರಹಸ್ಯ…

    ನಾಳೆ ಕಾಂಗ್ರೆಸ್​ನ ಎಲ್ಲ ಶಾಸಕರು ಸೇರಿ ಸರ್ಕಾರಿ ಕಟ್ಟಡಗಳ ಮೇಲೆ ‘PAYCM’ ಪೋಸ್ಟರ್​ ಅಂಟಿಸ್ತೀವಿ: ಡಿಕೆಶಿ

    ಅಯ್ಯೋ ಪಾಪ ಅನನ್ಯಾಗೆ ಹೀಗಾಗಬಾರದಿತ್ತು! ಬಾಲಿವುಡ್​ ಬ್ಯೂಟಿಯ ಪ್ಲಾನ್​ಗಳನ್ನೇ ಬುಡಮೇಲು ಮಾಡಿದ ಲೈಗರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts