More

    ಮೋದಿಜೀ 19 ವರ್ಷ ಎಲ್ಲವನ್ನೂ ಮೌನವಾಗೇ ಸಹಿಸಿಕೊಂಡ್ರು: ಗುಜರಾತ್​ ಗಲಭೆ ತೀರ್ಪಿನ ಬಗ್ಗೆ ಅಮಿತ್​ ಷಾ ಮಾತು

    ನವದೆಹಲಿ: ಗುಜರಾತ್​​ ಗಲಭೆ ಪ್ರಕರಣದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿದ ಸುಳ್ಳು ಆರೋಪಗಳಿಂದ ಅವರೆಷ್ಟು ನೊಂದಿದ್ದಾರೆ ಎಂಬುದನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಶನಿವಾರ ಹೇಳಿದರು.

    ಪ್ರಧಾನಿ ಮೋದಿ ಅವರು ದೊಡ್ಡ ನಾಯಕರಾಗಿದ್ದರೂ ಈ ಪ್ರಕರಣ ಸಂಬಂಧ ಒಂದೇ ಒಂದೂ ಮಾತನ್ನೂ ಆಡಲಿಲ್ಲ. ಆದರೆ, ಇಂದು ಸತ್ಯ ಏನೆಂಬುದು ಹೊರ ಬಂದಿದೆ. ಈ ಪ್ರಕರಣದಲ್ಲಿ ಕೇಳಿಬಂದ ಸುಳ್ಳು ಆರೋಪಗಳಿಂದ ಪ್ರಧಾನಿ ಮೋದಿ ನೊಂದುಕೊಂಡಿರುವುದನ್ನು ನಾನು ನೋಡಿದ್ದೇನೆ. ತುಂಬಾ ಗಟ್ಟಿಮುಟ್ಟಾದ ವ್ಯಕ್ತಿ ತುಂಬಾ ನೋವನ್ನು ಸಹಿಸಬಲ್ಲ. ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿರುವಾಗ ಪ್ರಧಾನಿ ಮೋದಿ ಒಮ್ಮೆಯೂ ಮಧ್ಯ ಪ್ರವೇಶಿಸಲಿಲ್ಲ ಎಂದು ಹೇಳಿದರು.

    ಈ ಪ್ರಕರಣದಿಂದ ಬಿಜೆಪಿಯ ಇಮೇಜ್‌ಗೆ ಧಕ್ಕೆ ಬಂದಿತ್ತು. ಆದರೆ ಈಗ ಅದನ್ನು ತೆಗೆದುಹಾಕಲಾಗಿದೆ. ಗಲಭೆಗಳ ಸಮಯದಲ್ಲಿ ಗುಜರಾತ್ ಸರ್ಕಾರವು ಕ್ರಮ ತೆಗೆದುಕೊಳ್ಳುವುದರಲ್ಲಿ ವಿಳಂಬ ಮಾಡಲಿಲ್ಲ. ಆದರೆ, ದೆಹಲಿಯಲ್ಲಿ ಹಲವಾರು ಸಿಖ್​ರನ್ನು ಕೊಲ್ಲಲಾಯಿತು. ಆದರೂ ಯಾವುದೇ ಬಂಧನಗಳನ್ನು ಮಾಡಲಿಲ್ಲ? ಕೆಲವರು ಹೇಗೆ ಪಕ್ಷಪಾತದ ಆರೋಪ ಮಾಡುತ್ತಿದ್ದಾರೆ ನೋಡಿ ಎಂದು ಅಮಿತ್​ ಷಾ ಪರೋಕ್ಷವಾಗಿ ಕಾಂಗ್ರೆಸ್​ಗೆ ಮಾತಿನ ಚಾಟಿ ಬೀಸಿದರು.

    ಗುಜರಾತ್​ ಗಲಭೆ ಪ್ರಕರಣ ಸಂಬಂಧ ಹೈಕೋರ್ಟ್​ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್​, ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ (ಜೂನ್​ 24) ಕ್ಲೀನ್​ ಚಿಟ್​ ನೀಡಿದೆ.

    ಗುಜರಾತ್​ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿ ಮತ್ತು ಹಾಲಿ ಪ್ರಧಾನಿ ಮೋದಿ ಸೇರಿದಂತೆ 63 ಮಂದಿಯ ಪಾತ್ರವಿದೆ ಎಂದು ಆರೋಪಿಸಲಾಗಿತ್ತು. ಘಟನೆ ಸಂಬಂಧ ವಿಶೇಷ ತನಿಖಾ ತಂಡವು ತನಿಖೆ ನಡೆಸಿ ಮೋದಿ ಅವರಿಗೆ ಕ್ಲೀನ್​ ಚಿಟ್​ ನೀಡಿತ್ತು. ಇದನ್ನು ಪ್ರಶ್ನಿಸಿ, ಗಲಭೆಯಲ್ಲಿ ಮೃತಪಟ್ಟಿದ್ದ ಕಾಂಗ್ರೆಸ್​ ನಾಯಕ ಎಹ್ಸಾನ್ ಜಾಫ್ರಿ ಪತ್ನಿ ಜಾಕಿಯಾ ಜಫ್ರಿ ಗುಜರಾತ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್​ ಅರ್ಜಿಯನ್ನು ತಿರಸ್ಕರಿಸಿ, ಎಸ್​ಐಟಿ ತನಿಖಾ ವರದಿಯನ್ನು ಎತ್ತಿಹಿಡಿದಿತ್ತು. ಹೈಕೋರ್ಟ್ ಅರ್ಜಿ ತಿರಸ್ಕರಿಸಿದ ಬಳಿಕ​ ಆದೇಶವನ್ನು ಪ್ರಶ್ನಿಸಿ ಜಾಕಿಯಾ ಅವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಜೂನ್​ 24ರಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್​, ಜಾಕಿಯಾ ಅವರ ಅರ್ಜಿಯನ್ನು ತಿರಸ್ಕರಿಸಿದೆ ಮತ್ತು ಪ್ರಧಾನಿ ಮೋದಿ ಅವರಿಗೆ ಗುಜರಾತ್​ ಗಲಭೆ ಪ್ರಕರಣದಲ್ಲಿ ಕ್ಲೀನ್​ ಚಿಟ್​ ನೀಡಿದೆ.

    2002 ರಲ್ಲಿ ಗುಜರಾತ್‌ನಲ್ಲಿ ನಡೆದ ಮೂರು ದಿನಗಳ ಹಿಂಸಾಚಾರದಲ್ಲಿ 1,000 ಕ್ಕೂ ಹೆಚ್ಚು ಜನರು ಅದರಲ್ಲೂ ಹೆಚ್ಚಾಗಿ ಮುಸ್ಲಿಮರು ಕೊಲ್ಲಲ್ಪಟ್ಟರು. 2002ರ ಫೆಬ್ರವರಿ 28 ರಂದು ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಎಹ್ಸಾನ್ ಜಾಫ್ರಿ ಕೊಲ್ಲಲ್ಪಟ್ಟರು. (ಏಜೆನ್ಸೀಸ್​)

    ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಕ್ರಯ ಪತ್ರ ಹಸ್ತಾಂತರಿಸಿದ ಸಿಎಂ ಬಸವರಾಜ ಬೊಮ್ಮಾಯಿ

    ಹುಟ್ಟೂರಿನ ಸುಧಾರಣೆಗೆ ಮುಂದಾದ ನಟ ಅನಿರುದ್ಧ: ತನ್ನದೇಯಾದ ಕೆಲ ಸುಧಾರಣೆ ಪಟ್ಟಿ ತಯಾರಿ

    ಎಸ್ಸೆಸ್ಸೆಲ್ಸಿ ಪಾಸ್​ ಆಗಲ್ಲ ಎಂದು ಗೇಲಿ ಮಾಡಿದವರಿಗೆ ಈ ಹುಡುಗ ಕೊಟ್ಟ ತಿರುಗೇಟು ಹೇಗಿದೆ ನೋಡಿ!

    VIDEO| ಜೀವದ ಹಂಗು ತೊರೆದು ವ್ಯಕ್ತಿಯ ಪ್ರಾಣ ಉಳಿಸಿದ ರೈಲ್ವೆ ಸಿಬ್ಬಂದಿ: ಮೆಚ್ಚುಗೆಯ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts